ತೀರ್ಥಹಳ್ಳಿ ಪಟ್ಟಣದಲ್ಲಿ ಗಂಟೆಗೊಮ್ಮೆ ಗಂಟೆ ನಿನಾದ..!
– ನೂತನ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ದೊಡ್ಡ ಗಡಿಯಾರ
– ಜನತೆಗೆ ಅನುಕೂಲವಾಗುವಂತೆ ಗಡಿಯಾರ ಅಲರ್ಟ್
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣಕ್ಕೆ ಕಳೆ ನೀಡುವಂತೆ ತೀರ್ಥಹಳ್ಳಿಯ ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣವಾಗಿದ್ದು ವಿವಿಧ ಇಲಾಖೆಗಳು ಒಂದೇ ಸೂರಿನಡಿ ಸೇವೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಹಾಗೂ ಕಟ್ಟಡದ ಮೇಲ್ಭಾಗದಲ್ಲಿ ಗಡಿಯಾರ ಜೋಡಣೆ ಮಾಡಿದ್ದು ಇಡೀ ತೀರ್ಥಹಳ್ಳಿ ಪಟ್ಟಣಕ್ಕೆ ಗಂಟೆ ನಿನಾದವನ್ನು ಮೊಳಗಿಸುತ್ತಿದೆ. ಪ್ರತಿ ಗಂಟೆಗೂ ಜನತೆಗೆ ಸಮಯ ತಿಳಿಸುತ್ತಿದೆ. ಇದರಿಂದ ಪಟ್ಟಣದಲ್ಲಿರುವ ಅನೇಕ ಜನರಿಗೆ ಹಾಗೂ ಪಟ್ಟಣಕ್ಕೆ ಆಗಮಿಸಿರುವ ಜನರು ಸಮಯವನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಈ ದೊಡ್ಡ ಗಡಿಯಾರವು ತೀರ್ಥಹಳ್ಳಿ ಪಟ್ಟಣಕ್ಕೆ ಒಂದು ಕಳೆ ನೀಡಿದಂತಾಗಿದೆ. ಸಂಜೆ ಸಮಯಕ್ಕೆ ಈ ಗಂಟೆ ಶಬ್ದ ಎಲ್ಲರ ಗಮನ ಸೆಳೆಯುತ್ತಿದೆ.
