Categories
ಅಪರಾಧ ತೀರ್ಥಹಳ್ಳಿ

ಬಸ್ ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ: ಓರ್ವ ಅರೆಸ್ಟ್!

ಬಸ್ ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ: ಓರ್ವ ಅರೆಸ್ಟ್!
– ತೀರ್ಥಹಳ್ಳಿಯ ತೂದೂರು ಬಳಿ ನಡೆದ ಘಟನೆ
– ಸೈಲೆನ್ಸರ್ ಪೈಪಿನಿಂದ ಹೊಡೆದು ಹಲ್ಲೆ
– ಆಗುಂಬೆ: ಘಾಟಿಯಲ್ಲಿ ಪತ್ತೆಯಾಯಿತು ಶವ..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ತೂದೂರು ಬಳಿ ಶಿವಮೊಗ್ಗದಿಂದ ಬರುತ್ತಿದ್ದ ಬಸ್ ನಲ್ಲಿ ಮದ್ಯಪಾನ ಮಾಡಿದ್ದ ವ್ಯಕ್ತಿ ಒಬ್ಬ ಕಂಡಕ್ಟರ್ ಮೇಲೆ ಮರಣಾಂತಿಕ ಹಲ್ಲೆ ಮಾಡಿದ್ದು ಆತನನ್ನು ಮಾಳೂರು ಪೊಲೀಸರು ಬಂಧಿಸಿದ್ದಾರೆ. ಡಿ.7 ರಂದು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಸಹ್ಯಾದ್ರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ತೂದೂರು ಸಮೀಪದ ಹಳ್ಳಿಬೈಲು ರವೀಂದ್ರ ಎಂಬಾತ ಬಸ್ ಕಂಡಕ್ಟರ್ ಕುದುರೆ ಗುಂಡಿ ಮೂಲದ ಅಭಿಷೇಕ್ ಎಂಬುವವರ ಜತೆ ಬಸ್ ಇಳಿಸುವ ವಿಚಾರದಲ್ಲಿ ಗಲಾಟೆ ತೆಗೆದಿದ್ದು, ಬಳಿಕ ಕೈಯಲ್ಲಿದ್ದ ತಮ್ಮ ಗೂಡ್ಸ್ ಆಟೋದ ಸೈಲೆನ್ಸರ್ ಪೈಪ್ ವಿನಾಕಾರಣ ಹಲ್ಲೆ ಮಾಡಿದ್ದಾರೆ.

ಈ ಘಟನೆಯಲ್ಲಿ ಅಭಿಷೇಕ್ ಅವರಿಗೆ ಏಳಕ್ಕೂ ಹೆಚ್ಚು ಹೊಲಿಗೆ ಹಾಕಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮನೆಗೆ ತೆರಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ದೂರು ದಾಖಲುಗೊಂಡ ಪರಿಣಾಮ ರವೀಂದ್ರ ಹಳ್ಳಿಬೈಲು ಎಂಬುವವರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಬಸ್ ಒಳಗೆ ಗಲಾಟೆ ಮಾಡಿದ್ದ ರವೀಂದ್ರ ಹಳ್ಳಿಬೈಲು ಅವರು ತಮ್ಮ ಬಳಿ ಇದ್ದ ಸೈಲೆನ್ಸರ್ ಪೈಪ್ ನಿಂದ ಏಕಾಏಕಿ ಹಲ್ಲೆ ಮಾಡಿದ್ದು, ಮಾರಣಾಂತಿಕವಾಗಿ ಹಲ್ಲೆಯಾಗಿದ್ದು ಅಭಿಷೇಕ್ ರವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಪದೇಪದೇ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಗಲಾಟೆಗಳು ನಡೆಯುತ್ತಿದ್ದು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟವರು ಗಮನಿಸಬೇಕಿದೆ.

ಆಗುಂಬೆ ಘಾಟಿಯಲ್ಲಿ ಪತ್ತೆಯಾಯಿತು ಶವ..!

ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಅನಾಮಧೇಯ ವ್ಯಕ್ತಿಯ ನಾಪತ್ತೆ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯ ಶವ ಆಗುಂಬೆ ಘಾಟಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು. ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.