Categories
ತೀರ್ಥಹಳ್ಳಿ

ತೀರ್ಥಹಳ್ಳಿ ರೋಟರಿ ನವೀಕರಣ ಕಟ್ಟಡ ಉದ್ಘಾಟನೆ

ತೀರ್ಥಹಳ್ಳಿ ರೋಟರಿ ನವೀಕರಣ ಕಟ್ಟಡ ಉದ್ಘಾಟನೆ

– 8 ಲಕ್ಷ ವೆಚ್ಚದಲ್ಲಿ ನವೀಕರಣ: ಶಾಸಕ ಆರಗ ಜ್ಞಾನೇಂದ್ರ ಉದ್ಘಾಟನೆ
– ರೋಟರಿ ಪದಾಧಿಕಾರಿಗಳು, ಸದಸ್ಯರು ಹಾಜರ್

NAMMUR EXPRESS NEWS
ತೀರ್ಥಹಳ್ಳಿ: ಒಂದು ಸಂಸ್ಥೆಯ ಅಭಿವೃದ್ಧಿಗೆ ಸುಸಂಸ್ಕೃತ ಮನಸ್ಸುಗಳು ಬುನಾದಿಯಾಗಿರುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ ಮತ್ತು ರೋಟರಿ ಕ್ಲಬ್ ತೀರ್ಥಹಳ್ಳಿ ಇದರ ಸದಸ್ಯರ ನೆರವಿನಿಂದ ನವೀಕೃತ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ರೋಟರಿ ಕ್ಲಬ್ ತೀರ್ಥಹಳ್ಳಿ ಕಳೆದ 55 ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ, ನಮ್ಮ ತಾಲೂಕಿಗೆ ಅತಿ ಅವಶ್ಯಕವಾದ ರಕ್ತ ನಿಧಿ ಕೇಂದ್ರವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹೀಗಿದ್ದರೂ ಹಳೆಯ ಕಟ್ಟಡದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದರು., ಇದನ್ನು ಮನಗಂಡು ಹಿಂದಿನ ಸಾಲಿನಲ್ಲಿ 4 ಲಕ್ಷ ರೂಪಾಯಿ ಹಣವನ್ನು ನೀಡಿದ್ದು , ನಂತರ 4 ಲಕ್ಷ ರೂಪಾಯಿ ರೋಟರಿ ಸದಸ್ಯರು ಒಟ್ಟುಗೂಡಿಸಿ ಕಟ್ಟಡವನ್ನು ನವೀಕರಿಸಲಾಗಿದೆ. ನಿಮ್ಮ ಶ್ರಮಕ್ಕೆ ಶುಭವಾಗಲಿ ಎಂದು ಆರಗ ಜ್ಞಾನೇಂದ್ರ ಹಾರೈಸಿದರು.

ರೋಟರಿ ಕ್ಲಬ್ ತೀರ್ಥಹಳ್ಳಿ ಇವರು ನಡೆದು ಬಂದ ದಾರಿಯನ್ನು ಹಾಗೂ ಈ ಕಟ್ಟಡಕ್ಕೆ ಸಹಾಯ ಮಾಡಿದವರನ್ನು ಈ ದಿನ ಗುರುತಿಸಲಾಗುವುದೆಂದು ಮತ್ತು ರೊ ಡಭರತ್ ಕುಮಾರ್ ಕೊಡ್ಲು ಇವರ ಕಳೆದ ಎರಡು ತಿಂಗಳಿಂದ ಕಟ್ಟಡದ ಅಭಿವೃದ್ಧಿಗೆ ಬಹಳವಾಗಿ ಶ್ರಮಿಸಿದರೆಂದು ರೊ ನಾಗರಾಜ್ ಎಸ್ ,ಪೂರ್ವ ಅಧ್ಯಕ್ಷರು ರೋಟರಿ ಕ್ಲಬ್ ತೀರ್ಥಹಳ್ಳಿ ಇವರು ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು. ರೊ ಭರತ್ ಕುಮಾರ್ ಕೋಡ್ಲು ಅಧ್ಯಕ್ಷರು ರೋಟರಿ ಕ್ಲಬ್ ತೀರ್ಥಹಳ್ಳಿ ಎಲ್ಲರನ್ನು ಸ್ವಾಗತಿಸಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು ಮತ್ತು ಆರಗ ಜ್ಞಾನೇಂದ್ರ ಅವರನ್ನು ಸನ್ಮಾನಿಸಿದರು.

ಆರಗ ಜ್ಞಾನೇಂದ್ರ ಅವರು ರೊ ಕೃಷ್ಣಸ್ವಾಮಿ ಕಲ್ಲಹಳ್ಳ ಮತ್ತು ರೊ ಉಮಾ ಸ್ವಾಮಿ ಇವರನ್ನು ಗೌರವಿಸಿದರು. ರೊ ಕೆ ಪಿ ಎಸ್ ಸ್ವಾಮಿ ,ಪೂರ್ವ ಅಧ್ಯಕ್ಷರು ಇವರು ಕಾರ್ಯಕ್ರಮ ನಿರೋಪಿಸಿ ಡಾ. ನಾರಾಯಣಸ್ವಾಮಿ ಇವರ ಸಹಕಾರವನ್ನು ನೆನೆದರು. ರೋಟರಿ ಮಾಜಿ ಅಧ್ಯಕ್ಷರಾದ ರೊ ಬಳಗಟ್ಟೆ ಗಿರಿಶ್ , ರೊ ಅಂಬಳಿಕೆ ಗಿರೀಶ್, ರೊ ಮನೋಜ್ ಕುಮಾರ್, ರೊ ವಾಣಿ ಗಣೇಶ್ ಅಧ್ಯಕ್ಷರು ಇನ್ನರ್ವೀಲ್ , ಮತ್ತು ರೋಟರಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು .ರೋಟರಿ ಶಿಶುವಿಹಾರದ ಮುಖ್ಯ ಶಿಕ್ಷಕಿಸ್ವಪ್ನ ಆಚಾರ್ಯ ಪ್ರಾರ್ಥನೆಯನ್ನು ಮಾಡಿದರು. ರೊ ಎಂ ಆರ್ ಮಂಜುನಾಥ್ ಕಾರ್ಯದರ್ಶಿ ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.