ತೀರ್ಥಹಳ್ಳಿಯಲ್ಲಿ ಡಿಕೆ ಶಿವಕುಮಾರ್ ಕಪ್ ಸೀಸನ್ – 02
– ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ
– ಫೆ.23,24,25ರಂದು ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿ ಆಯೋಜನೆ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್, ದೇಶಕ್ಕಾಗಿ ನಾವು ಸಂಘಟನೆ ತೀರ್ಥಹಳ್ಳಿ, ಸ್ನೇಹಜೀವಿ ಗೆಳೆಯರ ಬಳಗ ತೀರ್ಥಹಳ್ಳಿ ಇವರ ಜಂಟಿ ಸಹಯೋಗದಲ್ಲಿ ಫೆಬ್ರವರಿ 23,24, 25 ರಂದು ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹೆಸರಿನಲ್ಲಿ ಡಿಕೆ ಶಿವಕುಮಾರ್ ಕಪ್ ಸೀಸನ್ 2 ಚಾಂಪಿಯನ್ಸ್ ಟ್ರೋಫಿ – 2024 ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ತೀರ್ಥಹಳ್ಳಿಯ ಇತಿಹಾಸದಲ್ಲಿ 2022 ರಲ್ಲಿ ಈ ಕಪ್ ಆಯೋಜನೆ ಮಾಡಿದ್ದು ಅತ್ಯಂತ ಯಶಸ್ವಿಯಾಗಿ ನಡೆದಿತ್ತು, ಈಗ ಎರಡನೇ ಸೀಸನ್ ನಡೆಯುತ್ತಿದೆ. ರಾಷ್ಟ್ರದ್ಯಾಂತ ತಂಡಗಳು ಭಾಗವಹಿಸುತ್ತಿದೆ. ಕರ್ನಾಟಕದ ಅತ್ಯುತ್ತಮ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುವಂತಹ ತಂಡಗಳಾದ ಜಯ ಕರ್ನಾಟಕ, ಫ್ರೆಂಡ್ಸ್ ಕ್ರಿಕೆಟರ್ಸ್, ಜಾನ್ಸನ್ ಕುಂದಾಪುರ, ನ್ಯಾಶ್ ಕ್ರಿಕೆಟರ್ಸ್ ಬೆಂಗಳೂರು ಹೀಗೆ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಭಾಗವಹಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಅತ್ಯುತ್ತಮ ತಂಡಗಳು ಭಾಗವಹಿಸುತ್ತಿದ್ದಾರೆ. ಇಡೀ ತೀರ್ಥಹಳ್ಳಿ ತಾಲೂಕಿಗೆ ಮೂರು ದಿನಗಳ ಕ್ರೀಡಾಹಬ್ಬ ನಡೆಯಲಿದೆ. ಮುಖ್ಯ ಆಯೋಜಕರಾಗಿ ಅಶ್ವಲ್ ಗೌಡ, ಪೂರ್ಣೇಶ್ ಕಳಕೆರೆ, ಮದನ್ ಶೆಟ್ಟಿ, ಶ್ರೇಯಸ್ ಸಿಬಿನಕೆರೆ, ಆಸಿಫ್ ತೀರ್ಥಹಳ್ಳಿ, ಧ್ರುವ ಶಿವಮೊಗ್ಗ, ಪದ್ಮನಾಭ ಇವರೆಲ್ಲ ಸೇರಿ ತೀರ್ಥಹಳ್ಳಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್, ದೇಶಕ್ಕಾಗಿ ನಾವು ಸಂಘಟನೆ ತೀರ್ಥಹಳ್ಳಿ, ಸ್ನೇಹಜೀವಿ ಗೆಳೆಯರ ಬಳಗ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಆಯೋಜನೆ ಮಾಡಿದ್ದಾರೆ. ಹಾಗೂ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಮಾರ್ಗದರ್ಶನವನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತರರಾದ ಆದರ್ಶ ಹಂಚಿದಕಟ್ಟೆ ಅವರು ನೀಡಿದ್ದು ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡರು ಹಾಗೂ ಪಕ್ಷದ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರು, ಪಕ್ಷದ ಮುಖಂಡರು ಈ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿರುತ್ತಾರೆ. ಇಡೀ ತೀರ್ಥಹಳ್ಳಿಯ ಜನತೆ ಆಗಮಿಸಿ ಪಂದ್ಯಾವಳಿಯನ್ನು ವೀಕ್ಷಿಸಿ, ಬೆಂಬಲಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಆಯೋಜಕರು ಮನವಿ ಮಾಡಿದ್ದಾರೆ.
