Categories
ತೀರ್ಥಹಳ್ಳಿ

ತೀರ್ಥಹಳ್ಳಿ: ದೀಪಾವಳಿ ಹಬ್ಬದ ಸಂಭ್ರಮ ಶುರು..!

ತೀರ್ಥಹಳ್ಳಿ: ದೀಪಾವಳಿ ಹಬ್ಬದ ಸಂಭ್ರಮ ಶುರು..!
– ಬೆಲೆ ಏರಿಕೆಯ ನಡುವೆ ಗ್ರಾಹಕರ ಖರೀದಿ ಜೋರು
– ಪ್ರತಿ ಅಂಗಡಿ, ಮನೆಗಳಲ್ಲಿ ಹಬ್ಬದ ಸಿದ್ಧತೆ

NAMMUR EXPRESS NEWS
ತೀರ್ಥಹಳ್ಳಿ: ಬೆಳಕಿನ ಹಬ್ಬ ದೀಪಾವಳಿಗೆ ಎಲ್ಲೆಡೆ ಸಂಭ್ರಮ-ಸಡಗರ ಮನೆ ಮಾಡಿದೆ. ತೀರ್ಥಹಳ್ಳಿ ಪಟ್ಟಣವೆಲ್ಲ ಜನರಿಂದ ತುಂಬಿ ತುಳುಕುತ್ತಿವೆ. ವ್ಯಾಪಾರ-ವಹಿವಾಟು ಇದೀಗ ಹಬ್ಬದ ಸಂಭ್ರಮದಲ್ಲಿ ಚುರುಕು ಪಡೆದುಕೊಳ್ಳುತ್ತಿವೆ. ಹೂವು, ಹಣ್ಣು, ದೀಪ ಸೇರಿದಂತೆ ಅಲಂಕಾರಿಕ ಹಾಗೂ ಅಗತ್ಯವಸ್ತುಗಳ ಖರೀದಿ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ.

ಹೆಚ್ಚಿದ ಸಂಚಾರ ದಟ್ಟಣೆ

ದೀಪಾವಳಿ ಹಬ್ಬದ ನಿಮಿತ್ತ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಭಾನುವಾರ,ಸೋಮವಾರ ಹಬ್ಬವಿರುವುದರಿಂದ ಹಾಗೂ ಭಾನುವಾರ ಅಂಗಡಿ ಪೂಜೆಗಳಿರುವುದರಿಂದ ಎಲ್ಲೆಡೆ ಖರೀದಿಸಲು ಜನರು ಆಗಮಿಸುತ್ತಿರುವುದರಿಂದ ಪಟ್ಟಣ ಜನರಿಂದ ತುಂಬಿ ತುಳುಕುತ್ತಿದೆ. ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿದ್ದು ಸಂಚಾರದಟ್ಟನೆ ಹೆಚ್ಚಾಗಿದೆ.

ಬೆಲೆ ಏರಿಕೆಯ ಬಿಸಿ!

ಎಲ್ಲೆಡೆ ಬೆಲೆ ಏರಿಕೆ ಬಿಸಿ ಕಾಡುತ್ತಿದೆ. ಹೂವಿನಿಂದ ಹಿಡಿದು ಹಣ್ಣು-ಅಲಂಕಾರಿಕ ವಸ್ತುಗಳು, ತರಕಾರಿ ಸೇರಿದಂತೆ ಎಲ್ಲದರ ದರದಲ್ಲಿ ಏರಿಕೆ ಕಂಡಿದ್ದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ. ಆದರೂ ಕೂಡ ಜನರು ಸಂಭ್ರಮದಿಂದ ಹಬ್ಬಕ್ಕೆ ಖರೀದಿಸುತ್ತಿರುವುದು ಕಂಡುಬರುತ್ತಿದೆ.

ಬಟ್ಟೆ ಅಂಗಡಿಗಳಿಗೆ ಡಿಮ್ಯಾಂಡ್

ದೀಪಾವಳಿ ಹಬ್ಬದಂದು ಹೊಸ ಬಟ್ಟೆ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ತೀರ್ಥಹಳ್ಳಿಯ ಪ್ರಮುಖ ಬಟ್ಟೆ ಅಂಗಡಿಗಳಲ್ಲಿ ಜನ ಕಂಡು ಬಂತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.