Categories
ತೀರ್ಥಹಳ್ಳಿ

ಹಳ್ಳಿಗಳಲ್ಲಿ ಕಾಡುಕೋಣ ಭೀತಿ..!

ಹಳ್ಳಿಗಳಲ್ಲಿ ಕಾಡುಕೋಣ ಭೀತಿ..!
– ರೈತ ಬೆಳೆದ ಫಸಲು ರೈತನಿಗೋ? ಅಥವಾ ಕಾಡುಕೋಣಗಳಿಗೋ?.
– ಮಲೆನಾಡಿನ ಜನರ ನಿದ್ರೆ ಗೆಡಿಸುತ್ತಿರುವ ಕಾಡುಕೋಣಗಳು

NAMMUR EXPRESS NEWS
ತೀರ್ಥಹಳ್ಳಿ/ ಹೊಸನಗರ:
ಮಲೆನಾಡಿನ ಹಳ್ಳಿಗಳಲ್ಲಿ ಕಾಡುಕೋಣ ಭೀತಿ ಹೆಚ್ಚಾಗಿದ್ದು, ರೈತ ಬೆಳೆದ ಫಸಲು ರೈತನಿಗೋ? ಅಥವಾ ಕಾಡುಕೋಣಗಳಿಗೋ? ಎಂಬ ಅನುಮಾನ ಮೂಡುವಂತಾಗಿದೆ.
ಮಲೆನಾಡಿನ ಜನರ ನಿದ್ರೆ ಗೆಡಿಸುತ್ತಿರುವ ಕಾಡುಕೋಣಗಳು ಈಗ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 8 ರಿಂದ 9 ಕಾಡು ಕೋಣಗಳು ಪ್ರತ್ಯಕ್ಷವಾಗಿವೆ. ರಾತ್ರಿ ವೇಳೆಯಲ್ಲಿ ರೈತರ ತೋಟಗಳಿಗೆ ನುಗ್ಗಿ 5-6 ವರ್ಷ ಕಷ್ಟಪಟ್ಟು ಬೆಳೆಸಿದ ಅಡಕೆ ಗಿಡ ಗಳನ್ನೂ ಮುರಿದು ತಿಂದು ಹಾಕುತ್ತಿವೆ. ಭತ್ತದ ಗದ್ದೆಗೆ ನುಗ್ಗಿ ಭತ್ತದ ಹುಲ್ಲು ಸಮೇತ ತಿಂದು ಮತ್ತಷ್ಟು ಹಾಳು ಮಾಡಿ ಹೋಗುತ್ತಿವೆ. ಬೇಲಿ, ಮೈಕ್ ನಲ್ಲಿ ಕೂಗಿ ಓಡಿಸುವ ಮೊರೆ ಹೋದರೂ ಕಾಡುಕೋಣಗಳ ಉಪಟಳ ತಪ್ಪುತ್ತಿಲ್ಲ. ದೇಮ್ಲಾಪುರದಿಂದ ಹುತ್ತಳ್ಳಿ ಗೆ ತೆರಳುವ ಮಾರ್ಗ ಮಧ್ಯ ರಸ್ತೆಯಲ್ಲಿ ಪ್ರತ್ಯಕ್ಷವಾಗಿ ನಿಲ್ಲುವ ಕಾಡುಕೋಣಗಳು ಜನರ ಜೀವ ಮತ್ತು ಜೀವನ ವನ್ನೂ ಒಂದು ಬಾರಿ ಕಣ್ಮುಂದೆ ಬರುವ ಹಾಗೆ ಮಾಡುತ್ತಿವೆ.ಶಾಲಾ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಲು ಭಯ ಪಡುವಂತೆ ಆಗಿದೆ. ದಟ್ಟವಾದ ಕಾಡು ಪ್ರದೇಶಗಳಲ್ಲಿ ವಾಸ ಮಾಡುವ ಕಾಡುಕೋಣಗಳು ಇವತ್ತಿನ ದಿನಗಳಲ್ಲಿ ಮಲೆನಾಡಿನ ಜನರ ಮನೆಯ ಅಂಗಳಕ್ಕೆ ಬಂದು ನಿಲ್ಲುವ ಸ್ಥಿತಿ ಮಲೆನಾಡಿನ ಜನರು ಎದುರಿಸುವ ಹಾಗೆ ಆಗಿದೆ. ಅರಣ್ಯ ಇಲಾಖೆಯು ಇದರ ಬಗ್ಗೆ ಯಾವುದೇ ರೀತಿಯ ಕ್ರಮಗಳನ್ನು ಕೈಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.