ತೀರ್ಥಹಳ್ಳಿಯಲ್ಲಿ ಸೆ.28ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ
– ಮೋದಿ, ಉಪಾಧ್ಯಾಯ ಜಯಂತಿ ಪ್ರಯುಕ್ತ ಆಯೋಜನೆ
– ಎಲ್ಲಾ ರೋಗದ ತಪಾಸಣೆ: ಸರ್ವರಿಗೂ ಬಿಜೆಪಿ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ನಿರ್ಮಾತೃ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಯಂತಿ ಪ್ರಯುಕ್ತ ಸೆಪ್ಟೆಂಬರ್ 28ರ ಗುರುವಾರ ಬೆಳಿಗ್ಗೆ 10 ಗಂಟೆಗೆ ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ (ಟಿಎಪಿಸಿಎಂಎಸ್) ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಂಡಲ ಬಿಜೆಪಿ ರೈತ ಮೋರ್ಚಾ, ಓಬಿಸಿ ಮೋರ್ಚಾ ಹಾಗೂ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಆಯೋಜಿಸಲಾಗಿದೆ. ಶಿವಮೊಗ್ಗದ ಪ್ರತಿಷ್ಠಿತ ಸರ್ಜಿ ಆಸ್ಪತ್ರೆಯ ತಜ್ಞ ವೈದ್ಯರು ಈ ಶಿಬಿರದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ. ಇದೇ ತಪಾಸಣಾ ಶಿಬಿರದಲ್ಲಿ ಉಚಿತವಾಗಿ ಆರೋಗ್ಯ ಕಾರ್ಡ್ ನೋಂದಣಿ ಮಾಡುವ ಸೌಲಭ್ಯವನ್ನೂ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಈ ಸೇವಾ ಪಾಕ್ಷಿಕ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ತಾಲ್ಲೂಕು ಬಿಜೆಪಿ ವಿನಂತಿಸಿಕೊಂಡಿದೆ.
ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ
ರಕ್ತ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಇ. ಸಿ. ಜಿ ಸೇರಿದಂತೆ ಎಲ್ಲಾ ಪರೀಕ್ಷೆ
ದಿನಾಂಕ: 28-09-2023ನೇ ಗುರುವಾರ ಸಮಯ : ಬೆಳಿಗ್ಗೆ 10 ಗಂಟೆಗೆ ಟಿ.ಎ.ಪಿ.ಸಿ.ಎಮ್.ಎಸ್. ಸಭಾಂಗಣ, ತೀರ್ಥಹಳ್ಳಿಯಲ್ಲಿ ನಡೆಯಲಿದೆ. ಉದ್ಘಾಟಕರಾಗಿ ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ, ಮಕ್ಕಳ ತಜ್ಞ ಡಾ.ದಯಾನಂದ ಸರ್ಜಿ, ಮೂಳೆ ತಜ್ಞ ಡಾ.ಮಂಜುನಾಥ್, ಸ್ತ್ರೀ ರೋಗ ತಜ್ಞೆ ಡಾ.ಚಂದುಶ್ರೀ, ಜನರಲ್ ಫಿಸಿಷಿಯನ್ ಡಾ.ಶೂನ್ಯ ಸಂಪತ್ ಅವರಿಂದ ರಕ್ತ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಇ. ಸಿ. ಜಿ ಸೇರಿದಂತೆ ಎಲ್ಲಾ ಪರೀಕ್ಷೆ ನಡೆಯಲಿದೆ.