Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕಿನಲ್ಲಿ ಹೆಚ್ಚಿದ ಬೈಕ್ ಕಳ್ಳತನ..!

ತೀರ್ಥಹಳ್ಳಿ ತಾಲೂಕಿನಲ್ಲಿ ಹೆಚ್ಚಿದ ಬೈಕ್ ಕಳ್ಳತನ..!
– ಕನ್ನಂಗಿ ಭಾಗದಲ್ಲಿ ದಿನೇ ದಿನೇ ಬೈಕ್ ಕಳ್ಳರ ಹಾವಳಿ
– ಹೊರಗಡೆಯಿಂದ ಬಂದವರ ಕೈಚಳಕ: ಪೋಲಿಸ್ ಇಲಾಖೆಯ ನಿರ್ಲಕ್ಷ್ಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹಲವೆಡೆ ಇದೀಗ ಬೈಕ್ ಕಳ್ಳತನ ದಿನೇ ದಿನೇ ಹೆಚ್ಚುತ್ತಿದೆ. ಕನ್ನಂಗಿ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಅನೇಕ ಕಡೆ ನಾಲ್ಕೈದು ಬೈಕುಗಳನ್ನು ಕಳವು ಮಾಡಲು ಪ್ರಯತ್ನ ಮಾಡಲಾಗಿದೆ. ಒಂದು ಕಡೆ ಮೂರು ಬೈಕ್ ಗಳನ್ನು ಕಳ್ಳತನ ಮಾಡಲಾಗಿದ್ದು, ಒಂದು ಬೈಕ್ ನಾಪತ್ತೆಯಾಗಿದ್ದು, ಎರಡು ಬೈಕ್ ಗಳನ್ನು ಸ್ಥಳಿಯವಾಗಿ ಅಲ್ಲೇ ಹಳ್ಳದ ಬದಿಯಲ್ಲಿ ಬಿಟ್ಟು ಹೋಗಲಾಗಿದೆ. ಇನ್ನು ಕೋಣಂದೂರು ಭಾಗದಲ್ಲಿ ಕೂಡ ಕಳ್ಳತನದ ಮಾಹಿತಿ ಲಭ್ಯವಾಗಿದೆ. ಹಣಗೆರೆಯಲ್ಲಿ ಅನೇಕ ಪ್ರವಾಸಿಗರು ಬರುವುದರಿಂದ ಈ ಭಾಗದಲ್ಲಿ ಕಳ್ಳತನದ ಹೆಚ್ಚುತ್ತಿದ್ದು ಕನ್ನಂಗಿಯಲ್ಲಿ ಕೂಡ ಪ್ರಕರಣ ದಾಖಲಾಗಿದೆ. ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಮೌನ ವಹಿಸುತ್ತಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಹೀಗಾಗಿ ತಕ್ಷಣ ಬೈಕ್ ಕಳ್ಳರ ಬಗ್ಗೆ ಎಚ್ಚರ ವಹಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ.

ಅಡಿಕೆ ಕೊಯ್ಲು: ಕಳ್ಳರ ಭೀತಿ..!

ಅಡಿಕೆ ಕೊಯ್ಲು ಶುರುವಾಗಿರುವುದರಿಂದ ಅಡಿಕೆ ಬಗ್ಗೆ ಕೂಡ ಜನ ನಿಗಾ ವಹಿಸಬೇಕಾಗಿದೆ. ಈ ಬಗ್ಗೆ ಪೊಲೀಸರು ಒಂದು ಪ್ರಕಟಣೆ ಹೊರಡಿಸಬೇಕಾಗಿದೆ. ಇನ್ನು ಸ್ಥಳೀಯವಾಗಿ ಹೊರಗಡೆ ಭಾಗದಿಂದ ಬಂದ ಅಪರಿಚಿತರ ಬಗ್ಗೆ ಗಮನವಿಡ ಬೇಕಾಗಿದೆ. ಸ್ಥಳೀಯ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೊರಗಡೆಯಿಂದ ಬಂದ ಅಪರಿಚಿತರ ಮಾಹಿತಿ ಸಂಗ್ರಹ ಮಾಡಬೇಕಿದೆ. ಹೀಗಾದಲ್ಲಿ ಅಪರಾಧಗಳನ್ನು ತಡೆಯಬಹುದಾಗಿದೆ. ಆದರೆ ಈ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂಬ ಆಕ್ರೋಶ ಇದೀಗ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.