ತೀರ್ಥಹಳ್ಳಿ: ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ!
– ಮೋದಿ ಜನ್ಮ ದಿನದ ಅಂಗವಾಗಿ ಬಿಜೆಪಿಯಿಂದ ಕಾರ್ಯಕ್ರಮ
– ನಂಬಳ ಮುರುಳಿ ನೇತೃತ್ವದಲ್ಲಿ ನೂರಾರು ಮಂದಿಗೆ ಅನುಕೂಲ
NAMMUR EXPRESS NEWS
ತೀರ್ಥಹಳ್ಳಿ: ರೈತ ಮೋರ್ಚಾ, ಓಬಿಸಿ ಮೋರ್ಚಾ ಮತ್ತು ವೈದ್ಯಕೀಯ ಪ್ರಕೋಷ್ಟ ವತಿಯಿಂದ ಶಿವಮೊಗ್ಗದ ಪ್ರಖ್ಯಾತ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ನರೇಂದ್ರ ಮೋದಿಜಿಯವರ 73ನೇ ಜನ್ಮ ದಿನಾಚರಣೆಯ ಅಂಗವಾಗಿ ತೀರ್ಥಹಳ್ಳಿಯ ಟಿ.ಎ.ಪಿ.ಸಿ.ಎಂ. ಸಿ. ಎಸ್ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಕಾರ್ಡ್ ನೊಂದಣಿ ಕಾರ್ಯಕ್ರಮವು ಸೆ.28ರ ಗುರುವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ನಾರಾಯಣ ಸ್ವಾಮಿ ನೆರವೇರಿಸಿದ್ದಾರೆ. ಅಧ್ಯಕ್ಷತೆಯನ್ನು ಬಿಜೆಪಿ ಮಂಡಲದ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ ಅವರು ವಹಿಸಿದ್ದು ನಂತರ ಮಾತನಾಡಿ ಕೇಂದ್ರದಲ್ಲಿ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ದೇಶದಲ್ಲಿ ಪರಿವರ್ತನೆಯಾಗುತ್ತಿದೆ. ದೇಶದಲ್ಲಿ ಮೋದಿ ಸರ್ಕಾರದ ಸಾಧನೆ ಅವಿಸ್ಮರಣೀಯ. ಆಯುಷ್ಮಾನ್ ಕಾರ್ಡ್ ಯೋಜನೆಯಲ್ಲಿ ಕೊಡುವಂತಹ ಆರೋಗ್ಯ ಕಾರ್ಡ್ 5 ಲಕ್ಷದವರೆಗೆ ಉಚಿತವಾದ ಚಿಕಿತ್ಸೆ ಕೊಡುವಂತಹ ಸೌಲಭ್ಯ ಒದಗಿಸಿರುತ್ತಾರೆ ಎಂದರು.
ಡಾ.ನಂದ ಕಿಶೋರ್ ಮಾತನಾಡಿ, ಜನರ ಸೇವೆಗಾಗಿ ವೈದ್ಯಕೀಯ ತಪಾಸಣಾ ಶಿಬಿರ ಮಾಡುತ್ತೇವೆ. ವೈದ್ಯಕೀಯ ಸೇವೆಯ ಸೌಲಭ್ಯ ಇದ್ದು ಹೆಚ್ಚಿನ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಈ ವೈದ್ಯಕೀಯ ಶಿಬಿರದ ಸಂಚಾಲಕರಾಗಿ ಮೇಳಿಗೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ನಂಬಳ ಮುರಳಿ ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ, ಬಿಜೆಪಿ ಓಬಿಸಿ ಮೋರ್ಚಾದ ತೀರ್ಥಹಳ್ಳಿ ಮಂಡಲದ ಅಧ್ಯಕ್ಷರಾದ ಮಂಜುನಾಥ್, ಬಿಜೆಪಿ ಮುಖಂಡರಾದ ಬೇಗುವಳ್ಳಿ ಸತೀಶ್, ರೈತ ಮೋರ್ಚಾದ ಅಧ್ಯಕ್ಷರಾದ ಹೊಳೆಕೊಪ್ಪ ರವೀಂದ್ರ, ಮಕ್ಕಳ ತಜ್ಞರಾದ ಡಾ.ದಯಾನಂದ ಸರ್ಜಿ, ಮೂಳೆತಜ್ಞರಾದ ಡಾ.ಮಂಜುನಾಥ್, ಚಂದುಶ್ರೀ, ವೈದ್ಯಕೀಯ ಪ್ರಕೋಷ್ಠದ ಜವಾಬ್ದಾರಿ ವಹಿಸಿರುವಂತಹ ಡಾ. ನಂದ ಕಿಶೋರ್ ಉದ್ಘಾಟಕರಾದ ಡಾ. ನಾರಾಯಣಸ್ವಾಮಿ, ವೈದ್ಯರು ಹಾಗೂ ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂರಾರು ಮಂದಿಗೆ ಅನುಕೂಲ..!
ತೀರ್ಥಹಳ್ಳಿಯ ಪಟ್ಟಣ ಸೇರಿ ತಾಲೂಕಿನ ಅನೇಕ ಭಾಗದಿಂದ ನೂರಾರು ಮಂದಿ ಆಗಮಿಸಿ ಉಚಿತ ಅರೋಗ್ಯ ತಪಾಸಣೆ ನಡೆಸಿದರು.