Categories
ತೀರ್ಥಹಳ್ಳಿ

ಮಂಜುನಾಥ ಗೌಡರಿಗೆ ಇಡಿ ಕಿರುಕುಳ: ಸಿಡಿದೆದ್ದ ತೀರ್ಥಹಳ್ಳಿ

ಮಂಜುನಾಥ ಗೌಡರಿಗೆ ಇಡಿ ಕಿರುಕುಳ: ಸಿಡಿದೆದ್ದ ತೀರ್ಥಹಳ್ಳಿ
– ಹಿರಿಯ, ಕಿರಿಯ ಮುಖಂಡರು, ಕಾರ್ಯಕರ್ತರಿಂದ ಆಕ್ರೋಶ
– ಬಿಜೆಪಿ ಸರ್ಕಾರದ ವಿರುದ್ಧ ಕಿಮ್ಮನೆ, ಸುಂದರೇಶ್ ವಾಗ್ದಾಳಿ

NAMMUR EXPRESS NEWS
ತೀರ್ಥಹಳ್ಳಿ: ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷಡಾ.ಆರ್‌ಎಂ ಮಂಜುನಾಥ ಗೌಡರಿಗೆ ರಾಜಕೀಯ ಷಡ್ಯಂತರ ರೂಪಿಸಿ ಅನಗತ್ಯ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ತೀರ್ಥಹಳ್ಳಿಯಲ್ಲಿ ಭಾರೀ ಹೋರಾಟ ಮಾಡಲಾಗಿದೆ.
ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಮಂಜುನಾಥ ಗೌಡರಿಗೆ ಒಂದು ಅಭಿನಂದನಾ ಕಾರ್ಯಕ್ರಮ ಮಾಡಬೇಕೆಂದು ಯೋಚನೆ ಮಾಡಿದ್ದೆವು. ವಿಜಯದೇವ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾದ್ಯಂತ ಒಂದು ರೀತಿಯಲ್ಲಿ ಕಾಂಗ್ರೆಸ್ ಸಂಘಟನೆ ಆಗುತ್ತಿದೆ. ಅದನ್ನು ತಪ್ಪಿಸಬೇಕು ಎಂದು ಮಂಜುನಾಥಗೌಡರಿಗೆ ಹಿಂಸೆ ಕೊಡುವಂತಹ ಪ್ರಯತ್ನವನ್ನು ಬಿಜೆಪಿ ಕೇಂದ್ರ ಸರ್ಕಾರ ಮಾಡುತ್ತಿದೆ. ಅದಕ್ಕೆ ಆರಗ ಜ್ಞಾನೇಂದ್ರ ಬೆಂಬಲವನ್ನು ನೀಡುತ್ತಿದ್ದಾರೆ ಇದನ್ನು ಖಂಡಿಸಿ ನಾವು ಇಂದು ಪ್ರತಿಭಟನೆ ಮಾಡಿದ್ದೇವೆ.

ಈ ಭಾರತೀಯ ಜನತಾ ಪಾರ್ಟಿ ಎನ್ನುವುದು ಏನಾದ್ರೂ ಪಾತ್ರೆ ತೊಳೆಯುವ ಮಿಷನ್ ಅದು? 10 ಕೋಟಿ ಜನ ಇದ್ದಾರೆ. ಅವರಲ್ಲಿ ಯಾರು ಭ್ರಷ್ಟರೇ ಇಲ್ಲವಾ? ಅವರು ಯಾರು ಮನೆ ಮಠ ಮಾಡಿಕೊಂಡಿಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹೆಚ್ಎಸ್ ಸುಂದರೇಶ್ ಮಾತನಾಡಿ, ಜಿಲ್ಲೆಯ ರೈತರು ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರೂ ಕೂಡ ನಮಗೆ ಒಳ್ಳೆಯ ಒಬ್ಬ ನಾಯಕ ಬಂದಿದ್ದಾನೆ, ನಮಗೆಲ್ಲ ನ್ಯಾಯ ಸಿಗುತ್ತದೆ ಮತ್ತು ನಮಗೆ ಸಹಾಯ ಮಾಡುವಂತಹ ಒಬ್ಬ ನಾಯಕ ಬಂದಿದ್ದಾನೆ ಎಂದು ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿತ್ತು. ಅದರಿಂದ ಬಿಜೆಪಿಯವರು ಯಾವುದೇ ಒಬ್ಬ ನಾಯಕ ಬೆಳೆದರೂ ಅದನ್ನು ಸಹಿಸುವುದಿಲ್ಲ ಏನಾದರೂ ಮಾಡಿ ಅದಕ್ಕೆ ಒಂದು ಕಪ್ಪು ಚುಕ್ಕೆಯನ್ನು ಇಡುವಂತಹ ಕೆಲಸ ಬಿಜೆಪಿ ಸದಾಕಾಲ ಮಾಡುತ್ತಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಮೇಲು ಇದೆ ಪ್ರೀತಿ ಸುಳ್ಳು ಕೇಸುಗಳನ್ನು ದಾಖಲಿಸಿ ಅವರನ್ನು ಜೈಲಿಗೆ ಕಳಿಸುವಂತಹ ಕೆಲಸವನ್ನು ಕೂಡ ಬಿಜೆಪಿ ಮಾಡಿತ್ತು. ಈಗ ಲೋಕಸಭಾ ಚುನಾವಣೆ ಗೆಲ್ಲಬೇಕೆಂದು ಬಿಜೆಪಿ ಈ ಷಡ್ಯಂತ್ರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಪಿಸಿಸಿ ಉಸ್ತುವಾರಿಯಾದ ಕಲಗೋಡು ರತ್ನಾಕರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಸರಕಾರಿ ರತ್ನ ಪುರಸ್ಕೃತ ಬಸವಾನಿ ವಿಜಯದೇವ್, ಮತ್ತು ಡಾಕ್ಟರ್ ಸುಂದರೇಶ್, ಬಿಪಿ ರಾಮಚಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ತುಲ್ಲಾ ಅಸಾದಿ, ರಾಘವೇಂದ್ರ ಶೆಟ್ಟಿ, ಕಟ್ಟೆಹಕ್ಲು ಕಿರಣ, ಪುಟ್ಟೋಡ್ಲು ರಾಘವೇಂದ್ರ, ಸಚೀಂದ್ರ ಹೆಗಡೆ, ಮಾಸ್ತಿಕಟ್ಟೆ ಸುಬ್ರಮಣ್ಯ, ಅಮರನಾಥ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಸುಶೀಲಾ ಶೆಟ್ಟಿ, ಕುರುವಳ್ಳಿ ನಾಗರಾಜ್, ಬಂಡೆ ವೆಂಕಟೇಶ್ ಮತ್ತು ಪಟ್ಟಣ ಪಂಚಾಯತಿಯ ಸದಸ್ಯರು ಹಾಗೂ ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.