Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಯುರೋಕಿಡ್ಸ್, ಫ್ರೀ ಸ್ಕೂಲ್ ಉದ್ಘಾಟನೆ

ತೀರ್ಥಹಳ್ಳಿಯಲ್ಲಿ ಯುರೋಕಿಡ್ಸ್, ಫ್ರೀ ಸ್ಕೂಲ್ ಉದ್ಘಾಟನೆ
– ಡಾ. ಹುಲಿಕಲ್ ನಟರಾಜ್ ಅವರಿಂದ ಉದ್ಘಾಟನೆ
– ಚಿಕ್ಕ ಮಕ್ಕಳ ಶಿಕ್ಷಣಕ್ಕೆ ತೀರ್ಥಹಳ್ಳಿಯಲ್ಲಿ ಹೊಸ ಶಿಕ್ಷಣ ವ್ಯವಸ್ಥೆ

NAMMUR EXPRESS NEWS
ತೀರ್ಥಹಳ್ಳಿಯ ದೊಡ್ಡಮನೆ ಕೇರಿಯಲ್ಲಿ ಆದ್ಯತಾ ಚಿರಂಜಿತ್ ಹೆಗಡೆ ಅವರ ಒಡೆತನದಲ್ಲಿ ಯುರೋಕಿಡ್ಸ್, ಫ್ರೀ ಸ್ಕೂಲ್ ಅದ್ದೂರಿಯಾಗಿ ಸೋಮವಾರ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಪ್ರಸಿದ್ಧ ಪವಾಡ ತಜ್ಞ, ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಅಧ್ಯಕ್ಷರಾದ ಹುಲಿಕಲ್ ನಟರಾಜ್ ನೆರವೇರಿಸಿದರು. ಪ್ರಸ್ತಾವಿಕ ಭಾಷಣವನ್ನು ಮಾಡಿದ ಆದ್ಯತಾ ಚಿರಂಜಿತ್ ಹೆಗಡೆ, ಯುರೋ ಕಿಡ್ಸ್ ಆರಂಭ ಮಾಡಿರುವ ಉದ್ದೇಶವೇ ಮಕ್ಕಳಿಗೆ ಶಿಕ್ಷಣ ಎಂಬುದು ತುಂಬಾ ಸುಲಭವಾಗಿರಬೇಕೆ ಹೊರತು ಕಷ್ಟದಾಯಕವಾಗಿರಬಾರದು. 0-6 ವರ್ಷದ ಮಕ್ಕಳಿಗೆ ಆಟದ ಮೂಲಕ ಪಾಠವನ್ನು ಅಥವಾ ತಿಳುವಳಿಕೆಯನ್ನು ಮೂಡಿಸಬೇಕು. ಯುರೋ ಕಿಡ್ಸ್ ಮಕ್ಕಳ ಪ್ರತಿಯೊಂದು ವಿಷಯಕ್ಕೂ ಕೂಡ ಈ ಸಂಸ್ಥೆ ತುಂಬಾ ಪ್ರಮುಖವಾಗಿದೆ ಎಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದೇವೆ. ಸ್ಕೂಲ್ ಎಂದರೆ ಮಕ್ಕಳಿಗೆ ಪ್ರತಿಯೊಂದು ಅಂಶವನ್ನು ಕೂಡ ಕಲಿಸುವಂತಹ ಒಂದು ವ್ಯವಸ್ಥೆಯಾಗಬೇಕು ಎಂದು ಹೇಳಿದರು.
ಶಿಕ್ಷಕ ವೃತ್ತಿ ಎಂಬುದು ಅಷ್ಟು ಸುಲಭವಾದ ಮಾತಲ್ಲ, ಅದು ವೃತ್ತಿಯಲ್ಲ ಅದೊಂದು ಜವಾಬ್ದಾರಿ. ಇಲಾಖೆಗಳ ನಿಯಮಗಳ ಪ್ರಕಾರವೇ ನಾವು ಇದನ್ನು ಮಾಡಿದ್ದೇವೆ. ಮಕ್ಕಳಿಗೆ ಬರೀ ವಿದ್ಯಾಭ್ಯಾಸ ಮಾತ್ರ ಅಲ್ಲ ಕಲಿಕೆಯೂ ಕೂಡ ತುಂಬಾ ಮುಖ್ಯವಾಗುತ್ತದೆ. ಮನೆಯೇ ಮೊದಲ ಪಾಠಶಾಲೆ ಎಂದ ಹಾಗೆ ಈ ಸಂಸ್ಥೆಯು ಕೂಡ ಮೊದಲ ಪಾಠಶಾಲೆ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ.
ಕ್ಷೇತ್ರ ಶಿಕ್ಷಣ ಅಧಿಕಾರಿ ಗಣೇಶ್, ವೈ, ಮಾತನಾಡಿ ಯುರೋ ಕಿಡ್ಸ್ ಎನ್ನುವ ಸಂಸ್ಥೆ ನಮ್ಮ ತೀರ್ಥಹಳ್ಳಿಗೆ ಬಂದಿರುವುದು ತುಂಬಾ ಹೆಮ್ಮೆ. ಆರೋಗ್ಯ ಎಷ್ಟು ಮುಖ್ಯವೇ ಅದೇ ರೀತಿಯಲ್ಲಿ ಶಿಕ್ಷಣ ಕೂಡ ಅಷ್ಟೇ ಮುಖ್ಯ. ತೀರ್ಥಹಳ್ಳಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದೆ. ಈ ಬಾರಿ ತೀರ್ಥಹಳ್ಳಿಯ ವಿದ್ಯಾರ್ಥಿನಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವುದು ತುಂಬಾ ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹುಲಿಕಲ್ ನಟರಾಜ್ ಮಾತನಾಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ತುಂಬಾ ಮುಖ್ಯ. ಮಕ್ಕಳು ತಮ್ಮಲ್ಲಿ ತಾವು ತೊಡಗಿಸಿ ಕೊಳ್ಳುವಂತಹ ಕೆಲಸಗಳನ್ನು ನೀಡುವುದರಿಂದ ಮಕ್ಕಳು ಬುದ್ಧಿವಂತರಾಗುತ್ತಾರೆ. 5-I ಮಕ್ಕಳಿಗೆ ಕೊಡಬೇಕು. ಟ್ಯಾಲೆಂಟ್, ಶೆಡ್ಯೂಲ್ ಹಾಗೂ ಟೈಮ್ ಟೇಬಲ್, ಪಾಸಿಟಿವ್ ಅಂಶಗಳನ್ನು ನಾವು ಮಕ್ಕಳಿಗೆ ಕೊಡಬೇಕು. ಮಕ್ಕಳಿಗೆ ನಾವು ಆಸ್ತಿ ಬಟ್ಟೆ ಬೇರೆ ಬೇರೆ ವಸ್ತುಗಳನ್ನು ಕೊಡುವ ಬದಲು ನಾವು ಮೊದಲು ಮಕ್ಕಳಿಗೆ ಒಳ್ಳೆಯ ಅಂಶಗಳನ್ನು ತಿಳಿಸಬೇಕು ಎಂದರು.
ಕೊಠಡಿಯ ಉದ್ಘಾಟನೆಯನ್ನು ರಿಬ್ಬನ್ ಕಟ್ ಮಾಡುವ ಮೂಲಕ ಡಾಕ್ಟರ್ ಹುಲಿಕಲ್ ನಟರಾಜ್ ನೆರವೇರಿಸಿದರು.
ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ರಮೇಶ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಎಸ್, ಕೆ,ಪಿ, ಲಕ್ಷ್ಮೀನಾರಾಯಣ್, ಹಾಗೂ ಪ್ರಮುಖರು ಮತ್ತು ಕುಟುಂಬಸ್ಥರು, ಪೋಷಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.