Categories
ತೀರ್ಥಹಳ್ಳಿ

ಕುರುವಳ್ಳಿ ಬಂಡೆಯಲ್ಲಿ ಲಾಭಿಯಿಂದ ಜನರಿಗೆ ಕಷ್ಟ

ಕುರುವಳ್ಳಿ ಬಂಡೆಯಲ್ಲಿ ಲಾಭಿಯಿಂದ ಜನರಿಗೆ ಕಷ್ಟ
– ಕಲ್ಲು ದರ ದುಬಾರಿ ಸಾಧ್ಯತೆ?: ಹೋರಾಟಕ್ಕೆ ಸಜ್ಜು
– ಲೀಸ್ ಗುತ್ತಿಗೆದಾರರಿಂದ ಕಮಿಷನ್ ಲಾಬಿ
– ಕಲ್ಲು ಲಾಭಿಯಿಂದ ಹಿಂದೆ ಸರಿಯಾದಿದ್ದರೆ ಉಗ್ರ ಹೋರಾಟ
– ಮೇಲಿನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪಿ. ಮಂಜುನಾಥ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕುರುವಳ್ಳಿ ಬಂಡೆಯಲ್ಲಿ ಲಾಭಿಯಿಂದ ಜನರಿಗೆ ಕಷ್ಟವಾಗುವ ಸೂಚನೆ ಕಾಣುತ್ತಿದೆ.
ಲೀಸ್ ಗುತ್ತಿಗೆದಾರರಿಂದ ಕಮಿಷನ್ ಲಾಬಿ ನಡೆಯುತ್ತಿದೆ. ಇದರಿಂದ ಕಲ್ಲು ಉತ್ಪನ್ನ ದುಬಾರಿ ಆಗುವ ಜತೆಗೆ ಸ್ಥಳೀಯರಿಗೆ ಉದ್ಯೋಗಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಗುತ್ತಿಗೆ ಹಿಡಿದವರು ಕಲ್ಲು ಲಾಬಿಯಿಂದ ಹಿಂದೆ ಸರಿಯಾದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಮೇಲಿನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪಿ. ಮಂಜುನಾಥ್ ಹೇಳಿದ್ದಾರೆ.

ಏನಿದು ವಿವಾದ?!:

ಇತ್ತೀಚಿಗೆ ಮೇಲಿನ ಕುರುವಳ್ಳಿಯ ಸರ್ವೆ ನಂಬರ್ 38ರಲ್ಲಿ 6 ಎಕರೆ ಗಣಿ ಪ್ರದೇಶ ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ಆಗಿದ್ದು, ಅದರಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶವನ್ನು ಈಗಾಗಲೇ ಗುತ್ತಿಗೆದಾರರು ಕಲ್ಲುಕ್ವಾರಿಯಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.ಈ ಗಣಿ ಪ್ರದೇಶದಲ್ಲಿ ಸ್ಥಳೀಯವಾಗಿ ಈ ಹಿಂದೆ ಲಿಸ್ ಹಿಡಿದ ಭಾಸ್ಕರ್ ರಾವ್ ಅವಧಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನೂರಾರು ಕಾರ್ಮಿಕರು ಇದೀಗ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಪ್ರದೇಶದಲ್ಲಿ ಸುಮಾರು 35ಕ್ಕೂ ಹೆಚ್ಚು ಮಂದಿ ಕಲ್ಲು ಬಂಡೆ ಮಾಲೀಕರು ಸಾಕಷ್ಟು ಬಾರಿ ಗಣಿ ಇಲಾಖೆಗೆ ನಮಗೆ ಕಾನೂನು ಪ್ರಕಾರ ಲೀಸ್ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದರು, ಇವರ ಅರ್ಜಿಗಳನ್ನ ಪರಿಗಣನೆಗೆ ತೆಗೆದುಕೊಳ್ಳದೆ, ಕಾರ್ಮಿಕರಿಗೆ ಕೆಲಸ ಕೊಟ್ಟು ಅವರ ಬದುಕಿಗೆ ಆಸರೆಯಾದ ಅನೇಕ ಮಾಲೀಕರ ವಿರುದ್ಧ ಸಾಕಷ್ಟು ಮೊಕದ್ದಮೆ ದಾಖಲು ಮಾಡಿ, ಅವರನ್ನು ಹೈರಾಣು ಮಾಡಲಾಗಿದೆ.

ಇತ್ತೀಚಿಗೆ ಗಣಿ ಇಲಾಖೆಯ ಕೆಲವು ಅಧಿಕಾರಿಗಳು ಕಲ್ಲು,ಮರಳು ಗಣಿ ಮಾಫಿಯಾದ ರಿಂಗ್ ಮಾಸ್ಟರ್ ಗೆ ತಲೆಬಾಗಿ ಈ ಭಾಗದಲ್ಲಿ ಕಾನೂನು ಬಾಹಿರವಾಗಿ, ಜನ ವಸತಿ ಪ್ರದೇಶ,ರಾಷ್ಟ್ರೀಯ ಹೆದ್ದಾರಿ, ಅರಣ್ಯ ಪ್ರದೇಶವಿದ್ದರೂ, ಗಣಿಗಾರಿಕೆಗೆ ಅವಕಾಶ ಕಲ್ಪಿಸಿಕೊಟ್ಟಿದೆ, ಲೀಸ್ ಹಿಡಿದ ಕೆಲವು ಗುತ್ತಿಗೆದಾರರು ಈ ಪ್ರದೇಶದಲ್ಲಿ ಕೆಲಸ ಮಾಡಿ ಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಕಾರ್ಮಿಕರಿಂದ ಈಗ ಕಾರ್ಮಿಕರಿಂದ ಕಮಿಷನ್ ಸುಲಿಗೆಗೆ ಇಳಿದಿದ್ದು,ಕಲ್ಲು ಬೇಲಿ ಕಂಬ, ಚಪ್ಪಡಿ, ಸೈಜುಕಲ್ಲು, ಒಂದೊಂದು ಕಟ್ಟಡ ಸಾಮಗ್ರಿಗಳಿಗೆ ಒಂದೊಂದು ರೀತಿಯ ಕಮಿಷನ್ ನೀಡಬೇಕು. ಇಲ್ಲವಾದರೆ ಕೆಲಸ ಮಾಡಬೇಡಿ ಎಂದು ತಾಕಿತ್ತು ಮಾಡುತ್ತಿದ್ದಾರೆ, ಈ 4 ಎಕರೆ ಪ್ರದೇಶದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕಾರ್ಮಿಕರು ಇದೇ ಕಲ್ಲು ಬಂಡೆಯನ್ನು ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದು,ನಮಗೆ ಕಲ್ಲು ತೆಗೆಯುವುದಕ್ಕೆ ಕಾನೂನು ಪ್ರಕಾರ ಅವಕಾಶ ಮಾಡಿಕೊಡಿ ಈ ಹಿಂದೆ ಗುತ್ತಿಗೆ ಹಿಡಿದ ಗುತ್ತಿಗೆದಾರರು ಪರ್ಮಿಟ್ ಬಿಲ್ಲಿಗೆ ಹಣ ತೆಗೆದುಕೊಳ್ಳುತ್ತಿದ್ದರು.

ನಿಮಗೆ ಕಮಿಷನ್ ನೀಡಿದರೆ ನಾವು ಕಲ್ಲಿನ ದರ ಹೆಚ್ಚಿಸಬೇಕಾಗುತ್ತದೆ, ಇದರಿಂದ ಬಡವರಿಗೆ, ರೈತರಿಗೆ ಸಮಸ್ಯೆಯಾಗುತ್ತದೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ ಎಂದು ಹೇಳುತ್ತಿದ್ದರು, ನೀವು ಕಮಿಷನ್ ಕೊಟ್ಟರೆ ಬಂಡೆ ಮಾಡಿ ಇಲ್ಲವೇ ಕೆಲಸ ನಿಲ್ಲಿಸಿ ಎಂದು ತಾಕಿತ್ತು ಮಾಡುತ್ತಿದ್ದು,ಕಾರ್ಮಿಕರ ಮೇಲೆ ಇವರ ದರ್ಪ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ,
ಬಂಡೆ ಕಾರ್ಮಿಕರ ಜೀವನ ನಿರ್ವಹಣೆಗೆ, ಬದುಕಿಗೆ ತೊಂದರೆ ಮಾಡುತ್ತಿರುವ ಕೆಲವು ಗಣಿ ಮಾಫಿಯದ ಲಿಸ್ ಗುತ್ತಿಗೆದಾರರು ಈ ಕಮಿಷನ್ ಲಾಭಿಯಿಂದ ತಕ್ಷಣ ಹಿಂದೆ ಸರಿಯದಿದ್ದರೆ,ಕಾರ್ಮಿಕರ ಬದುಕಿಗಾಗಿ ಮೇಲಿನ ಕುರುವಳ್ಳಿ ಹಿತರಕ್ಷಣಾ ವೇದಿಕೆ ಶೀಘ್ರದಲ್ಲೇ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮೇಲಿನ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಪಿ.ಮಂಜುನಾಥ್ ಅವರು ಈ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.