ಒಕ್ಕಲಿಗ ಸಂಘದಲ್ಲಿ ಗದ್ದುಗೆಗಾಗಿ ಗುದ್ದಾಟ!
– ಸಂಘದ ಪ್ರಭಾವಿ ವ್ಯಕ್ತಿಗಳಿಂದಲೇ ತೇಜೋವಧೆ: ಸುಜಿನಿ ಗೌಡ
– ಮಾಧ್ಯಮದವರ ಮುಂದೆ ಆರೋಪ: ಒಕ್ಕಲಿಗ ಸಂಘದಲ್ಲಿ ಆಗಿದ್ದೇನು..?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಒಕ್ಕಲಿಗರ ಸಂಘದ ಗದ್ದುಗೆ ಗುದ್ದಾಟ ಈಗ ಭಾರೀ ಸದ್ದು ಮಾಡುತ್ತಿದೆ. ಸಂಘದ ಪ್ರಭಾವಿ ವ್ಯಕ್ತಿಗಳಿಂದಲೇ ತೇಜೋವಧೆಯಾಗುತ್ತಿದೆ ಎಂದು ಅಧ್ಯಕ್ಷರಾಗಿದ್ದ ಸುಜಿನಿ ಗೌಡ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಏನಿದು ಹೇಳಿಕೆ..?
ಶಿಕ್ಷಣ ಸಂಸ್ಥೆಯ ಮೂಲಕ ಒಕ್ಕಲಿಗ ಸಂಘದ ಅಧ್ಯಕ್ಷರಾಗಿದ್ದೆ. ಒಕ್ಕಲಿಗ ಸಂಘಕ್ಕೆ ಅಲ್ಪ ಕಾಲದಲ್ಲಿ ನನ್ನ ಕೈಲಾದ ಕೆಲಸ ಮಾಡಿದ್ದೇನೆ. ನೂತನ ಸಮುದಾಯ ಭವನ ಹಾಗೂ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಕೆಲಸ ಮಾಡಿದ್ದೇನೆ. 13-3-23 ರಿಂದ 13-12-23ರ ವರೆಗೆ 8 ತಿಂಗಳ ಕಾಲದಲ್ಲಿ 4 ತಿಂಗಳುಗಳ ಕಾಲ ಕೆಲಸ ಮಾಡಿದ್ದೇನೆ. ಉಳಿದ 4 ತಿಂಗಳಲ್ಲಿ ಪ್ರಭಾಕರ್ ಸೇರಿ ಹಲವರು ಅಧಿಕಾರ ಹಸ್ತಾಂತರ ಮಾಡಿ ಕೊಟ್ಟಿಲ್ಲ ಎಂದು ಒಕ್ಕಲಿಗ ಸಂಘದ ಅಧ್ಯಕ್ಷರಾಗಿದ್ದ ಸುಜನಿ ಗೌಡ ಆರೋಪಿಸಿದ್ದಾರೆ. ಒಕ್ಕಲಿಗ ಸಂಘದಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಲು ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ ರಾಜಕೀಯಯದ ಉದ್ದೇಶದಿಂದ ಅಧಿಕಾರ ಹಸ್ತಾಂತರ ಮಾಡಿ ಕೊಟ್ಟಿರಲಿಲ್ಲ.
ಆ ವಿಚಾರದಲ್ಲಿ ನಾಲ್ಕು ಮೀಟಿಂಗ್ ಮಾಡಿದ್ದರೂ 1 ಮೀಟಿಂಗ್ ಗೆ ಮಾತ್ರ ಅವರು ಬಂದಿದ್ದರು ಎಂದು ಆರೋಪಿಸಿದರು. ಇನ್ನು ನಾಲ್ಕು ತಿಂಗಳಲ್ಲಿ ಒಕ್ಕಲಿಗ ಸಂಘಕ್ಕೆ ಕಲ್ಯಾಣ ಮಂದಿರಕ್ಕೆ 28 ಲಕ್ಷ, ವಿದ್ಯಾರ್ಥಿ ನಿಲಯಕ್ಕೆ 61 ಸಾವಿರ, ಸಹ್ಯಾದ್ರಿ ಶಾಲೆಗೆ 26 ಲಕ್ಷದ 40 ಸಾವಿರ, ಕುಶಾವತಿ ಹೈಸ್ಕೂಲ್ 5 ಲಕ್ಷ, ಕೇಂದ್ರೀಯ ಶಾಲೆ ಬೆಟ್ಟಮಕ್ಕಿ 3 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 20 ಲಕ್ಷ 42 ಸಾವಿರ ರೂ ಹಣವನ್ನು ನೀಡಲಾಗಿದೆ. ಇಲ್ಲಿಯವರೆಗೆ ಸಂಘಕ್ಕಾಗಿ ದುಡಿದಿದ್ದೇನೆ. ನನ್ನ ಅವಧಿಯಲ್ಲಿ ಆದಷ್ಟು ಸಂಘದ ಅಭಿವೃದ್ಧಿಪಡಿಸಲು ಕೆಲಸ ಮಾಡಿದ್ದೇನೆ, ಸಂಘದ ಹಣವಾಗಲಿ ಅಥವಾ ಸಂಘಕ್ಕಾಗಲಿ ಮೋಸ ಮಾಡಿಲ್ಲ ಎಂದರು. ನಾಲ್ಕು ತಿಂಗಳಲ್ಲಿ ಸಾಕಷ್ಟು ನೋವು ತಿಂದಿದ್ದೇನೆ.
ನೂತನ ಅಧ್ಯಕ್ಷರು ಎಂದು ಪತ್ರಿಕೆಗಳಲ್ಲಿ ಬಂದಿದೆ. ಅದಕ್ಕೆ ನಮ್ಮ ಸಮ್ಮತಿ ಇಲ್ಲ. ಅವರು ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿದ್ದಾರೆ. ಹೆಣ್ಣು ಮಗಳು ಅಧಿಕಾರ ಹಿಡಿದ್ದಾರೆ ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರಭಾಕರ್ ಅವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಇವರು 23 ವರ್ಷ ಸಂಘದಲ್ಲಿ ಸೇವೆ ಸಲ್ಲಿಸಿದವರು ನಮಗೆ ಇವರು ಮಾರ್ಗದರ್ಶಕರಾಗಿರಬೇಕಿತ್ತು. ಆದರೆ ನನ್ನ ತೇಜುವದೇ ಮಾಡಿದ್ದಾರೆ. ಈಗಾಗಲೇ ಪೊಲೀಸರಿಗೂ ದೂರು ನೀಡಲಾಗಿದೆ ಎಂದರು. ಹಾಗೂ ಮುಂದಿನ ದಿನದಲ್ಲಿ ಕಾನೂನು ಹೋರಾಟವನ್ನು ಮುಂದುವರಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕರಾದ ಶೈಲಾ, ಸುನೀಲ್, ಶಶಿಧರ್ ಸೇರಿ ಹಲವರು ಉಪಸ್ಥಿತರಿದ್ದರು.