Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಬೀಳ್ಕೊಡುಗೆ

ತೀರ್ಥಹಳ್ಳಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಬೀಳ್ಕೊಡುಗೆ
– ಡಿವೈಎಸ್ಪಿ ಗಜಾನನ ವಾಮನ ಸುತಾರ, ಸರ್ಕಲ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
– ನೂತನ ಸರ್ಕಲ್ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್ ಅಧಿಕಾರ ಸ್ವೀಕಾರ
– ಶೀಘ್ರದಲ್ಲಿ ತೀರ್ಥಹಳ್ಳಿಗೆ ಹೊಸ ಡಿವೈಎಸ್ಪಿ ನೇಮಕ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಳೆದ ಕೆಲ ವರ್ಷಗಳಿಂದ ಸೇವೆ ಸಲ್ಲಿಸಿ ದಕ್ಷತೆ ಮತ್ತು ಸೇವೆಯಲ್ಲಿ ತಮ್ಮದೇ ಕಾಣಿಕೆ ನೀಡಿರುವ ಗಜಾನನ ವಾಮನ ಸುತಾರ ಮತ್ತು ದಕ್ಷ ಅಧಿಕಾರಿಯಾಗಿ ಯಾವ ಮುಲಾಜಿಗೂ ಬಗ್ಗದ ಅಶ್ವತ್ ಗೌಡ ಅವರನ್ನು ತೀರ್ಥಹಳ್ಳಿ ಪೊಲೀಸ್ ಇಲಾಖೆ ಮತ್ತು ಜನತೆ ಪ್ರೀತಿಯಿಂದ ಬೀಳ್ಕೊಡುಗೆ ನೀಡಿದ್ದಾರೆ.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ನೇತೃತ್ವದಲ್ಲಿ ಜ.12ರಂದು ಪಟ್ಟಣ ಪಂಚಾಯತಿಯ ಸಭಾಂಗಣದಲ್ಲಿ ತೀರ್ಥಹಳ್ಳಿಯಿಂದ ಬಾಗಲಕೋಟೆಗೆ ವರ್ಗವಾಗಿ ತೆರಳುತ್ತಿರುವ ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರಿಗೆ ಪಟ್ಟಣ ಪಂಚಾಯತಿ ಹಾಗೂ ನಾಗರಿಕರ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ ಸುಶೀಲಾ ಶೆಟ್ಟಿ, ರತ್ನಾ ಕರ್ ಶೆಟ್ಟಿ, ಶಬನಮ್, ಮಂಜುಳಾ ನಾಗೇಂದ್ರ, ಜ್ಯೋತಿ ಮೋಹನ್, ಪತ್ರಕರ್ತ ಡಾನ್ ರಾಮಣ್ಣ, ಯುವ ಮುಖಂಡರಾದ ಅಮರ ನಾಥ ಶೆಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ರಫಿ ಇದ್ದರು. ಉಪಸ್ಥಿತರಿದ್ದ ಪೋಲಿಸ್ ಸರ್ಕಲ್ ಇನ್ಸ್‌ಪೆಕ್ಟರ್ ಅಶ್ವಥ್ ಗೌಡ ಶುಭ ಹಾರೈಸಿದರು. ಡಿವೈ ಎಸ್ಪಿಯವರ ಪತ್ನಿ ಸಂಗೀತಾ ಮತ್ತು ಇಬ್ಬರು ಪುಟಾಣಿ ಗಂಡು ಮಕ್ಕಳು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತೀರ್ಥಹಳ್ಳಿ ಠಾಣೆಯಲ್ಲಿ ಅಶ್ವತ್ ಗೌಡ ಅವರಿಗೆ ಬೀಳ್ಕೊಡುಗೆ

ತೀರ್ಥಹಳ್ಳಿ ಪೊಲೀಸ್ ಇತಿಹಾಸದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಯಾರ ಮುಲಾಜಿಗೂ ಬಗ್ಗದ ಅಶ್ವಥ್ ಗೌಡ ಅವರಿಗೆ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು. ಅಲ್ಲದೆ ಎಲ್ಲರೂ ಸೇರಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿದರು. ಈ ವೇಳೆ ನೂತನವಾಗಿ ತೀರ್ಥಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಇಮ್ರಾನ್ ಬೇಗ್ ಕೂಡ ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.