ಧರ್ಮಸ್ಥಳದ ಕುರಿತು ಅಪಪ್ರಚಾರ ವಿರುದ್ಧ ಹೋರಾಟ!
– ಆ.19ರಂದು ತೀರ್ಥಹಳ್ಳಿಯಲ್ಲಿ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ
– ಆರಗ, ಆರ್ ಎಂಎಂ ಸೇರಿ ಎಲ್ಲಾ ಪಕ್ಷದ ನಾಯಕರು ಹಾಜರ್
– .ಡಿ.ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅವಹೇಳನದ ವಿರುದ್ಧ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ: ಧರ್ಮಸ್ಥಳದ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅವಹೇಳನದ ಮಾತನಾಡುತ್ತಾ ಅಪಮಾನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಮಂಗಳವಾರ ತೀರ್ಥಹಳ್ಳಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಗೆ ವೇದಿಕೆ ಸಿದ್ಧಗೊಂಡಿದೆ.ಇದು ಪಕ್ಷಾತೀತ ಹೋರಾಟವಾಗಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲಾ ಪಕ್ಷದ ಎಲ್ಲಾ ಪ್ರಮುಖರು ಬೆಂಬಲ ನೀಡಿದ್ದಾರೆ. ಧರ್ಮಸ್ಥಳದ ಭಕ್ತಾದಿಗಳು, ಸಂಘ ಸಂಸ್ಥೆಗಳ ಸದಸ್ಯರು ಭಾಗಿಯಾಗಲಿದ್ದಾರೆ. ಧರ್ಮಸ್ಥಳ ಹೋರಾಟದ ಪ್ರಮುಖರಾದ ವಸಂತ ಗಿಳಿಯಾರ್ ಸೇರಿ ಪ್ರಮುಖರು ಭಾಗಿಯಾಗಲಿದ್ದಾರೆ.
ಹೋರಾಟಕ್ಕೆ ಕರೆ ನೀಡಿದ ಆರಗ, ಮಂಜುನಾಥ ಗೌಡ!
ಧರ್ಮಸ್ಥಳ ಭಕ್ತಾದಿಗಳು ಸಭೆಯಲ್ಲಿ ತಾಲೂಕಿನ ಸಮಸ್ತ ಜನತೆ ತಪ್ಪದೆ ಭಾಗವಹಿಸಿ ಎಂದು ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ಒಂದು ಪುಣ್ಯ ಕ್ಷೇತ್ರದ ಬಗ್ಗೆ ಅವಹೇಳನ ಮಾಡುತ್ತಾ ಅದರಲ್ಲೂ ಮುಖ್ಯವಾಗಿ ಲಕ್ಷಾಂತರ ಜನರ ಬದುಕಿಗೆ ಹೊಸ ಆಯಾಮ ತಂದುಕೊಟ್ಟ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಕುಟುಂಬದ ಬಗ್ಗೆ ಅವಹೇಳನ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡನೀಯ ಎಂದು ಜ್ಞಾನೇಂದ್ರ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಪ್ತರಾದ ಪೂಜ್ಯಪಾದ ಚಿಕಿತ್ಸಾಲಯದ ಡಾ. ಜೀವಂದರ್ ಜೈನ್ ಮಾತನಾಡಿ ಧರ್ಮಸ್ಥಳದ ಹೆಗ್ಗಡೆಯವರು ಶುದ್ಧ ಹಸ್ತದ ಅಪ್ಪಟ ಚಿನ್ನ, ತೀರ್ಥಹಳ್ಳಿ ತಾಲೂಕಿನಲ್ಲಿ ಬಡತನ ಕಡಿಮೆಯಾಗಲಿಕ್ಕೆ ಮುಖ್ಯ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ. ಇದರಿಂದ ಲಕ್ಷಾಂತರ ಜನರ ಬದುಕು ಹಸನಾಗಿದೆ. ನೂರಾರು ದೇವಸ್ಥಾನಗಳು ಜೀರ್ಣೋದ್ದಾರಗೊಂಡಿದೆ. ಇನ್ನು ಹಲವಾರು ಜನಪರ ಕೆಲಸಗಳು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಗಿದೆ. ಅಂತಹ ಪುಣ್ಯ ಕ್ಷೇತ್ರದ ಬಗ್ಗೆ ಅವಹೇಳನ, ಅಪಮಾನ ಖಂಡನೀಯ ಎಂದಿದ್ದಾರೆ.
ಮಲೆನಾಡು ಪ್ರಾಧಿಕಾರ ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಡಿ.ಸಿ ಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡ ಕೂಡ ಈ ಹೋರಾಟಕ್ಕೆ ಕರೆ ನೀಡಿದ್ದಾರೆ.
ಧರ್ಮಸ್ಥಳ ತೀರ್ಥಹಳ್ಳಿ ತಾಲೂಕಿನವರಿಗೆ ಮನೆ ದೇವರಿದ್ದಂತೆ. ಅಂತಹ ಕ್ಷೇತ್ರದ ಬಗ್ಗೆ ಅಪಮಾನ ಅವಮಾನ ಮಾಡುತ್ತಿರುವುದು ನಮ್ಮೆಲ್ಲರಿಗೂ ಬೇಸರ ತಂದಿದೆ. ಹಾಗಾಗಿ ಎಲ್ಲರೂ ಸೇರಿ ಸಂಘಟಿತರಾಗಿ ಧರ್ಮಸ್ಥಳದ ಪರವಾಗಿ ಹೋರಾಟ ಮಾಡೋಣ ಎಂದಿದ್ದಾರೆ.
ಸೊಪ್ಪುಗುಡ್ಡೆ ರಾಘವೇಂದ್ರ, ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಕೆ.ನಾಗರಾಜ ಶೆಟ್ಟಿ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಗೀತಾ ರಮೇಶ್, ಶಶಿಧರ್ ಹಂದೆ ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಹೋರಾಟದ ವಿಶೇಷತೆ ಏನು?
– ಆ.18ರಂದು ಬೆಳಿಗ್ಗೆ 10ಗಂಟೆಗೆ ಎಪಿಎಂಸಿಯಿಂದ ಪ್ರತಿಭಟನಾ ಮೆರವಣಿಗೆ ಶುರು
– ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕದಲ್ಲಿ ಬೃಹತ್ ಸಭೆ
– ಪಾರ್ಕಿಂಗ್ ಸಮಸ್ಯೆ ಆಗುವ ಸಾಧ್ಯತೆ
– ತೀರ್ಥಹಳ್ಳಿಯ ಎಲ್ಲಾ ಪ್ರಮುಖರು ಹಾಜರ್
– ಎಲ್ಲಾ ಪಕ್ಷದ ಮುಖಂಡರು ಭಾಗಿ
