ಕುಡುಮಲ್ಲಿಗೆ ಪೋಸ್ಟ್ ಆಫೀಸ್ , ಸೊಸೈಟಿ ದರೋಡೆಗೆ ಯತ್ನ
– ಭದ್ರವಾಗಿಟ್ಟಿದ್ದ ಕಾರಣ ಸಿಗದ ಹಣ: ದರೋಡೆ ಪ್ಲಾನ್ ಹೇಗೆ?
– ಬರೀ ಕೈಯಲ್ಲಿ ವಾಪಾಸಾದ ಕಳ್ಳರು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಪಕ್ಕದಲ್ಲೆ ಇರುವ ಪೋಸ್ಟ್ ಆಫೀಸ್ ನಲ್ಲಿ ದರೋಡೆಗೆ ಯತ್ನ ಭಾನುವಾರ ರಾತ್ರಿ ನಡೆದಿದೆ. ಖದೀಮರು ದರೋಡೆ ಮಾಡಲು ಪೋಸ್ಟ್ ಆಫೀಸ್ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ಒಳಗೆ ನುಗ್ಗಿದ್ದು, ಅಲ್ಲಿ ಅವರಿಗೆ ಯಾವುದೇ ರೀತಿಯ ನಗದು ಹಾಗೂ ವಸ್ತುಗಳು ಸಿಗದ ಕಾರಣ ಬರೀ ಕೈಯಲ್ಲಿ ವಾಪಸ್ ಆಗಿದ್ದಾರೆ. ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಾರ್ಯದರ್ಶಿಯಾದ ಮದನ್ ಹಾಗೂ ಪೋಸ್ಟ್ ಆಫೀಸ್ ಸಿಬ್ಬಂದಿಯ ಉತ್ತಮ ಕಾಳಜಿಯಿಂದ ಹಣವನ್ನು ಭದ್ರವಾಗಿ ಇಟ್ಟಿದ್ದು ಯಾವುದೇ ಹಣ ಹಾಗೂ ವಸ್ತು ಕಳ್ಳತನವಾಗಿಲ್ಲ. ಇವರ ಈ ಜವಾಬ್ದಾರಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.