ಕುಲ್ಲುಂಡೆ ನಾಗರಾಜ್ ಎಂಬ ರಿಯಲ್ ಹೀರೋ!
– ಅಂದದ ಶಾಲೆಗೊಂದು ಚಂದದ ಗಾರ್ಡನ್!
– ಶಾಲೆಗಳ ಕೈತೋಟ ನಿರ್ಮಾಣಕ್ಕೆ ಸಹಕಾರ
– ದಬ್ಬಣಗದ್ದೆ ಸರ್ಕಾರಿ ಶಾಲೆಯ ಮಾದರಿ ಹೆಜ್ಜೆ
NAMMUR EXPRESS NEWS
ತೀರ್ಥಹಳ್ಳಿ: ಖಾಸಗಿ ಶಾಲೆಯ ದರ್ಬಾರ್ ಅಲ್ಲಿ ಸರ್ಕಾರಿ ಶಾಲೆಗಳನ್ನು ಅಸಡ್ಡೆ ಮಾಡುವವರೇ ಹೆಚ್ಚು. ಆದರೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಖ್ಯಾತಿಯ ಕುಲ್ಲುಂಡೆ ನಾಗರಾಜ್ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಪರಿಸರ ಉಳಿವಿಗಾಗಿ ತಮ್ಮ ಸ್ವಂತ ಹಣದಿಂದ ಗಿಡಗಳನ್ನು ನೇಡುತ್ತ ಶಾಲಾ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮುಂದಾಗಿದ್ದಾರೆ. ಈ ಮೂಲಕ ತಮ್ಮ ಸೇವೆಯನ್ನು ಪರಿಸರ ಮಂದುವರಿಸಿದ್ದಾರೆ. ಪ್ರಾಥಮಿಕ ದಬ್ಬಣಗದ್ದೆ ಶಾಲೆಗೆ ವಿವಿಧ ಹಣ್ಣಿನ ಹಾಗೂ ಔಷಧಿ ಗಿಡಗಳು ಹಾಗೂ ಶಾಲೆಗೆ ಬಣ್ಣ,ಶಾಲಾ ಆಟದ ಮೈದಾನ ಅಗಲೀಕರಣ ಶಾಲೆಗೆ ಸುತ್ತಲೂ ಬೇಲಿ ಮಾಡುವ ಮೊದಲ ಹಂತದ ಯೋಜನೆಯನ್ನು ಸುಮಾರು ಅಂದಾಜು ಮೊತ್ತ 4-5 ಲಕ್ಷರೂಗಳಲ್ಲಿ ಮಾಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ.
ಮುಂದಿನ ಹಂತದಲ್ಲಿ ಶಾಲಾ ರಂಗಮಂದಿರ ಸಹಾಯ ಮಾಡಲಿದ್ದು ಇತರೆ ಕಾರ್ಯಕ್ರಮವನ್ನು ಮಾಡುವುದಾಗಿ ಹೇಳಿದ್ದಾರೆ. ಹಳ್ಳಿಗಾಡಿನ ಶಾಲೆಯ ಚಿತ್ರಣವನ್ನು ಬದಲಾವಣೆ ಮಾಡುತ್ತಿರುವ ನಾಗರಾಜ್ ಉದ್ದೇಶ ಪೋಷಕರು, ಗ್ರಾಮಸ್ಥರು, ಶಿಕ್ಷಕರ ಮೆಚ್ಚುಗೆ ವ್ಯಕ್ತವಾಗಿದೆ.
