ತೀರ್ಥಹಳ್ಳಿಗೆ ಭೇಟಿ ಕೊಟ್ಟ ಖ್ಯಾತ ನಟ ಸಾಯಿ ಕುಮಾರ್
– ತೀರ್ಥಹಳ್ಳಿಯ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಕೆ
– ಶಾಲುಹೊದಿಸಿ ಗೌರವ ಸಮರ್ಪಿಸಿದ ದೇವಸ್ಥಾನ ಆಡಳಿತ ಮಂಡಳಿ
– ಸೆಲ್ಫಿ ಕ್ಲಿಕಿಸಿ ಸಂಭ್ರಮಿಸಿದ ಅಭಿಮಾನಿಗಳು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಗೆ ಇಂದು ಖ್ಯಾತ ಚಲನಚಿತ್ರ ನಟ ಸಾಯಿ ಕುಮಾರ್ ಅವರು ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ದೇವಸ್ಥಾನಗಳಾದ ರಾಮೇಶ್ವರ ದೇವಸ್ಥಾನ ಮತ್ತು ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಹಾಗೂ ಹಲವು ದೇವಾಲಯಗಳಿಗೆ ಭೇಟಿ ನೀಡಿದರು. ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ನಟ ಸಾಯಿ ಕುಮಾರ್ ಪೂಜೆ ಸಲ್ಲಿಸಿದರು ನಂತರ ಅವರಿಗೆ ದೇವಸ್ಥಾನದಲ್ಲಿ ಶಾಲು ಹೊದಿಸಿ ಗೌರವ ಸಮರ್ಪಿಸಲಾಯಿತು. ಸಾಯಿ ಕುಮಾರ್ ಅವರು ದೇವಸ್ಥಾನದ ಅರ್ಚಕರಿಂದ ಆಶೀರ್ವಾದ ಪಡೆದರು.
ಸೆಲ್ಫಿ ಕ್ಲಿಕ್ಕಿಸಿದ ಅಭಿಮಾನಿಗಳು :
ತೀರ್ಥಹಳ್ಳಿಯಲ್ಲಿರುವ ಸಾಯಿ ಕುಮಾರ್ ಅವರ ಅಭಿಮಾನಿಗಳು ಸಾಯಿ ಕುಮಾರ್ ಅವರ ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ನಂತರ ಅವರು ಶೂಟಿಂಗ್ ನಿಮಿತ ದೇವರ ಆಶೀರ್ವಾದ ಪಡೆದು ಹೊರಟುರು.