ಕೋಣಂದೂರು ಬಳಿ ಕೋಳಿ ಅಂಕದ ಮೇಲೆ ದಾಳಿ!
– 30ಕ್ಕೂ ಹೆಚ್ಚು ಕೋಳಿ ವಶ: ಮೂವರು ಅರೆಸ್ಟ್
– ಜೂಜು ಆಡಿಸುತ್ತಿದ್ದವರು ಪಾರಾಗಿದ್ದು ಹೇಗೆ..?
– ಸ್ಥಳೀಯರ ಆಕ್ರೋಶ: ಅವರನ್ನು ಬಂಧಿಸಲಾಗುತ್ತಾ?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಕಟ್ಟೆಗದ್ದೆಯಲ್ಲಿ ಕೋಳಿ ಅಂಕದ ಅಡ್ಡೆ ಮೇಲೆ ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ.
ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರ ನೇತೃತ್ವದಲ್ಲಿ ತೀರ್ಥಹಳ್ಳಿ ಪೊಲೀಸರ ಮಿಂಚಿನ ಕಾರ್ಯಚರಣೆ ನಡೆಸಿ ಕೋಳಿ ಅಂಕದ ಮೇಲೆ ದಾಳಿ ಮಾಡಿ 30ಕ್ಕೂ ಹೆಚ್ಚು ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ. ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ರಾಮಚಂದ್ರ, ವಿಜಯ್, ರಮೇಶ್ ಎಂಬುವರನ್ನು ಅರೆಸ್ಟ್ ಮಾಡಲಾಗಿದೆ.
ಮುಖ್ಯ ಆರೋಪಿಗಳು ಪಾರಾದ್ರಾ?
ಪ್ರಕರಣದಲ್ಲಿ ಮುಖ್ಯ ಆರೋಪಿಗಳನ್ನು ಬಚಾವ್ ಮಾಡಲಾಗಿದೆಯಾ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಕೋಳಿ ಅಡ್ಡೆ ಜಾಗ ಕೊಟ್ಟವರು ಹಾಗೂ ಆಟ ಆಡಿಸುತ್ತಿದ್ದವರ ಹೆಸರು ಎಲ್ಲೂ ಕಾಣುತ್ತಿಲ್ಲ ಎಂಬ ಆರೋಪ ಮಾಡಲಾಗಿದೆ. ಮುಖ್ಯ ಆರೋಪಿಗಳನ್ನು ಬಂಧಿಸದಿದ್ರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಇದೇ ಆರೋಪಿಗಳು ಬೀಟೆ ನಾಟ ಸೇರಿದಂತೆ ಹಲವು ಪ್ರಕರಣದಲ್ಲಿ ಇದ್ದರು ಎಂದು ಹೇಳಲಾಗಿದೆ.
ಕಾಲೇಜು ಹುಡುಗರು, ಯುವಕರೇ ಟಾರ್ಗೆಟ್
ಕೋಳಿ ಅಂಕಕ್ಕೆ ಯುವಕರು, ಕಾಲೇಜು ಹುಡುಗರು ದುಡ್ಡು ಸುರಿಯುವುದಲ್ಲದೆ ತಮ್ಮ ಅಮೂಲ್ಯ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
