Categories
ತೀರ್ಥಹಳ್ಳಿ

ಉಗ್ರರ ನಕ್ಷೆಗೆ ತೀರ್ಥಹಳ್ಳಿ ಸೇರಿಸಲು ಐಸಿಸ್ ಪ್ಲಾನ್!

ಉಗ್ರರ ನಕ್ಷೆಗೆ ತೀರ್ಥಹಳ್ಳಿ ಸೇರಿಸಲು ಐಸಿಸ್ ಪ್ಲಾನ್!
– ಭಟ್ಕಳ ಮಾದರಿಯಲ್ಲೇ ಉಗ್ರರ ಕೇಂದ್ರವಾಗಿಸಲು ಯೋಜನೆ
– ಮೂವರು ಉಗ್ರರ ಅರೆಸ್ಟ್: ಇನ್ನೋರ್ವ ನಾಪತ್ತೆ
– ಉನ್ನತ ತನಿಖೆ ವಿಚಾರಣೆ ವೇಳೆ ವಿಷಯ ಬಹಿರಂಗ

NAMMUR EXPRESS NEWS
ಬೆಂಗಳೂರು: ಮಲೆನಾಡನ್ನು ಉಗ್ರರ ಕೇಂದ್ರ ಮಾಡಿಕೊಳ್ಳಲು ಪ್ಲಾನ್ ನಡೆದಿತ್ತು ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ.
ಭಟ್ಕಳ ಮಾದರಿಯಲ್ಲೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯನ್ನು ಉಗ್ರರ ನಕ್ಷೆಗೆ ಸೇರಿಸಲು ಐಸಿಸ್ ಪಣತೊಟ್ಟಿದ್ದ ಅಘಾತಕಾರಿ ಮಾಹಿತಿಯನ್ನು ಶಂಕಿತ ಐಸಿಸ್ ಉಗ್ರ ಆರಾಫತ್ ಆಲಿ ರಾಷ್ಟ್ರೀಯ ತನಿಖಾ ದಳದ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರಾಫತ್ ಅಲಿಯನ್ನು ದೆಹಲಿಯಲ್ಲಿ ಬಂಧಿಸಿದ್ದ ಎನ್.ಐ.ಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆತ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.

ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಸಂಚುರೂಪಿಸುತ್ತಿರುವ ಐಸಿಸ್, ಭಟ್ಕಳ ಮಾದರಿಯಲ್ಲಿ ತೀರ್ಥಹಳ್ಳಿಯನ್ನು ಉಗ್ರರ ನಕ್ಷೆಗೆ ಸೇರಿಸಲು ಪಣತೊಟ್ಟಿತ್ತು ಎಂದು ಹೇಳಿದ್ದಾನೆ. ಈ ಕುರಿತಂತೆ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಐಸಿಸ್ ನಿರ್ದೇಶನದಂತೆ ಕಾರ್ಯಾಚರಣೆ ನಡೆಸುತ್ತಿದ್ದ ಆಫತ್ ಅಲಿ ತೀರ್ಥಹಳ್ಳಿಯನ್ನು ಉಗ್ರರ ನೆಲೆಯಾಗಿಸಲು ಸಂಚುರೂಪಿಸಿದ್ದ. ಈ ಹಿಂದೆ ರಿಯಾಜ್ ಭಟ್ಕಳ ಮತ್ತು ಯಾಸಿನ್ ಭಟ್ಕಳ, ಇಕ್ಬಾಲ್ ಭಟ್ಕಳ ಸಹೋದರರಿಂದ ಭಟ್ಕಳ ತಾಲೂಕು ಉಗ್ರವಾದಕ್ಕೆ ಕುಖ್ಯಾತಿ ಪಡೆದಿತ್ತು. ಇದೇ ರೀತಿ ತೀರ್ಥಹಳ್ಳಿ ಮೂಲದವರಾದ ಮಾಜ್ ಮುನೀರ್, ಶರೀಫ್ ಆರಾಫತ್ ಅಲಿ, ಅಬ್ದುಲ್ ಮತಿನ್ ನಾಲ್ವರು

ತೀರ್ಥಹಳ್ಳಿಯನ್ನು ಉಗ್ರರ ನೆಲೆಯಾಗಿಸಲು ಸಂಚುರೂಪಿಸಿದ್ದರು ಎನ್ನಲಾಗಿದೆ. ಆರಾಫತ್ ಈ ವಿಚಾರವನ್ನು ಪದೇಪದೇ ಮಾಜ್ ಹಾಗೂ ಶಾರುಕ್ ಹೇಳುತ್ತಿದ್ದ. ಈ ಬಗ್ಗೆ ಎನ್ ಐ ಎ ಗೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತ್ತು ಆರಾಫತ್ ಅಲಿಯ ತಲೆಯಲ್ಲಿ ತುಂಬುತ್ತಿದ್ದ. ಸದ್ಯ ಮೂವರನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದು, ಅಬ್ದುಲ್ ಮತಿನ್ ಬಂಧನ ಆಗಬೇಕಿದೆ. ಈ ನಾಲ್ವರು ಭಟ್ಕಳ ಸಹೋದರರಂತೆ ತೀರ್ಥಹಳ್ಳಿ ಬ್ರದರ್ಸ್ ಎಂದು ಕುಖ್ಯಾತಿ ಪಡೆಯುವ ಹುನ್ನಾರ ರೂಪಿಸಿದ್ದರು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.