Categories
ತೀರ್ಥಹಳ್ಳಿ

ತೀರ್ಥಹಳ್ಳಿ: ಮನೆ, ದೇಗುಲಗಳಲ್ಲಿ ವಿಶೇಷ ಪೂಜೆಗೆ ಸಜ್ಜು!

ತೀರ್ಥಹಳ್ಳಿ: ಮನೆ, ದೇಗುಲಗಳಲ್ಲಿ ವಿಶೇಷ ಪೂಜೆಗೆ ಸಜ್ಜು!
– ಮನೆಗಳಲ್ಲಿ ಗೌರಿ, ಗಣೇಶ ಕೂರಿಸಿ ಹಬ್ಬ ಆಚರಣೆ
– ಹೂವು ಹಣ್ಣು ಅಲಂಕಾರಿಕ ವಸ್ತುಗಳಿಗೆ ಡಿಮ್ಯಾಂಡ್!

NAMMUR EXPRESS NEWS
ತೀರ್ಥಹಳ್ಳಿ: ಗೌರಿ ಗಣೇಶ ಹಬ್ಬದ ಅಂಗವಾಗಿ ತೀರ್ಥಹಳ್ಳಿ ತಾಲೂಕಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಗೌರಿ ಗಣಪತಿ ಪೂಜೆ ನಡೆಯಲಿದೆ. ತೀರ್ಥಹಳ್ಳಿಯ ರಾಮೇಶ್ವರ, ಮಾರಿಕಾಂಬಾ, ಗಣಪತಿ, ಗೌರಿ ದೇವಾಲಯಗಳಲ್ಲಿ ಪೂಜೆಗೆ ಸಿದ್ಧತೆ ನಡೆದಿದೆ.

ಗೌರಿ ಶಂಕರ ದೇವಸ್ಥಾನದಲ್ಲಿ ಗೌರಿ ವೃತ

ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲೇ ನೆಲೆ ನಿಂತ ಶ್ರೀ ಗೌರಿ ಶಂಕರ ದೇವಸ್ಥಾನದಲ್ಲಿ ಸೋಮವಾರ ಗೌರಿ ಮತ್ತು ಗಣೇಶ ಹಬ್ಬವಾದ್ದರಿಂದ ದೇವಸ್ಥಾನದಲ್ಲಿ ಬೆಳಿಗ್ಗೆ 6 ಘಂಟೆಗೆ ಗೌರಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು. ತಮ್ಮ ಮನೆಯಲ್ಲಿ ಗೌರಿ ಕೂರಿಸಲು ಅನಾನುಕೂಲ ಇದ್ದ ಮಾತೆಯರು ಗೌರಿ ಶಂಕರ ದೇವಸ್ಥಾನದಲ್ಲಿ ಮುಂಚಿತವಾಗಿ ಹೆಸರು ಬರೆಸಿ ಗೌರಿವೃತ ಪೂಜೆ ಮಾಡಿ ಶ್ರೀ ಗೌರಿದಾರ ಕಟ್ಟುವುದಕ್ಕೆ ಅವಕಾಶ ಇರುತ್ತದೆ. ಮಧ್ಯಾಹ್ನ ಶಾಶ್ವತ ಅನ್ನದಾನ ಸೇವೆ ಮಾಡಿಸು ವವರು ತಮ್ಮ ಹೆಸರು, ನಕ್ಷತ್ರ ಬರೆಸಿ ಈ ಮಹಾ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರ ರಾಗಬೇಕೆಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.

ಮನೆಗಳಲ್ಲಿ ಗೌರಿ, ಗಣೇಶ ಕೂರಿಸಿಲು ಸಿದ್ಧತೆ

ಮನೆ ಮನೆಗಳಲ್ಲಿ ಗೌರಿ, ಗಣೇಶನ ಕೂರಿಸಿ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡಲು ಜನ ಸಿದ್ದರಾಗಿದ್ದಾರೆ. ಶನಿವಾರ, ಭಾನುವಾರ ಎಲ್ಲೆಡೆ ಅಲಂಕಾರಿಕ ವಸ್ತುಗಳು, ಹೂವು ಹಣ್ಣು ಖರೀದಿ ಮಾಡಲಾಗುತ್ತಿದೆ. ಸೋಮವಾರ ಮನೆಯಲ್ಲಿ ವಿಶೇಷ ಪೂಜೆ ನಡೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.