ಕಿಮ್ಮನೆ ಜನ್ಮ ದಿನ: ಶುಭಾಶಯಗಳ ಸುರಿಮಳೆ..!
– ಮೃಗವಧೆ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ
– ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ ಜನ
NAMMUR EXPRESS NEWS
ತೀರ್ಥಹಳ್ಳಿ: ಮಾಜಿ ಶಿಕ್ಷಣ ಸಚಿವರು ಮತ್ತು ಮಾಜಿ ಶಾಸಕರು, ಪ್ರಸ್ತುತ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಕಿಮ್ಮನೆ ರತ್ನಾಕರ್ ಇವರಿಗೆ ಹುಟ್ಟು ಹಬ್ಬದ ಸಂಭ್ರಮ. ಈ ಸಂಭ್ರಮವನ್ನು ಕಿಮ್ಮನೆ ಅಭಿಮಾನಿಗಳು ಎಲ್ಲೆಡೆ ಆಚರಿಸಿದ್ದಾರೆ.
ಬೆಳಿಗ್ಗೆಯಿಂದ ರಾತ್ರಿವರೆಗೆ ಕರೆ ಮಾಡಿ ಶುಭಾಶಯ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನಾಯಕನ ಗುಣಗಾನ ಮಾಡಿದ್ದಾರೆ.
ಮೃಗವಧೆ ದೇವಾಲಯದಲ್ಲಿ ವಿಶೇಷ ಪೂಜೆ
ಕಿಮ್ಮನೆ ಜನ್ಮ ದಿನದ ಪ್ರಯುಕ್ತ ಅವರ ಅಭಿಮಾನಿಗಳು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ದಲ್ಲಿ ವಿಶೇಷ ಪೂಜೆಯಾದ ಪಂಚಾಮೃತಾರ್ಚನೆ, ಕುಂಕುಮಾರ್ಚನೆ, ಹಾಗೂ ಅನ್ನಸಂತರ್ಪಣೆ ನಡೆಸಿದರು. ಈ ಎಲ್ಲಾ ಸೇವೆಯನ್ನು ಕಿಮ್ಮನೆ ರತ್ನಾಕರ್ ಅಭಿಮಾನಿಗಳಾದ ಶೇಡ್ಗಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್, ಗ್ರಾಮ ಪಂಚಾಯತ್ ಸದಸ್ಯರು ಪಣಿರಾಜ್ ಕಟ್ಟೆಹಕ್ಕಲು, ಕೆ ಡಿ ಪಿ ಸದಸ್ಯರಾದ ಕರುಣಾಕರ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ನವಮಣಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅನ್ನಪೂರ್ಣ ಮೋಹನ್, ಯುವ ಮುಖಂಡರುಗಳಾದ ಮುರುಳಿ ಹೊಸಳ್ಳಿ, ರವಿಕುಮಾರ್, ಸಫನ್ ಕಟ್ಟೆಹಕ್ಕಲು, ಸುಧೀರ್ ಕಟ್ಟೆಹಕ್ಕಲು ಮತ್ತು ಇತರರು ಇದ್ದರು
