Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕನ್ನಡ ಭವನ ಉದ್ಘಾಟನೆ

ತೀರ್ಥಹಳ್ಳಿ ಕನ್ನಡ ಭವನ ಉದ್ಘಾಟನೆ
– ಕಸಾಪ ಅಧ್ಯಕ್ಷ ರಮೇಶ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕ್ರಮ
– ತೀರ್ಥಹಳ್ಳಿ ಸಾಹಿತ್ಯ ಕ್ಷೇತ್ರಕ್ಕೆ ಸಿಹಿ ಸುದ್ದಿ

NAMMUR EXPRESS NEWS
ತೀರ್ಥಹಳ್ಳಿ: ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ತೀರ್ಥಹಳ್ಳಿ ಕನ್ನಡ ಭವನ ಉದ್ಘಾಟನಾ ಸಮಾರಂಭ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬಾಳೆಬೈಲ್ ನಲ್ಲಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
ತೀರ್ಥಹಳ್ಳಿ ತಾಲ್ಲೂಕು ಕಸಾಪ ಅಧ್ಯಕ್ಷ ಟಿ‌ ಕೆ ರಮೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶಾಸಕ ಆರಗ ಜಾನ್ಞೇಂದ್ರ ಅವರು ಉದ್ಘಾಟನೆ ನೇರೆವೆರಿಸಿದರು. ಮುಖ್ಯ ಅಥಿತಿಗಳಾಗಿ ಡಿಸಿಸಿ ಬ್ಯಾಂಕ್ ಡಾ.ಆರ್. ಎಂ ಮಂಜುನಾಥ ಗೌಡ, ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ್, ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ ಮಂಜುನಾಥ, ಗೀತಾ ರಮೇಶ್, ನೆಂಪೆ ದೇವರಾಜ್ ಮಹಾಬಲೇಶ್ವರ ಹೆಗ್ಡೆ, ಶಬನಮ್, ರಾಘವೇಂದ್ರ ಶೆಟ್ಟಿ ರತ್ನಾಕರ್ ಶೆಟ್ಟಿ, ಮಂಜುಳಾ ನಾಗೇಂದ್ರ ವೇದಿಕೆಯಲ್ಲಿ ಇದ್ದರು.

ತೀರ್ಥಹಳ್ಳಿ ಸಾಹಿತ್ಯ ಕ್ಷೇತ್ರದ ಮೈಲುಗಲ್ಲು

ತೀರ್ಥಹಳ್ಳಿ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಕನ್ನಡ ಭವನ ಉದ್ಘಾಟನೆ ಆಗಿರುವುದು ಸಾಹಿತ್ಯ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.