ಮಾಸ್ತಿಕಟ್ಟೆ ಕಾಲೇಜಿನ 2002 – 2003ನೇ ಬ್ಯಾಚ್ ಗುರುವಂದನೆ
– ಮೇ 4ರಂದು ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ: ಸ್ನೇಹ ಸಮ್ಮಿಲನ
– ಗುರುಗಳನ್ನು ಗೌರವಿಸುವ ಕೆಲಸಕ್ಕೆ ಎಲ್ಲರಿಗೂ ಸ್ವಾಗತ
NAMMUR EXPRESS NEWS
ಹೊಸನಗರ/ ತೀರ್ಥಹಳ್ಳಿ: ಮಾಸ್ತಿಕಟ್ಟೆಯ ಕಾಲೇಜಿನಲ್ಲಿ 2002 – 2003ನೇ ಸಾಲಿನಲ್ಲಿ ಕಲಿತು ಹೊರಬಂದ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿ ಆಗಿದ್ದು, ಇದೀಗ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಇದೀಗ ಒಂದೆಡೆ ಸೇರಿ ಉಭಯಕುಶಲೋಪರಿ ಹಂಚಿಕೊಳ್ಳಲಿದ್ದಾರೆ.
ಹೊಸನಗರ, ಮಲೆನಾಡು, ರಾಜಧಾನಿ ಬೆಂಗಳೂರು ಸೇರಿ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ನಿರತರಾಗಿರುವ ಸ್ನೇಹಿತರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸಲುವಾಗಿ ಮೇ 4ರಂದು ಭಾನುವಾರದಂದು ತೀರ್ಥಹಳ್ಳಿಯ ಬಾಳೆಬೈಲಿನ ಮಲೆನಾಡು ಕ್ಲಬ್ ಆವರಣದಲ್ಲಿ ಔತಣಕೂಟವನ್ನು ಆಯೋಜಿಸಿಕೊಂಡಿದ್ದಾರೆ.
ಗುರುಗಳನ್ನು ಗೌರವಿಸುವ ಕೆಲಸ
ಔತಣ ಕೂಟ, ಸ್ನೇಹ ಸಮ್ಮಿಲನ ಉದ್ದೇಶ ಮತ್ತು ವಿಶೇಷವೆಂದರೆ ಕೇವಲ ಹರಟೆ, ತಿನ್ನುವುದು, ಕುಡಿಯುವುದು, ಕುಣಿಯುವುದು ಹೀಗೆ ಅರ್ಥಹೀನ ವಿಧಾನವನ್ನು ಆಯೋಜಿಸುವ ಬದಲಾಗಿ, ತಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದ ವಿದ್ಯಾ ಗುರುಗಳಾದ ಸುಬ್ಬರಾವ್, ಗುಂಡು ಭಟ್, ಶ್ರೀಮತಿ ಶೀಲಾ ರಾಮನ್, ಎ.ಬಿ.ಪುಟ್ಟಪ್ಪ, ಮಹಮದ್ ಶೇಕ್, ಮಂಜುನಾಥ, ಹರೀಶ್ ಅವರನ್ನು ಸಹ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗುರುಗಳನ್ನು ವಂದಿಸಿ, ಆಶೀರ್ವಾದ ಪಡೆಯುವ ಅರ್ಥಪೂರ್ಣವಾದ ಯೋಜನೆಯನ್ನು ರೂಪಿಸಿದ್ದಾರೆ.
