ತೀರ್ಥಹಳ್ಳಿಯಲ್ಲಿ ನಾಳೆ ಆರೋಗ್ಯ ತಪಾಸಣಾ ಶಿಬಿರ
– ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ಶಿಬಿರ
– ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ: ಸರ್ವರಿಗೂ ಸ್ವಾಗತ
– ನಿಮಗೆ ಆರೋಗ್ಯ ಸಮಸ್ಯೆ ಇದೆಯಾ? ಪರೀಕ್ಷಿಸಿಕೊಳ್ಳಿ..!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ತೀರ್ಥಹಳ್ಳಿ, ಡೇ-ನಲ್ಕ್ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಶಿವಮೊಗ್ಗ ಆದರ್ಶ ಆಸ್ಪತ್ರೆ, ಉಡುಪಿ ಆದರ್ಶ ಚಾರಿಟೇಬಲ್ ಟ್ರಸ್ಟ್ (ರಿ.) ಇವರ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ 22-12-2024 ಭಾನುವಾರ, ಬೆಳಿಗ್ಗೆ 8.00ರಿಂದ ಮಧ್ಯಾಹ್ನ 2.00ರ ವರೆಗೆ, ಶಾಂತವೇರಿ ಗೋಪಾಲಗೌಡ ರಂಗ ಮಂದಿರ, ತೀರ್ಥಹಳ್ಳಿಯಲ್ಲಿ ನೆರವೇರಲಿದೆ. ಉಚಿತ ಆರೋಗ್ಯ ತಪಾಸಣಾ ಸೌಲಭ್ಯದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದೆ. ತೀರ್ಥಹಳ್ಳಿ ಪಟ್ಟಣ ಮತ್ತು ತಾಲೂಕಿನ ಜನರು ಈ ಸೌಲಭ್ಯ ಬಳಸಿಕೊಳ್ಳಬಹುದು. ಎಲ್ಲಾ ರೋಗಗಳ ತಪಾಸಣೆ ನಡೆಯಲಿದೆ.
ಯಾವ ಯಾವ ರೋಗ ತಪಾಸಣೆ
* ರಕ್ತದೊತ್ತಡ (BP) ಪರೀಕ್ಷೆ
* ರಕ್ತದ ಸಕ್ಕರೆಯ ಅಂಶ
* ರಕ್ತದ ಕೊಬ್ಬಿನಾಂಶ
* ಇ ಸಿ ಜಿ ಸೇರಿದಂತೆ ಅನೇಕ ಅರೋಗ್ಯ ತಪಾಸಣೆ
ಭಾಗವಹಿಸುವ ತಜ್ಞ ವೈದ್ಯರು
ಡಾ|| ಜಿ.ಎಸ್. ಚಂದ್ರಶೇಖರ್, ಹಿರಿಯ ವೈದ್ಯಕೀಯ ತಜ್ಞರು
ಡಾ|| ಮೋಹನದಾಸ್ ಶೆಟ್ಟಿ, ಎಲುಬು ಮತ್ತು ಕೀಲು ತಜ್ಞರು
ಡಾ|| ಉದಯ್ ಪ್ರಭು, ಹಿರಿಯ ವೈದ್ಯಕೀಯ ತಜ್ಞರು
ಡಾ|| ಜಸ್ಪ್ರೀತ್ ಸಿಂಗ್ ದಿಲ್, ನರರೋಗ ಶಸ್ತ್ರ ಚಿಕಿತ್ಸಾ ತಜ್ಞರು
ಡಾ|| ವಿನೋದ್ ಕುಮಾರ್, ನರರೋಗ ತಜ್ಞರು
ಡಾ|| ಪ್ರಶಾಂತ್ ಶೆಟ್ಟಿ, ಹಿರಿಯ ಶಸ್ತ್ರ ಚಿಕಿತ್ಸಾ ತಜ್ಞರು
ಡಾ|| ದಮಯಂತಿ, ಪ್ರಸೂತಿ ತಜ್ಞರು
ಡಾ| ಭಾಸ್ಕರ ಎಂ.ಎನ್, ಮೂಗು, ಕಿವಿ, ಗಂಟಲು ರೋಗ ತಜ್ಞರು
ಡಾ|| ಅರುಣ್ ಶೆಟ್ಟಿ, ಚರ್ಮ ರೋಗ ತಜ್ಞರು
ಡಾ|| ವಿಶು ಕುಮಾರ್, ಹೃದ್ರೋಗ ತಜ್ಞರು
ಡಾ|| ಸುದೀಪ್ ಶೆಟ್ಟಿ, ಹಿರಿಯ ವೈದ್ಯಕೀಯ ತಜ್ಞರು
ಡಾ|| ಸುಧಾರಾಣಿ, ಕಣ್ಣಿನ ತಜ್ಞರು, ಪ್ರಸಾದ್ ನೇತ್ರಾಲಯ
ವೈದ್ಯರ ಪರೀಕ್ಷೆಯ ಸಮಯದಲ್ಲಿ ಅಗತ್ಯವೆಂದು ಕಂಡುಬರುವ ರೋಗಿಗಳಿಗೆ ಹೃದಯದ ಸ್ಕ್ಯಾನಿಂಗ್ (ಇಕೋ) ಹಾಗೂ ಟಿ.ಎಂ.ಟಿ. ಪರೀಕ್ಷೆಗಳನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆ ಅಗತ್ಯವಿದ್ದಲ್ಲಿ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು. ಸಾರ್ವಜನಿಕರು ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ಅಪೇಕ್ಷಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8197499810, 7760377924, 9980258400
