Categories
ತೀರ್ಥಹಳ್ಳಿ

ಎನ್. ಇ.ಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಜಿ ಎಸ್ ನಾರಾಯಣ ರಾವ್ ಅವರಿಗೆ ಮಾತೃ ವಿಯೋಗ

ಎನ್. ಇ.ಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಜಿ ಎಸ್ ನಾರಾಯಣ ರಾವ್ ಅವರಿಗೆ ಮಾತೃ ವಿಯೋಗ
– ವಯೋಸಹಜ ಕಾರಣದಿಂದ ವಿಧಿವಶ
– ತೀರ್ಥಹಳ್ಳಿಯಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ

NAMMUR EXPRESS NEWS
ತೀರ್ಥಹಳ್ಳಿ: ಹಿರಿಯ ಸಹಕಾರಿಗಳು, ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ನಾಯಕರಾದಗುಡ್ಡೆಕೊಪ್ಪ ಜಿ ಎಸ್ ನಾರಾಯಣ ರಾವ್ ಅವರ ತಾಯಿ ಸುವರ್ಣಮ್ಮ(95) ಶನಿವಾರ ಬೆಳಿಗ್ಗೆ ನಿಧನರಾಗಿದ್ದು ಮದ್ಯಾಹ್ನ ಹನ್ನೆರಡು ಘಂಟೆಗೆ ತೀರ್ಥಹಳ್ಳಿಯ ಚಿತಾಗಾರದಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ. ಇವರಿಗೆ 3 ಗಂಡು, 3 ಹೆಣ್ಣು ಮಕ್ಕಳಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸಾವಿಗೆ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 25-01-1929ರಂದು ಜನಿಸಿದ್ದ ಸುವರ್ಣಮ್ಮ ಅವರಿಗೆ ಈ ತಿಂಗಳು 26ಕ್ಕೆ 96 ವರ್ಷ ಆಗುತ್ತಿತ್ತು. ಇವರ ಅಗಲಿಕೆ ನೋವು ಕುಟುಂಬಕ್ಕೆ ಭಗವಂತ ಭರಿಸಲಿ ಎಂದು ಪ್ರಾರ್ಥಿಸೋಣ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.