Categories
ತೀರ್ಥಹಳ್ಳಿ

ರಾತ್ರೋ ರಾತ್ರಿ ನೆಟ್ಟಿದ್ದ ಗದ್ದೆ ಕಡಿದು ಹಾಕಿದರು!

ರಾತ್ರೋ ರಾತ್ರಿ ನೆಟ್ಟಿದ್ದ ಗದ್ದೆ ಕಡಿದು ಹಾಕಿದರು!
– ತೀರ್ಥಹಳ್ಳಿ ತಾಲೂಕಿನ ಶಿರಿಗಾರಿನಲ್ಲಿ ಘಟನೆ
– ತೀರ್ಥಹಳ್ಳಿ ಪಟ್ಟಣದಲ್ಲಿ ಹೆಚ್ಚಾದ ನಾಯಿ, ಬೀಡಾಡಿ ದನದ ಕಾಟ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ನೊಣಬೂರು ಬಳಿ ಶಿರಿಗಾರಿನಲ್ಲಿ ನೆಟ್ಟಿದ್ದ ಭತ್ತದ ಗದ್ದೆಯನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಗದ್ದೆಯನ್ನು ನೆಟ್ಟು ಕೆಲ ದಿನಗಳಾಗಿದ್ದು ಇದೀಗ ಸುಮಾರು 1 ಗದ್ದೆಯನ್ನು ಸಂಪೂರ್ಣ ಕಡಿಯಲಾಗಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ತೀರ್ಥಹಳ್ಳಿಯಲ್ಲಿ ಬೀದಿ ನಾಯಿ, ಬೀಡಾಡಿ ದನದ ಕಾಟ!

ತೀರ್ಥಹಳ್ಳಿ ಪಟ್ಟಣದಲ್ಲಿ ಬೀದಿ ನಾಯಿ ಹಾಗೂ ಬೀಡಾಡಿ ದನಗಳ ಕಾಟ ದಿನೇ ದಿನೇ ಹೆಚ್ಚುತ್ತಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೀಡಾಡಿ ದನಗಳ ಕಾಳಗ ಜೀವ ಭಯ ಉಂಟು ಮಾಡಿದೆ. ಇನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾಗ್ಗೇವಿ ಶಾಲೆಯ ಬಳಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಶಾಲೆಗೆ ಬರುವ ಮಕ್ಕಳಿಗೆ ಇದರಿಂದ ತೊಂದರೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಪುಟ್ಟ ಪುಟ್ಟ ಮಕ್ಕಳು ಬರುತ್ತಿರುತ್ತಾರೆ. ಈಗ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಮಕ್ಕಳಿಗೆ ತೊಂದರೆಯಾಗುವ ಮುನ್ನ ಕೌನ್ಸಿಲರ್ ಗಮನ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.