ರಾಷ್ಟ್ರ ಮಟ್ಟದ ಕ್ರೀಡಾಪಟುಗೆ ತವರಲ್ಲಿ ಸನ್ಮಾನ!
– ಆರ್ಯನ್ ಅವರಿಗೆ ಗ್ರಾಮಸ್ಥರ ಅಭಿನಂದನೆ
– ಮುತ್ತುಗುಂಡಿ ಪ್ರವೀಣ್, ಅನಿತಾ ಸೇರಿ ಅನೇಕರು ಹಾಜರ್
NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಅನಿಲ್ ಕುರುವಳ್ಳಿ ಮತ್ತು ರಮ್ಯ ಅನಿಲ್ ದಂಪತಿಗಳ ಪುತ್ರ ಆರ್ಯನ್ ಅವರನ್ನು ಅವರ ನಿವಾಸದಲ್ಲಿ ಗುರುವಾರ ಸನ್ಮಾನಿಸಲಾಯಿತು.
ಮುತ್ತುಗುಂಡಿ ಕಾಂಪ್ಲೆಕ್ಸ್ ಮಾಲೀಕರು, ಯುವ ಉದ್ಯಮಿಗಳಾದ ಪ್ರವೀಣ್ ಮುತ್ತುಗುಂಡಿ, ಕುರುವಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನಿತಾ ಪ್ರವೀಣ್, ಪ್ರಮುಖರಾದ ಪದ್ಮನಾಭ ಕುರುವಳ್ಳಿ ನಾಗರಾಜ್ ಹೊರಬೈಲ್, ಪ್ರಮೋದ್ ಕುರುವಳ್ಳಿ, ನಜೀರ್, ಸುಬಾನ್, ಸಾಕೇಂದ್ರ, ನಾಗೇಂದ್ರ ಕುರುವಳ್ಳಿ, ಮನು ಮೇಲಿನ ಕುರುವಳ್ಳಿ ಇದ್ದರು.