Categories
ತೀರ್ಥಹಳ್ಳಿ

ತೀರ್ಥಹಳ್ಳಿ ಹುಲಿವೇಷ ಸ್ಪರ್ಧೆಗೆ ಭಾರೀ ಜನಸ್ತೋಮ!

ತೀರ್ಥಹಳ್ಳಿ ಹುಲಿವೇಷ ಸ್ಪರ್ಧೆಗೆ ಭಾರೀ ಜನಸ್ತೋಮ!
– ಮದನ್ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಸ್ಪರ್ಧೆ!
– ಹುಲಿ ಕುಣಿತಕ್ಕೆ ಜನರು ಫುಲ್ ಫಿದಾ!

NAMMUR EXPRESS NEWS
ತೀರ್ಥಹಳ್ಳಿ: ಜಾನಪದ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತೀರ್ಥಹಳ್ಳಿ ದಸರಾ ಉತ್ಸವ ಸಮಿತಿ, ಮತ್ತು ಸಮಾಜ ಸೇವಕ, ಯುವ ಉದ್ಯಮಿ ಆರ್. ಮದನ್ ಪ್ರಯೋಜಕತ್ವದಲ್ಲಿ ವಿಜಯದಶಮಿ ದಿನದಂದು ಪಟ್ಟಣದ ಕುಶಾವತಿ ನೆಹರು ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಹುಲಿ ವೇಷ ಸ್ಪರ್ಧೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಸಂಚಾರ ನಡೆಸಿದ್ದ ಕಲಾವಿದರು ಸೇರಿ ಸುಮಾರು 30ಕ್ಕೂ ಹೆಚ್ಚು ಹುಲಿ ವೇಷದಾರಿಗಳು ಭಾಗವಹಿಸಿದ್ದು, ಒಬ್ಬರಿಗಿಂತ ಒಬ್ಬರು ಅತ್ಯುತ್ತಮವಾಗಿ ಹುಲಿ ಕುಣಿತ ಪ್ರದರ್ಶನ ಮಾಡಿದರು. ಹುಲಿವೇಷ ಕುಣಿತ ನೋಡಲು ಸಾವಿರಾರು ಮಂದಿ ಪಾಲ್ಗೊಂಡಿದ್ದು ಕುಣಿತಕ್ಕೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ.

ಸ್ಪರ್ಧೆಯಲ್ಲಿ ಉತ್ತಮವಾಗಿ, ಕ್ರಮಬದ್ಧವಾಗಿ ಹುಲಿ ಕುಣಿದ ಕೊನೆಯ ಮೂರು ಜನರನ್ನು ಆಯ್ಕೆ ಮಾಡಲಾಗಿದ್ದು ಮೊದಲ ಬಹುಮಾನ 20 ಸಾವಿರ ನಗದು ಹಾಗು ಆಕರ್ಷಕ ಟ್ರೋಫಿ ಪೂರ್ಣೇಶ್ ಇವರು ಪಡೆದಿದ್ದಾರೆ. ದ್ವಿತೀಯ ಬಹುಮಾನ 12.500 ನಗದು ಹಾಗು ಆಕರ್ಷಕ ಟ್ರೋಫಿಯನ್ನ ಧನಂಜಯ (ಧನು) ಮಿಲ್ಕೆರಿ, ತೃತೀಯ ಬಹುಮಾನ 7.500 ನಗದು ಹಾಗು ಆಕರ್ಷಕ ಟ್ರೋಫಿ ಮನೋಜ್ ಅವರು ಪಡೆದುಕೊಂಡಿದ್ದಾರೆ, ಅಲ್ಲದೆ ಭಾಗವಹಿಸಿದ ಎಲ್ಲಾ ವೇಷದಾರಿಗಳಿಗೆ 5000 ರೂ.ನಗದು ಬಹುಮಾನ, ತಾಸ ವಾದ್ಯ ನುಡಿಸಿದವರಿಗೂ ಪ್ರೋತ್ಸಾಹ ಧನ ನೀಡಲಾಯಿತು. ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಮಾರಿಕಾಂಬ ದೇವಸ್ಥಾನದ ಧರ್ಮಕರ್ತರಾದ ಜಯರಾಮ್ ಶೆಟ್ಟಿ, ಸತ್ಯನಾರಾಯಣ, ಚಿದಾನಂದ ಅವರು ಉತ್ತಮವಾಗಿ ಪ್ರದರ್ಶನ ನೀಡಿ, ಕ್ರಮಬದ್ಧವಾಗಿ ಕುಣಿತ ಮಾಡಿದ ಹುಲಿವೇಷದಾರಿಗಳನ್ನು ಆಯ್ಕೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ,ಆರ್. ಮದನ್,ಹಿರಿಯ ಸಹಕಾರಿ ನಾಗರಾಜ್ ಶೆಟ್ಟಿ, ಲಯನ್ಸ್ ಪಾಂಡುರಂಗಪ್ಪ, ದಸರಾ ಸಮಿತಿಯ ಸಂಚಾಲಕ ಸಂದೇಶ್ ಜವಳಿ, ಆರ್ಥಿಕ ಸಮಿತಿ ಸಂಚಾಲಕ ಸೊಪ್ಪು ಗುಡ್ಡೆ ರಾಘವೇಂದ್ರ ಡಿ ವೈ ಎಸ್. ಪಿ.ಗಜಾನನ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ಅಸಾದಿ,
ಪಟ್ಟಣ ಪಂಚಾಯಿತಿ ಎಲ್ಲ ಸದಸ್ಯರು, ಚಂದವಳ್ಳಿ ಸೋಮಶೇಖರ್,ಅಮರನಾಥ್ ಶೆಟ್ಟಿ, ಕುಕ್ಕೆ ಪ್ರಶಾಂತ್, ಮಧುರಾಜ್ ಹೆಗ್ಡೆ, ಮಹೇಶ್ ಗೌಡ, ಸುರೇಂದ್ರ, ತಾರಾನಾಥ್ ಶೆಟ್ಟಿ, ಪ್ರಶೋದ, ವಿನಯ್ ಕುಮಾರ್, ಸಂತೋಷ ಶೆಟ್ಟಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.