ತೀರ್ಥಹಳ್ಳಿಯಲ್ಲಿ ಹಿಟ್ ಅಂಡ್ ರನ್: ವ್ಯಕ್ತಿ ಬಲಿ!
– ಶೃಂಗೇರಿ ನದಿ ನೀರಿನ ಮಧ್ಯ ಸಿಕ್ಕಿಕೊಂಡ ಮೂವರು!
– ವಿವಾಹಿತೆಯ ನಗ್ನ ಪೋಟೋ ಕ್ಲಿಕ್ಕಿಸಿ ವೈರಲ್!
NAMMUR EXPRESS NEWS
ತೀರ್ಥಹಳ್ಳಿ: ಬಸ್ಸನ್ನು ಇಳಿದು ನಡೆದುಕೊಂಡು ಹೋಗುವಾಗ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತೀರ್ಥಹಳ್ಳಿ ಬಳಿ ಶುಕ್ರವಾರ ನಡೆದಿದೆ. 407 ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ವೃದ್ಧರು ಸಾವನ್ನಪ್ಪಿರುವ ಘಟನೆ ರಂಜದಕಟ್ಟೆ ಬಳಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಆಲಗೇರಿ ಸಮೀಪದ ಹೊಳೆಮೊದ್ಲು ಗ್ರಾಮದ ಚನ್ನಪ್ಪ ಗೌಡ 65 ವರ್ಷ ಮೃತಪಟ್ಟ ದುರ್ದೈವಿ. ತೀರ್ಥಹಳ್ಳಿಯಿಂದ ಬಸ್ ಇಳಿದು ಊರಿಗೆ ಹೋಗುವಾಗ ರಂಜದಕಟ್ಟೆ ಬಳಿ ಈ ಘಟನೆ ಸಂಭವಿಸಿದೆ. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಹೆಬ್ರಿ ಸಮೀಪ ಮೃತಪಟ್ಟಿದ್ದಾರೆ.
ಶೃಂಗೇರಿ ನದಿ ನೀರಿನ ಮಧ್ಯ ಸಿಕ್ಕಿಕೊಂಡ ಮೂವರು!
ಶೃಂಗೇರಿ: ತುಂಗಾ ಹರಿಯುವ ನೀರಿನ ಮಧ್ಯೆ ಸಿಕ್ಕಿಕೊಂಡ ಕುಟುಂಬ ಪ್ರವಾಸಕ್ಕೆಂದು ಬಂದಿದ್ದ ಒಂದೇ ಕುಟುಂಬದ ಮೂವರು ತುಂಗಾ ನದಿಯಲ್ಲಿ ಸಿಕ್ಕಿಕೊಂಡು ದಡ ಸೇರಲಾಗದೆ ನದಿಯ ಮಧ್ಯೆ ಪರದಾಟ ನಡೆಸಿದ ಘಟನೆ ನಡೆದಿದೆ. ಬಳಿಕ ರಕ್ಷಣಾ ಕಾರ್ಯಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕುಟುಂಬದ ರಕ್ಷಣೆ ಮಾಡಿದ್ದಾರೆ.
ವಿವಾಹಿತೆಯ ನಗ್ನ ಪೋಟೋ ಕ್ಲಿಕ್ಕಿಸಿ ವೈರಲ್: ಅರೆಸ್ಟ್.!
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಪುತ್ತೂರಿನ ವ್ಯಕ್ತಿಯೊಬ್ಬ ಕೊನೆಗೆ ಮಹಿಳೆಯನ್ನೇ ಬ್ಲ್ಯಾಕ್ ಮೇಲ್ ಮಾಡಿ ಹಣ ಕೀಳಲು ಯತ್ನಿಸಿದ ಬಗ್ಗೆ ದೂರು ದಾಖಲಾಗಿದೆ. ಪ್ರಶಾಂತ ಭಟ್ ಮಾಣಿಲ ಎಂಬಾತ ಈ ಕೃತ್ಯವೆಸಗಿದ್ದು, ಈತ ಪುತ್ತೂರಿನ ಆರ್ಲಪದವು ಮೂಲದವನು ಎಂದು ತಿಳಿದುಬಂದಿದೆ. ಮಹಿಳೆಗೆ ಸಂಗೀತದಲ್ಲಿ ಆಸಕ್ತಿ ಇದ್ದು, ಕ್ಲಬ್ ಹೌಸ್ ಆ್ಯಪ್‌ನಲ್ಲಿ ಹಾಡುತ್ತಿದ್ದಳು. 2020 ರಲ್ಲಿ ಆ್ಯಪ್ ಮೂಲಕವೇ ಪ್ರಶಾಂತ ಭಟ್ ಪರಿಚಯ ಮಾಡಿಕೊಂಡಿದ್ದನು. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮಕ್ಕೆ ತಿರುಗಿದೆ.
2023ರ ಜನವರಿ ತಿಂಗಳಲ್ಲಿ ಪ್ರಶಾಂತ್ ಮಹಿಳೆಯನ್ನು ಭೇಟಿಯಾಗಿದ್ದನು. ಲಾಡ್ಜ್‌ಲ್ಲಿ ರೂಂ ಮಾಡಿ, ಬಲವಂತವಾಗಿ ಮಹಿಳೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದ. ಅಲ್ಲದೇ ಅದೇ ಲಾಡ್ಡಿನಲ್ಲಿ ಮತ್ತೊಮ್ಮೆ ಇದೆ ಘಟನೆ ನಡೆದಿದೆ. ಈ ವೇಳೆ ಪ್ರಶಾಂತ ಆಕೆಯೊಂದಿಗೆ ಖಾಸಗಿ ಕ್ಷಣಗಳ ಫೋಟೋ ಸೆರೆ ಹಿಡಿದಿದ್ದಾನೆ. ಜತೆಗೆ ವಿಡಿಯೊ ಕಾಲ್ ಮಾಡಿ ಅಲ್ಲಿಯೂ ನಗ್ನ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ ಎಂದು ದೂರಲಾಗಿದೆ. ಮಾತ್ರವಲ್ಲದೆ ಮಹಿಳೆಯಿಂದ ಹಣಕ್ಕೂ ಬೇಡಿಕೆ ಇಟ್ಟಿದ್ದು ಒಮ್ಮೆ 25 ಸಾವಿರ ಹಣ ನೀಡಿದ್ದಾಳೆ. ಬಳಿಕ ಆರೋಪಿಯು ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ ಏಳು ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟಿದ್ದಾನೆ.