Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹಿಟ್ ಅಂಡ್ ರನ್: ಕಾರು ಪುಡಿ ಪುಡಿ!

ತೀರ್ಥಹಳ್ಳಿಯಲ್ಲಿ ಹಿಟ್ ಅಂಡ್ ರನ್: ಕಾರು ಪುಡಿ ಪುಡಿ!

– ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರು
– ಶಿವರಾಜಪುರದಲ್ಲಿ ಪಲ್ಟಿ ಹೊಡೆದ ಗೂಡ್ಸ್: ಗಂಭೀರ

NAMMUR EXPRESS NEWS

ತೀರ್ಥಹಳ್ಳಿ: ಮಳೆಗಾಲ ಹೆಚ್ಚಾದಂತೆ ಅಪಘಾತಗಳು ಕೂಡ ಹೆಚ್ಚಾಗುತ್ತಾ ಇದೆ. ತೀರ್ಥಹಳ್ಳಿಯಲ್ಲಿ ಗುರುವಾರ ರಾತ್ರಿ ಕಾರೊಂದು ಏಕಾಏಕಿ ಅಂಗಡಿಯತ್ತ ನುಗ್ಗಿದ ಪರಿಣಾಮ ಮತ್ತೊಂದು ಕಾರು ಸಂಪೂರ್ಣವಾಗಿ ಜಖಂ ಆದಂತಹ ಘಟನೆ ನಡೆದಿದೆ.

ರಿಡ್ಜ್ ಕಾರಿನಲ್ಲಿ ಅತಿ ವೇಗವಾಗಿ ಬಂದ ಕಾರು ವ್ಯಾಗನಾರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಾಗನರ್ ಕಾರು ಸಂಪೂರ್ಣ ಜಖಂ ಆಗಿದೆ. ಪಟ್ಟಣದ ಹೃದಯ ಭಾಗದಲ್ಲಿ ಈ ರೀತಿ ಘಟನೆ ನಡೆದಿದ್ದು ಕೂದಲೆಯ ಅಂತರದಲ್ಲಿ ಅನಾಹುತ ತಪ್ಪಿದೆ. ಒಂದು ವೇಳೆ ಅಲ್ಲಿ ಜನರಿದ್ದರೆ ಅನಾಹುತ ಸಂಭವಿಸುತ್ತಿತ್ತು. ಚಾಲಕನ ಮಿತಿಮೀರಿದ ವೇಗ ಹಾಗೂ ನಿರ್ಲಕ್ಷದಿಂದ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವರಾಜಪುರದಲ್ಲಿ ಗೂಡ್ಸ್ ವಾಹನ ಪಲ್ಟಿ: ಗಾಯ

ತೀರ್ಥಹಳ್ಳಿ ಶಿವರಾಜಪುರ ಬಳಿ ವಾಹನ ಒಂದು ಪಲ್ಟಿ ಹೊಡೆದಿದ್ದು ವಾಹನದಲ್ಲಿ ಇದ್ದವರಿಗೆ ಗಾಯಗಳು ಆಗಿವೆ. ಅವರನ್ನ ಜೆ ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.