ಮಧ್ಯ ರಸ್ತೆಯಲ್ಲಿ ಶಾಲಾ ಬಾಲಕಿಯೊಂದಿಗೆ ಕುಡುಕನ ಅಸಭ್ಯ ವರ್ತನೆ
– ಅತಿಯಾದ ಗಾಂಜಾ, ಮದ್ಯ ಸೇವನೆ!
– ಬೀದಿಯಲ್ಲಿ ಇಲ್ಲ ರಕ್ಷಣೆ!
NAMMUR EXPRESS NEWS
ತೀರ್ಥಹಳ್ಳಿ: ಶಾಲಾ ವಿದ್ಯಾರ್ಥಿನಿ ನಿನ್ನೆ ಶಾಲೆ ಮುಗಿಸಿಕೊಂಡು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ದಾರಿಹೋಕನೊಬ್ಬ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಸ್ಥಳೀಯರು ಅವನನ್ನು ಪೋಲೀಸರಿಗೆ ಒಪ್ಪಿಸಿದ್ದು ಪೋಲೀಸರು ಇವನನ್ನು ವಿಚಾರಿಸಿದ್ದಾರೆ. ಇತ್ತೀಚೆಗೆ ಅಂಗಡಿ ಮುಂಗಟ್ಟುಗಳ ಮುಂದೆ, ಬೀದಿ ಬದಿಯಲ್ಲಿ ಗುಂಪುಗಳು ಸೇರಿಕೊಂಡು, ಹೋಗಿ ಬರುವವರಿಗೆ ಅಸಭ್ಯ ಮಾತುಗಳನ್ನಾಡುವ ಕೆಟ್ಟ ನಡತೆ ಸಾರ್ವಜನಿಕವಾಗಿ ಅಲ್ಲಲ್ಲಿ ಕಂಡುಬರುತ್ತಿದೆ. ಈ ಹಿಂದೆಯೂ ಹೀಗೇ ಒಬ್ಬ ಅಸ್ವಸ್ಥನ ಬಗ್ಗೆ ನಮ್ಮೂರ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಆತನಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇತ್ತೀಚೆಗೆ ಮದ್ಯವ್ಯಸನಿಗಳು, ಗಾಂಜಾ ಸೇವನೆ ಹೆಚ್ಚಾಗುತ್ತಿದ್ದು ಈ ದುರ್ವರ್ತನೆ ಅತಿಯಾಗುತ್ತಿದೆ. ರಾತ್ರಿ ವೇಳೆಯಲ್ಲಿ ಈ ತರದ ಘಟನೆಗಳು ಹೆಚ್ಚಾಗಿದ್ದು ಈ ಬಗ್ಗೆ ಮಹಿಳೆಯರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಈ ಹಿಂದೆಯೂ ವರದಿ ಮಾಡಿದ್ದು ಪೋಲೀಸರು ಗಮನವಹಿಸಿಲ್ಲ. ಈಗ ತಕ್ಷಣವೇ ಈ ಬಗ್ಗೆ ಪೋಲಿಸ್ ಇಲಾಖೆ ಎಚ್ಚರಗೊಳ್ಳಬೇಕು. ಮತ್ತು ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಪೋಲೀಸರು ಈ ತಕ್ಷಣವೇ ಗಮನವಹಿಸಬೇಕಾಗಿ ನಮ್ಮೂರ್ ಎಕ್ಸ್‌ಪ್ರೆಸ್ ಕೇಳಿಕೊಳ್ಳುತ್ತಿದೆ.
