ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಚುರುಕು.!
– ಮಳೆ ನಡುವೆ ಆತಂಕದ ಅಡಿಕೆ ಕೊಯ್ಲು
– ಭತ್ತದ ಗದ್ದೆಗಳು ಕೂಡ ಫಸಲಿನತ್ತ…
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಇದೀಗ ಚುರುಕುಗೊಂಡಿದ್ದು ಎಲ್ಲೆಡೆ ಅಡಿಕೆ ಕೊಯ್ಲು ಶುರುವಾಗಿದೆ. ಇನ್ನು ಅಡಿಕೆ ಕೊಯ್ಲಿನ ನಡುವೆ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಆತಂಕ ಕೂಡ ಎದುರಾಗಿದೆ. ಇನ್ನು ಬುಧವಾರ ರಾತ್ರಿ ಅತಿ ಹೆಚ್ಚು ಮಂಜು ಕಂಡುಬಂದಿದ್ದು ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಡಿಕೆ ಕೊಯ್ಲಿನ ಸಂಭ್ರಮ ಎಲ್ಲಾ ಕಳೆಗಟ್ಟಿದೆ. ಅಡಿಕೆ ಕೊನೆ ತೆಗೆಯುವ ಕೆಲಸ, ಕೊಯ್ಲು, ಒಣಗಿಸುವ ಕೆಲಸ ನಡೆಯುತ್ತಿದೆ. ಒಂದು ಕಡೆ ಮಳೆ ಎಲ್ಲದಕ್ಕೂ ಅಡ್ಡಿ ಮಾಡುತ್ತಿದೆ.
ವ್ಯಾಪಾರ ವಹಿವಾಟು ಕಡಿಮೆ!
ಇನ್ನು ಕೃಷಿ ಚಟುವಟಿಕೆ ಗರಿಗೆದರಿರುವುದರಿಂದ ಪಟ್ಟಣದಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ವ್ಯಾಪಾರ ವಹಿವಾಟಿನಲ್ಲೂ ಕೂಡ ಕಡಿಮೆಯಾಗಿದೆ. ಹೀಗಾಗಿ ಇನ್ನೊಂದೆರಡು ತಿಂಗಳುಗಳ ಕಾಲ ವಹಿವಾಟು ಕೂಡ ನಿಧಾನಗತಿಯಲ್ಲಿ ಸಾಗಲಿದೆ. ಇನ್ನು ಕೃಷಿ ಚಟುವಟಿಕೆಗಳು ಜೋರಾಗಿರುವುದರಿಂದ ಕಾರ್ಮಿಕರಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಆದರೆ ಮಲೆನಾಡಿನಲ್ಲಿ ಕಾರ್ಮಿಕರ ಕೊರತೆ ಕಂಡುಬರುತ್ತದೆ.