Categories
ತೀರ್ಥಹಳ್ಳಿ

ಮಂಜುನಾಥ ಗೌಡ ರಾಜಕೀಯ ಅಲೆಮಾರಿ.. ಅವರ ವಿರುದ್ಧ ತನಿಖೆಗೆ ಈಗಲೂ ಹೋರಾಟ ಮಾಡುತ್ತೇನೆ

ಮಂಜುನಾಥ ಗೌಡ ರಾಜಕೀಯ ಅಲೆಮಾರಿ.. ಅವರ ವಿರುದ್ಧ ತನಿಖೆಗೆ ಈಗಲೂ ಹೋರಾಟ ಮಾಡುತ್ತೇನೆ
– ಕಿಮ್ಮನೆ ರಾಜಕೀಯ ಲಾಭಕ್ಕೆ ನಾಟಕದ ಮಾತು: ಕಿಮ್ಮನೆ ವಿರುದ್ಧ ಸಿಡಿದೆದ್ದ ಆರಗ ಜ್ಞಾನೇಂದ್ರ
– ಪತ್ರಿಕಾಗೋಷ್ಠಿ ಉದ್ದಕ್ಕೂ ಕಿಮ್ಮನೆ ವಿರುದ್ಧ ಕಿಡಿ.. ಏನಿದು ಸ್ಟೋರಿ?

NAMMUR EXPRESS NEWS
ತೀರ್ಥಹಳ್ಳಿ: ಸಹಕಾರಿ ನಾಯಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಅರ್.ಎಂ.ಮಂಜುನಾಥ ಗೌಡ ಅವರ ಮನೆ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಮಾಜಿ ಗೃಹ ಸಚಿವ, ಹಾಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ. ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಿಮ್ಮನೆ ಅವರಿಗೆ ಡಿಸಿಸಿ ಬ್ಯಾಂಕ್ ಏನಾದರೂ ಆಗಲಿ. ರಾಜಕೀಯ ಲಾಭ ಅಷ್ಟೇ ಬೇಕು. ಒಂದು ಸಮಯದಲ್ಲಿ ಕೆಟ್ಟ ಭಾಷೆ ಬಳ್ಸಿ ಬೈದು ಈಗ ಅವರಿಂದ ರಾಜಕೀಯ ಲಾಭ ಪಡೆಯಲು ಅವರನ್ನು ಮೆಚ್ಚಿಸುತ್ತಿದ್ದಾರೆ. ನನಗೂ ರಾಘವೇಂದ್ರ ಅವರಿಗೂ ಈ ದಾಳಿಗೂ ಸಂಬಂಧ ಇಲ್ಲ. ನಾವು ಅಂತಹ ಸಣ್ಣ ಮಟ್ಟದ ಕೆಲಸ ಮಾಡುವುದಿಲ್ಲ. ನಮಗೆ ಜನರೇ ಗೆಲ್ಲಿಸಿದ್ದಾರೆ. ವಾಮಮಾರ್ಗದಲ್ಲಿ ಚುನಾವಣೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಗಾಂಧಿ ಅನುವಾದಿ ಎನ್ನುವ ಕಿಮ್ಮನೆ ಅವರು, ಜ್ಞಾನೇಂದ್ರ ಗೆಣಸು ಕೀಳುತ್ತಿದ್ರಾ ಎಂದಿದ್ದಾರೆ. ನಾನು ಗೆಣಸು ತಿಂದು ಬೆಳೆದವರು. ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಟುಕೊಂಡು ಬೆಳೆದಿಲ್ಲ. ಆರಗ ಕಾಯಂ ದೋಸೆ ಮಾಡಬೇಕು ಎಂದಿದ್ದರು. ಗಾಂಧಿ ಅವರ ಅನುಯಾಯಿ ಆದವರು ಸರಿಯಾಗಿ ಮಾತನಾಡಬೇಕು. ಜನ ನನಗೆ ಅಧಿಕಾರ ಕೊಟ್ಟಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಾಯಕರಾದ ನಾಗರಾಜ್ ಶೆಟ್ಟಿ, ಸಂದೇಶ್ ಜವಳಿ, ಚಂದವಳ್ಳಿ ಸೋಮಶೇಖರ್, ಪೂರ್ಣೇಶ್ ಕುರುವಳ್ಳಿ, ಬಸವರಾಜ್ ಹೊದಲ ಇತರರು ಇದ್ದರು.

ಆಗ ಮಂಜುನಾಥ ಗೌಡ ವಿರುದ್ಧ ತನಿಖೆ ಮಾಡಲು ಹೇಳಿದ್ದೆ ಕಿಮ್ಮನೆ

67 ಕೋಟಿ 76 ಲಕ್ಷ ಚಿನ್ನದ ಬದಲು ಕಬ್ಬಿಣ ಇಟ್ಟು ಮಂಜುನಾಥ ಗೌಡ ಹಗರಣ ಮಾಡಿದ್ದಾರೆ ಎಂದು ವಿಧಾನ ಸಭೆಯಲ್ಲಿ ಬೊಬ್ಬೆ ಹೊಡೆದಿದ್ದು ಕಿಮ್ಮನೆ ಅವರೇ. ಆಗ ಹಗರಣದ ತನಿಖೆ ಸಿಬಿಐ ಹಾಕಬೇಕು ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿ ಬಿ ರಿಪೊರ್ಟ್ ಕೊಡಿಸಿದ್ದು ಇವರೇ. ಹೇಗೆ ಬಂತು ಬಿ ರಿಪೋರ್ಟ್? ತಮ್ಮ ರಾಜಕೀಯ ಲಾಭಕ್ಕಾಗಿ ಕಿಮ್ಮನೆ ಏನೂ ಮಾಡಲು ಸಿದ್ಧ ಎಂದರು.

ಕಳ್ಳ ಸುಳ್ಳ ಎಂದರೂ ನಾನು ಹೇಳಿಲ್ಲ!

ಕಾಂಗ್ರೆಸ್ ಸೇರಿಸಿಕೊಂಡರು. ಕಳ್ಳ ಸುಳ್ಳ ಅಂತ ಸಭೆಯಲ್ಲಿ ಮಾತನಾಡಿದರು. ನಾನು ಯಾವುದೇ ಇಂತಹ ಶಬ್ದ ಬಳಸಲಿಲ್ಲ. ಈಗ ರಾಜಕೀಯ ಲಾಭಕ್ಕಾಗಿ ಮಂಜುನಾಥ ಗೌಡರ ಸೇರಿಸಿಕೊಂಡರು. ಅವರ ವೇದಿಕೆ ಇದ್ದರೆ ವೇದಿಕೆ ಕೂರುತ್ತಿರಲಿಲ್ಲ. ಆದರೆ ಈಗ ಏಕಾಏಕಿ ಪ್ರೇಮ ಬಂದಿದೆ ಎಂದು ಕಿಮ್ಮನೆ ವಿರುದ್ಧ ಕಿಡಿಕಾರಿದರು.

ರೈತರ ಹಣ ಮೋಸ ಆಗಿದ್ದು ಕೇಳಿದ್ದೇನೆ ಅಷ್ಟೇ..!

ನಾನು ಯಾವುದೇ ರಾಜಕೀಯ ಮಾಡಲಿಲ್ಲ. 62 ಕೋಟಿ ಯಾವಾಗ ಜಮೆ ಮಾಡುತ್ತೀರಿ. ಅದು ರೈತರ ಬ್ಯಾಂಕ್. ರೈತರಿಗೆ ತೊಂದರೆ ಆಗಬಾರದು ಎಂದು ಹೋರಾಟ ಮಾಡಿದ್ದೇನೆ. ಮಂಜುನಾಥ ಗೌಡ ಮನೆ ಮೇಲೆ ದಾಳಿ ಆಗಿದ್ದಕ್ಕೆ ಸಂತೋಷ್ ಪಡುವ ವ್ಯಕ್ತಿ ಯಾರು ಎಂದು ಎಲ್ಲರಿಗೂ ಗೊತ್ತಿದೆ. ರಾಘವೇಂದ್ರ, ನಾನು ಮನಸು ಮಾಡಿದರೆ ಏನಾದರೂ ಮಾಡುತ್ತಿದ್ದೆವು ರಾಜ್ಯ ಹಾಗೂ ಕೇಂದ್ರ ಸರ್ಕಾರ ನಮದು ಇದ್ದಾಗ ಮಾಡಬಹುದಿತ್ತು. ಆದರೆ ನಾವು ಮಾಡಲಿಲ್ಲ ಎಂದು ಆರಗ ಹೇಳಿದ್ದಾರೆ.
ಕಿಮ್ಮನೆಗೆ ಬ್ಯಾಂಕ್ ಬಗ್ಗೆ ಆಸಕ್ತಿ ಇಲ್ಲ. ರಾಜಕೀಯ ಇದ್ದರೆ ಬೇರೆ ರೀತಿಯಲ್ಲಿ ಮಾಡಿಕೊಳ್ಳಲಿ. ನಮ್ಮನ್ನು ಯಾಕೆ ಟಾರ್ಗೆಟ್ ಮಾಡಬೇಕು. ಕಿಮ್ಮನೆ ಗೊಂದಲದಲ್ಲಿ ಇದ್ದಾರೆ ಎಂದರು.

ಮಂಜುನಾಥ ಗೌಡ ರಾಜಕೀಯ ಅಲೆಮಾರಿ!

ರಾಜಕೀಯ ಅಲೆಮಾರಿಯನ್ನು ಪಕ್ಷಕ್ಕೆ ಸೇರಿಸಿಕೊಂಡು ನಾಟಕ ಮಾಡುತ್ತಿದ್ದಾರೆ. ಮಂಜುನಾಥ ಗೌಡರ ಮೇಲೆ ವಯುಕ್ತಿಕ ದ್ವೇಷ ಇಲ್ಲ. ಬ್ಯಾಂಕ್ ಹಣ ಏನಾಯಿತು ಎಂದು ನಾನು ಈಗಲೂ ಕೇಳುತ್ತೇವೆ. ರಾಜಕೀಯವಾಗಿ ಮುಗಿಸುವ ಯಾವುದೇ ತಂತ್ರ ಇಲ್ಲ. ಇಬ್ಬರೂ ಒಟ್ಟಾದರೂ ಏನು ಮಾಡಲಿಲ್ಲ. ನಾನು ಯಾವುದೇ ಲೂಟಿ ಮಾಡಿ ಹಣ ತಂದಿದ್ದರೆ ತನಿಖೆ ಮಾಡಲಿ. ವಯುಕ್ತಿಕ ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಬೆಳೆದ ಮೇಲೆ ರಾಜಕೀಯದಲ್ಲಿ ಸ್ಥಿತಿಪ್ರಜ್ಞೆ ಇರಬೇಕು. ಬ್ಯಾಂಕಿಗೆ ಹಣ ಕಟ್ಟಲು ಹೇಳಿ. ಎಲ್ಲರೂ ಸೇರಿ ಸನ್ಮಾನ ಮಾಡೋಣ. ಕಿಮ್ಮನೆಗೂ ಭಾಷಣ ಮಾಡೋಣ ಎಂದು ಟೀಕಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.