ಮಲೆನಾಡಲ್ಲಿ ಸಂಜೆ ಮಳೆ ಅಬ್ಬರ!
– ಇನ್ನು ಮೂರು ದಿನ ಮಳೆ ಅಲರ್ಟ್
– ಎಲ್ಲೆಲ್ಲಿ ಮಳೆ…? ಏನಿದು ಏಕಾಏಕಿ ಮಳೆ?
NAMMUR EXPRESS NEWS
ತೀರ್ಥಹಳ್ಳಿ /ಕೊಪ್ಪ: ಮಲೆನಾಡಿನ ಅನೇಕ ಕಡೆ ಭಾನುವಾರ ಸಂಜೆ ಭಾರೀ ಮಳೆ ಸುರಿದಿದೆ. ಮಳೆ ಆರ್ಭಟ, ಸಿಡಿಲು, ಗುಡುಗು ಕೆಲ ಕಾಲ ಗಾಬರಿ ಹುಟ್ಟಿಸಿತು. ತೀರ್ಥಹಳ್ಳಿ ಪಟ್ಟಣದಲ್ಲಿ ಭಾರೀ ಮಳೆ ಸುರಿದಿದ್ದು ತಾಲೂಕು ಸೇರಿ ಕೊಪ್ಪ, ಹೊಸನಗರ ತಾಲೂಕಲ್ಲಿ ಭಾರೀ ಮಳೆ ಆಗುತ್ತಿದೆ. ಒಂದು ಕಡೆ ಅಡಿಕೆ ಕೊಯ್ಲು ಶುರುವಾಗಿದೆ. ಈ ನಡುವೆ ಮಳೆ ಸುರಿಯುತ್ತಿದೆ
ರಾಜ್ಯದಲ್ಲಿ 3 ದಿನ ಭಾರೀ ಮಳೆ
ಮಲೆನಾಡು, ಕರಾವಳಿಯ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ನವೆಂಬರ್ 5 ರಿಂದ 7 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಇಂದಿನಿಂದ ನವೆಂಬರ್ 7 ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು,ಮಂಡ್ಯ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.