ಕೈಗಾರಿಕಾ ಇಲಾಖೆಯಿಂದ ಉಪಕರಣ ವಿತರಣೆ!
– ಫಲಾನುಭವಿಗಳಿಗೆ ಉಪಕರಣ ನೀಡಿದ ಶಾಸಕರು
– ಸ್ವಂತ ಉದ್ಯಮಕ್ಕೆ ಸರ್ಕಾರದಿಂದ ಸಹಾಯ
NAMMUR EXPRESS NEWS
ತೀರ್ಥಹಳ್ಳಿ : ಸರ್ಕಾರವು ಸ್ವಂತ ಉದ್ಯಮ ಮಾಡುವವರಿಗೆ ಒಂದಿಲ್ಲೊಂದು ಅವಕಾಶಗಳನ್ನು ಒದಗಿಸುತ್ತಾ ಬಂದಿದೆ. ಹಾಗೂ ಈ ಮೂಲಕ ಸ್ವಂತ ಉದ್ಯಮ ಮಾಡುವ ಇಚ್ಛೆ ಹೊಂದಿರುವವರಿಗೆ ಸಹಕಾರಿಯಾಗುತ್ತಾ ಸ್ವಾವಲಂಬನೆಯತ್ತ ಅವರ ಬದುಕನ್ನು ಕೊಂಡೊಯ್ಯಲು ಸಹಕಾರಿಯಾಗಿದೆ. ಅದಕ್ಕಾಗಿ ಬೇಕಾಗುವ ಉಪಕರಣಗಳನ್ನು ನೀಡುವುದರ ಜೊತೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮಂಗಳವಾರ ಪಟ್ಟಣದ ಲಯನ್ಸ್ ಕ್ಲಬ್ ಆವರಣದಲ್ಲಿ ಕೈಗಾರಿಕಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಉದ್ಯಮಶೀಲತಾ ಶಿಬಿರ ಹಾಗೂ ಸುಧಾರಿತ ಉಪಕರಣ ವಿತರಣಾ ಕಾರ್ಯಕ್ರಮ ನಡೆದಿದ್ದು, 80 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಟೈಲರಿಂಗ್ ಮಿಷನ್ ಹಾಗೂ ಇತರ ಉಪಕರಣಗಳನ್ನು ನೀಡಲಾಗಿದೆ.
ಮನೆಯಲ್ಲೇ ಕುಳಿತು ಜೀವನವನ್ನು ನಡೆಸಲು ಇದು ಒಂದು ಒಳ್ಳೆಯ ಅವಕಾಶ. ಹಾಗೆಯೇ ಕಟ್ಟಡ ಕಾರ್ಮಿಕರಿಗೆ ಕಿಟ್ ಕೂಡ ನೀಡಲಾಗುತ್ತಿದೆ. ಇದರಿಂದ ಪ್ರತಿಯೊಬ್ಬರೂ ಕೂಡ ಸ್ವಂತ ಉದ್ಯಮ ಮಾಡಬಹುದು ಹಾಗೂ ಇದರ ಸದ್ಬಳಕೆ ಒಳ್ಳೆಯ ರೀತಿಯಲ್ಲಿ ಆಗಲಿ ಎಂದು ಶ್ರೀಯುತ ಆರಗ ಜ್ಞಾನೇಂದ್ರ ಅವರು ಉಪಕರಣಗಳನ್ನ ವಿತರಿಸಿ ಹಾರೈಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿ ಆದಿತ್ಯ, ನಾಗರಾಜ್, ಪ.ಪಂ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಪೃಥ್ವಿಶ್ರಮ ಕಲ್ಲುಗಣಿ ಕಾರ್ಮಿಕರ ಸಂಘ ಮೇಲಿನ ಕುರುವಳ್ಳಿ ಮಂಜುನಾಥ ಎಸ್ ಇದ್ದರು

