Categories
ತೀರ್ಥಹಳ್ಳಿ

ತೀರ್ಥಹಳ್ಳಿ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಗೆ ಗಣಪತಿ

ತೀರ್ಥಹಳ್ಳಿ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಗೆ ಗಣಪತಿ
– ನಾಯಕರು, ಸದಸ್ಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ
– ಜನ ಪರ ಚಿಂತನೆಯ ನಾಯಕನಿಗೆ ಸಿಕ್ತು ಕೊನೆಗೂ ಅವಕಾಶ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಗೆ ಸಕ್ರಿಯ ಸದಸ್ಯ, ಪತ್ರಕರ್ತ ಬಿ ಗಣಪತಿ ಆಯ್ಕೆಯಾಗಿದ್ದು ಶುಕ್ರವಾರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು, ಸದಸ್ಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದು ಜನ ಪರ ಚಿಂತನೆಯ ನಾಯಕನಿಗೆ ಜನ ಸೇವೆಗೆ ಇದೀಗ ಅವಕಾಶ ಸಿಕ್ಕಂತಾಗಿದೆ. ಗಣಪತಿ ಅವರ ನೂತನ ಕೊಠಡಿ ಪ್ರವೇಶ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ ಗೌಡ ಉಪಸ್ಥಿರಿದ್ದು ಶುಭ ಕೋರಿದರು. ಮಂಜುನಾಥ ಗೌಡ ಮಾತನಾಡಿ, ಈಗಾಗಲೇ 30 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿದ್ದು ಪಕ್ಷಕ್ಕಾಗಿ ಹಲವು ರೀತಿಯಲ್ಲಿ ದುಡಿದಿದ್ದಾರೆ. ಅಷ್ಟೇ ಅಲ್ಲದೆ ಯಕ್ಷಗಾನ ಕಲಾವಿದರಾಗಿ, ಪತ್ರಕರ್ತರಾಗಿ ಅನುಭವ ಹೊಂದಿರುವ ಇವರ ಕೆಲಸದ ಮೇಲೆ ಸಾಕಷ್ಟು ಕುತೂಹಲ ಇದ್ದು ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿ ಎಂದು ಆಶೀಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಬಿ. ಗಣಪತಿ ಅವರು ಒಳೊಳ್ಳೆ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರಾದ ನಂತರದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪಟ್ಟಣ ಪಂಚಾಯತ್ ಗೆ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆ ಹೆಸರನ್ನು ತಂದು ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಒಳ್ಳೆಯ ಕೆಲಸ ಮಾಡಿ ಇನ್ನು 20 ವರ್ಷಗಳ ಕಾಲ ಬಿಜೆಪಿ ಪಕ್ಷದವರಿಗೆ ಅಧಿಕಾರ ಕೊಡಬಾರದು ಎಂದರು. ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾದ ಬಿ ಗಣಪತಿ ಮಾತನಾಡಿ ಅವಕಾಶವನ್ನು ನಾವು ಹುಡುಕಿಕೊಂಡು ಹೋಗಬಾರದು. ರಾಜಕೀಯದಲ್ಲಿ ಅರ್ಹತೆ ಇದ್ದವರು ಮೂಲೆ ಗುಂಪಾಗುವ ಸಾಧ್ಯತೆ ಇರುತ್ತದೆ. ಅಧಿಕಾರ ಹಂಚುವಾಗ ಪಕ್ಷದ ಬದ್ಧತೆಗೆ ನಾವು ಹೊಂದಿಕೊಂಡು ಹೋಗಬೇಕಾಗಿರುತ್ತದೆ. ಜನರ ಅನುಕೂಲಕ್ಕಾಗಿ ಏನೆಲ್ಲಾ ಮಾಡಬೇಕು ಅ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದರು. ಪ. ಪಂ ಅಧ್ಯಕ್ಷರಾದ ಗೀತಾ ರಮೇಶ್, ಮುಖ್ಯಾಧಿಕಾರಿ, ಕುರಿಯಾಕೋಸ್, ಪ್ರಮುಖರಾದ ನಾರಾಯಣ ರಾವ್, ಕೆಸ್ತೂರು ಮಂಜುನಾಥ್, ಮುಡಬ ರಾಘವೇಂದ್ರ, ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.