Categories
ತೀರ್ಥಹಳ್ಳಿ

ತೀರ್ಥಹಳ್ಳಿ ಎಳ್ಳಮಾವಾಸ್ಯೆಗೆ ಸಜ್ಜು!

ತೀರ್ಥಹಳ್ಳಿ ಎಳ್ಳಮಾವಾಸ್ಯೆಗೆ ಸಜ್ಜು!
– ಜ.11ರಂದು ತೀರ್ಥಸ್ನಾನ, ಜ.12ರಂದು ರಥೋತ್ಸವ, ಜ.13ರಂದು ತೆಪ್ಪೋತ್ಸವ
– ಜಾತ್ರಾ ಸಮಿತಿ ಸಂಚಾಲಕರಾಗಿ ಸೊಪ್ಪುಗುಡ್ಡೆ ರಾಘವೇಂದ್ರ ಆಯ್ಕೆ.. ಸಮಿತಿಯಲ್ಲಿ ಯಾರು..?

NAMMUR EXPRESS NEWS
ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಶುರುವಾಗಿದೆ. ತೀರ್ಥಹಳ್ಳಿ ಯಲ್ಲಿ ಜನವರಿ 11 ರಿಂದ 13ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಜಾತ್ರೆ ನಡೆಸಲು ಆಡಳಿತ ಹಾಗೂ ಜಾತ್ರಾ ಸಮಿತಿ ನಿರ್ಧಾರ ಮಾಡಿದೆ. ಜ.11ರಂದು ತೀರ್ಥಸ್ನಾನ, ಜ.12ರಂದು ರಥೋತ್ಸವ, ಜ.13ರಂದು ತೆಪ್ಪೋತ್ಸವ ನಡೆಯಲಿದೆ. ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಜಾತ್ರೆಯ ಪೂರ್ವಭಾವಿ ಸಭೆ ನಡೆದಿದೆ.

ಎಳ್ಳಮಾವಾಸ್ಯೆ ಜಾತ್ರಾ ಸಮಿತಿಯ ಸಂಚಾರಕರಾಗಿ ಧಾರ್ಮಿಕ ಮುಖಂಡರು, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರು ಸರ್ವನುಮತದಿಂದ ಆಯ್ಕೆ ಆಗಿದ್ದಾರೆ. ಆರ್ಥಿಕ ಸಮಿತಿಯ ಸಂಚಾಲಕರನ್ನಾಗಿ ಅಶೋಕ್ ಶೆಟ್ಟಿ ಮತ್ತು ಕಿಶೋರ್ ನೇಮಕಗೊಂಡಿದ್ದಾರೆ. ಇನ್ನುಳಿದಂತೆ ಈ ಹಿಂದಿನ ಸಾಲಿನ ಎಲ್ಲಾ ಪದಾಧಿಕಾರಿಗಳು ಹಾಗೂ ಕೆಲವೊಂದಿಷ್ಟು ಮಂದಿ ನೂತನ ಪದಾಧಿಕಾರಿಗಳು ವಿವಿಧ ಉಪ ಸಮಿತಿಗಳ ಸಂಚಾಲಕರು ಮತ್ತು ಸದಸ್ಯರಾಗಿ ಜಾತ್ರಾ ಸಮಿತಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಸುಮಾರು 15 ಲಕ್ಷ ವೆಚ್ಚದಲ್ಲಿ ಆಚರಣೆ ಮಾಡಲು ನಿರ್ಧಾರ ಮಾಡಲಾಯಿತು.

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕುರಿಯ ಕೋಸ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಷ್ಮಾ,ತೀರ್ಥಹಳ್ಳಿ ತಹಸೀಲ್ದಾರ್ ಜಕ್ಕಣ್ಣಗೌಡರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜನ ಪ್ರತಿನಿಧಿಗಳು, ಸಂಘ ಸಂಸ್ಥೆ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.