ತೀರ್ಥಹಳ್ಳಿ ಚರ್ಚ್ ಅಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
-ಜುಲೈ 13ಕ್ಕೆ ಬೆಳ್ಳಿ ಮಹೋತ್ಸವ 2025 ಅಂಗವಾಗಿ ಆಯೋಜನೆ
– ಯೂನಿಟಿ ಹಾಲ್, ಚರ್ಚ್ ಆವರಣದಲ್ಲಿ ನುರಿತ ತಜ್ಞ ವೈದ್ಯರು ಹಾಜರ್
NAMMUR EXPRESS NEWS
ತೀರ್ಥಹಳ್ಳಿ: ಲೂರ್ದುಮಾತೆಯ ದೇವಾಲಯ ತೀರ್ಥಹಳ್ಳಿ ಶತಮಾನೋತ್ತರ ಬೆಳ್ಳಿ ಮಹೋತ್ಸವ 2025 ಅಂಗವಾಗಿ ಆಯೋಜನೆ ಮಾಡಿರುವ ಕ್ಯಾಥೋಲಿಕ್ ಅಸೋಸಿಯೇಷನ್ ಅವರಿಂದ ಮಹಿಳಾ ಮತ್ತು ಆರೋಗ್ಯ ಆಯೋಗ, ರೋಟರಿ ಸಂಸ್ಥೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಶಿವಮೊಗ್ಗದ ಪ್ರಸಿದ್ಧ ಸರ್ಜಿ ಹಾಸ್ಟಿಟಲ್‌ನ ತಜ್ಞ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು
13-07-2025 ಭಾನುವಾರ, ಬೆಳಿಗ್ಗೆ 9:30 ಯೂನಿಟಿ ಹಾಲ್, ಚರ್ಚ್ ಆವರಣ, ತೀರ್ಥಹಳ್ಳಿಯಲ್ಲಿ ಆಯೋಜನೆ ಮಾಡಲಾಗಿದೆ.
ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಜ್ಞರು ಚರ್ಮ ರೋಗ ತಜ್ಞರು, ಮೂಳೆ ತಜ್ಞರು [ಆರ್ಥೋ], ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಹೃದಯ ರೋಗ ತಜ್ಞರು ಈ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಸೌಲಭ್ಯವನ್ನು ಪ್ರತಿಯೊಬ್ಬ ಸಾರ್ವಜನಿಕರು ಕೂಡ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
