ತೀರ್ಥಹಳ್ಳಿಗೆ ಕಾರು ಕಳ್ಳರ ಎಂಟ್ರಿ?!
– ಗ್ಯಾರೇಜ್ ಅಲ್ಲಿ ನಿಲ್ಲಿಸಿದ್ದ ಕಾರು ಮಾಯ!
– ವಾಹನ ಮಾಲೀಕರೇ ಹುಷಾರ್..!
– ಬೈಕ್, ಹೆಲ್ಮೆಟ್ ಬಳಿಕ ಈಗ ಕಾರಿಗೆ ಕನ್ನ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಗ್ಯಾರೇಜಿನಲ್ಲಿ ನಿಲ್ಲಿಸಿದ್ದ ಕಾರನ್ನು ರಾತ್ರೋ ರಾತ್ರಿ ಕದ್ದುಕೊಂಡು ಹೋಗಲಾಗಿದೆ. ಆದರೆ ಯಾರು ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
KA 05-ML 7902 ಈ ನಂಬರ್ ನ ರಿಟ್ಸ್ ಕಾರು ತೀರ್ಥಹಳ್ಳಿಯ ಸೀಬಿನಕೆರೆಯ ಸುಮುಖ ಗ್ಯಾರೇಜ್ ನಿಂದ 11-00 ಗಂಟೆಗೆ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ಬಂದಿದೆ. ಪೊಲೀಸರು ಎಲ್ಲಾ ಚೆಕ್ ಪೋಸ್ಟ್, ಕೋಣಂದೂರು ಉಪ ಠಾಣೆ, ರಿಪ್ಪನ್ ಪೇಟೆ ಠಾಣೆ, ನಗರ ಠಾಣೆ ಮತ್ತು ಹೊಸನಗರ ಠಾಣೆಯ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದು ತನಿಖೆ ನಡೆಯುತ್ತಿದೆ.
ಕಳೆದ ಆರು ತಿಂಗಳ ಹಿಂದೆ ನಡೆದಿತ್ತು!
ಕಳೆದ 6 ತಿಂಗಳ ಹಿಂದೆ ತೀರ್ಥಹಳ್ಳಿ ಕುಶಾವತಿ ಬಳಿ ಗ್ಯಾರೇಜ್ ಅಲ್ಲಿ ನಿಲ್ಲಿಸಿದ್ದ 800 ಕಾರನ್ನು ಕಳ್ಳರು ಕದ್ದಿದ್ದರು. ಕುಡುಮಲ್ಲಿಗೆ ಮೂಲದ ಮಲ್ಲಿಕಾರ್ಜುನ ಎಂಬುವರ ಕಾರನ್ನು ಕಳ್ಳರು ಕದ್ದಿದ್ದರು. ಬಳಿಕ ಪೊಲೀಸರು ವಾಹನ ತಂದಿದ್ದರೂ ಕಳ್ಳರ ಹಿಡಿಯಲಿಲ್ಲ ಎಂದು ತಿಳಿದು ಬಂದಿದೆ. ಕಾರು ಉಬಳೆಬೈಲಿನಲ್ಲಿ ಪತ್ತೆಯಾಗಿತ್ತು.
ಬೈಕ್, ಹೆಲ್ಮೆಟ್ ಮಾಯ
ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಸಮೀಪ ಹಾಗೂ ಪಟ್ಟಣದ ಅನೇಕ ಕಡೆ ಬೈಕ್ ಕಳ್ಳತನ ಕೂಡ ನಡೆದಿದೆ. ಜತೆಗೆ ಹೆಲ್ಮೆಟ್ ಕಳ್ಳರು ಕೂಡ ಸಕ್ರಿಯರಾಗಿದ್ದು ಹಲವು ಹೆಲ್ಮೆಟ್ ಕದ್ದಿದ್ದಾರೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023
