ಈಡಿಗರ ಸಂಘದ ಅಮೃತ ಮಹೋತ್ಸವಕ್ಕೆ ಆಹ್ವಾನ
– ತೀರ್ಥಹಳ್ಳಿ ಈಡಿಗರ ಸಂಘದಿಂದ ಸಭೆ: ಸರ್ವರಿಗೂ ಸ್ವಾಗತ
– ಡಿ.10ರಂದು ರಾಜಧಾನಿಯಲ್ಲಿ ಬೃಹತ್ ಕಾರ್ಯಕ್ರಮ,
– ಸಮುದಾಯದ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಈಡಿಗರ ಸಂಘಕ್ಕೆ ಅಮೃತ ಮಹೋತ್ಸವ ಸಂಭ್ರಮ. ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ಸಿದ್ಧತೆ ನಡೆದಿದೆ. ಈಗ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಲ್ಲೂ ಈಡಿಗರ ಸಂಘದಿಂದ ಬುಧವಾರ ಸಭೆ ನಡೆಸಿ ಸಮುದಾಯದ ಪ್ರತಿ ಮನೆಯಿಂದ ಈ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಲು ಕೋರಲಾಗಿದೆ. ತೀರ್ಥಹಳ್ಳಿ ಕೋಳಿಕಾಲು ಗುಡ್ಡದ ಈಡಿಗರ ಭವನದಲ್ಲಿ ಅಧ್ಯಕ್ಷರಾದ ಮಟ್ಟಿನಮನೆ ರಾಮಚಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿ.10ರಂದು ರಾಜಧಾನಿಯ ಅರಮನೆ ಮೈದಾನದಲ್ಲಿ ಬೆಳಿಗ್ಗೆ 11ಕ್ಕೆ ಬೃಹತ್ ಕಾರ್ಯಕ್ರಮ, ಸಮುದಾಯದ ಜಾಗೃತ ಸಮಾವೇಶ ನಡೆಯಲಿದ್ದು, ಈಡಿಗ ಸಮುದಾಯದ 25 ಉಪ ಪಂಗಡಗಳ ಸಮಾಗಮವಾಗಲಿದೆ.
ಈ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಲಾಯಿತು.ಈಡಿಗ, ಬಿಲ್ಲವ, ಪೂಜಾರಿ, ದೀವರ, ಭಂಡಾರಿ, ಬೆಲ್ಲದ್, ಹಾಲಕ್ಷತ್ರಿಯ, ದೇಶ ಭಂಡಾರಿ, ದೇವರ, ದೇವರ ಮಕ್ಕಳು ದೀವರ ಮಕ್ಕಳು, ಎಳಿಗ, ಎಳವ, ಗಾಮಲ್ಲ, ಗೌಂಡ, ಹಳೇಪೈಕರು, ಹಳೇಪೈಕ್, ಇಲ್ಲಾವನ್, ಕಲಾಲ್, ಮಲೆಯಾಳಿ ಬಿಲ್ಲವ, ನಾಡರ್, ನಾಮಧಾರಿ, ರಿಯಾನ್ ಹಿಯ್ಯ, ಇಳಿಗ, ಗೊಂಡ್ಲತಿಯನ್-ಥಿಯ್ಯಾನ್ ಸೇರಿ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶಕ್ಕೆ ಎಲ್ಲರನ್ನು ಸ್ವಾಗತಿಸಲಾಗಿದೆ.