ತೀರ್ಥಹಳ್ಳಿಯಲ್ಲಿ ನಾಳೆ ಕಿಮ್ಮನೆ ಪ್ರತಿಭಟನೆ..!
– ಸರ್ವಾಧಿಕಾರಿ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾದ ಬಿಜೆಪಿ ವಿರುದ್ಧ ಉಪವಾಸ ಸತ್ಯಾಗ್ರಹ: ಕಿಮ್ಮನೆ
– ಏನಿದು ಸತ್ಯಾಗ್ರಹ… ಏಕೆ ಹೋರಾಟ..?
NAMMUR EXPRESS NEWS
ತೀರ್ಥಹಳ್ಳಿ : ಏಪ್ರಿಲ್ ಎರಡರಂದು ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಬೆಳಿಗ್ಗೆ 10.30 ರಿಂದ ಸಂಜೆ 5 ವರೆಗೆ ಮಾಜಿ ಸಚಿವರು, ಕೆಪಿಸಿಸಿ ವಕ್ತಾರರು ಆದ ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ಆರ್ಥಿಕ ದಿಗ್ವಂದನ ಹೇರಿ ಸರ್ವಾಧಿಕಾರಿ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾದ ಬಿಜೆಪಿ ಹಾಗೂ ಮೋದಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ಕಿಮ್ಮನೆ ರತ್ನಾಕರ್ ಮುಂದಾಗಿದ್ದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಸಮಾನ ಮನಸ್ಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಬೆಂಬಲಿಸುವಂತೆ ಕೋರಲಾಗಿದೆ.
ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ‘ಕೈ’ ಕಟ್ಟುವ ಷಡ್ಯಂತ್ರ!
ದೇಶ ಸರ್ವಾಧಿಕಾರಿ ವ್ಯವಸ್ಥೆಯತ್ತ ಸರಿಯ ಲಾರಂಭಿಸಿದೆ. ವಿರೋಧ ಪಕ್ಷಗಳನ್ನು ಸರ್ವನಾಶ ಮಾಡಿ ಹಿಟ್ಲರ್-ಮುಸೋಲಿನಿ ಮಾದರಿಯಲ್ಲಿ ಮೋದಿ-ಅಮಿತ್ ಷಾ ಸರ್ವಾಧಿಕಾರಿ ವ್ಯವಸ್ಥೆ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಕಿಮ್ಮನೆ ಆರೋಪಿಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ‘ಚುನಾವಣೆ’ ಅತೀ ಮುಖ್ಯ ಅಂಶ. ಅದಕ್ಕೆಂದೇ ನಿಷ್ಪಕ್ಷಪಾತ ರೀತಿಯಲ್ಲಿ ಚುನಾವಣೆ ನಡೆಯ ಬೇಕೆಂಬ ಉದ್ದೇಶದಿಂದ ಚುನಾವಣಾ ಆಯೋಗಕ್ಕೆ’ ಸ್ವಾಯತ್ತ ಸ್ವತಂತ್ರ ಅಧಿಕಾರ ನೀಡಲಾಗಿದೆ. ಆದರೆ ಮೋದಿ ಸರ್ಕಾರ ಚುನಾ ವಣಾ ಆಯೋಗವನ್ನೂ ದುರ್ಬಳಕೆ ಮಾಡುತ್ತಿದೆ.
ಚುನಾವಣೆ ಘೋಷಣೆಯಾದ ನಂತರ ಪ್ರಬಲ ವಿರೋಧ ಪಕ್ಷಗಳ ನಾಯಕರನ್ನು ಸುಳ್ಳು ಆರೋಪಗಳಡಿ ಬಂಧಿಸಿ ಜೈಲಿಗೆ ಅಟ್ಟಲಾಗುತ್ತಿದೆ. ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷ ನಾಯಕರನ್ನು ಮುಗಿಸಿ ಹಾಕಲಾಗುತ್ತಿದೆ. ‘ಒಂದೋ ಬಿಜೆಪಿ ಸೇರಿ ಇಲ್ಲ ಜೈಲಿಗೆನಡೆಯಿರಿ ಎಂಬ ತಂತ್ರ ಅನುಸರಿಸಲಾಗುತ್ತಿದೆ ನಮ್ಮ ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ವರಿಷ್ಟ ನಾಯಕರ ವಿರುದ್ಧ ಯಾವುದೇ ಆರೋಪ ಮಾಡಲು ನಮ್ಮ ನಾಯಕರನ್ನು ಕಾನೂನಿನ ಅಡಕತ್ತರಿಗೆ ಸಿಲುಕಿಸಲು ಸಾಧ್ಯವಾಗದೇ ಹೋದಾಗ, ಮೋದಿ ಸರ್ಕಾರ ಪಕ್ಷದ ಮೇಲೆ ಆರ್ಥಿಕ ದಿಗ್ಧಂಧನ’ ಹೇರಿ ಚುನಾವಣೆ ಖರ್ಚಿಗೆ ಹಣವೇ ಸಿಗದಂತೆ ಮಾಡಲು ಮುಂದಾಗಿದೆ ಇದು ಪ್ರಜಾಪ್ರಭುತ್ವವ್ಯವಸ್ಥೆಗೇ ನಾಚಿಕೆಗೇಡಿನ ಸಂಗತಿ.
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆ ಗಳನ್ನು ಸ್ಥಗಿತಗೊಳಿಸುವ ಮೋದಿ ಸರ್ಕಾರ ಹಿಟ್ಲರ್ ಸರ್ಕಾರ ಕ್ಕಿಂತಾ ನೀಚ ಮಟ್ಟ ತಲುಪಿದೆ. ಆದಾಯ ತೆರಿಗೆ ವಿಚಾರದಲ್ಲಿ ಏನೇ ವ್ಯತ್ಯಾಸಗಳಿದ್ದರೂ ಚುನಾವಣೆಗೆ 6 ತಿಂಗಳು ಮೊದಲೇ ಕ್ರಮ ಜರುಗಿಸ ಬಹುದಿತ್ತು ಅಥವಾ ಚುನಾ ವಣಾ ಪ್ರಕ್ರಿಯೆ ನಂತರ ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ ಮೋದಿ ಸರ್ಕಾರ ದುರುದ್ದೇಶದಿಂದ ಚುನಾವಣೆ ಘೋಷಣೆಯಾದ ನಂತರ ಏಕಾಏಕಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಪಕ್ಷದ ಪ್ರಚಾರ, ನಾಯಕರ ಪ್ರವಾಸಕ್ಕೂ ಹಣ ಸಿಗದಂತೆ ಮಾಡಲಾಗಿದೆ. ಇದು ಅತ್ಯಂತ ಹೇಯ.
ಪ್ರಜಾಪ್ರಭುತ್ವವನ್ನು, ನ್ಯಾಯ ಸಮ್ಮತ ಚುನಾವಣೆಯನ್ನು ಅಪೇಕ್ಷಿಸುವ ಪ್ರತಿಯೊಬ್ಬರೂ ಈ ಸರ್ವಾಧಿಕಾರಿ ಮನಸ್ಥಿತಿಯನ್ನು ವಿರೋಧಿ ಸಬೇಕು ಎಂದಿರುವ ಮಾಜಿ ಸಚಿವ, ರಾಜ್ಯ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ತಾವು ಮೋದಿ ಸರ್ಕಾ ರದ ಈ ದುಷ್ಟ ಷಡ್ಯಂತ್ರದ ವಿರುದ್ಧ, ಸರ್ವಾಧಿಕಾರಿ ನಿಲುವಿನ ವಿರುದ್ದ ಏಪ್ರಿಲ್ 2 ರ ಮಂಗಳವಾರ ಬೆಳಿಗ್ಗೆ 10-30ರಿಂದ ಸಂಜೆ 5 ಗಂಟೆಯವರೆಗೆ ತೀರ್ಥಹಳ್ಳಿ ತಾಲ್ಲೂಕು ಕಛೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ. ಸಮಾನ ಮನಸ್ಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.