ಡಿ.23ಕ್ಕೆ ʼಲಕ್ಷ್ಮೀಶ್ ಲೋಕ ವಿಹಾರʼ ಪುಸ್ತಕ ಬಿಡುಗಡೆ
– ತೀರ್ಥಹಳ್ಳಿಯಲ್ಲಿ ಪುಸ್ತಕ ಬಿಡುಗಡೆ: ಸರ್ವರಿಗೂ ಲಕ್ಷ್ಮೀಶ್ ಆಹ್ವಾನ
– ಪೌರಾಣಿಕ, ಇತಿಹಾಸ, ರಾಷ್ಟ್ರ, ಅಂತರಾಷ್ಟ್ರೀಯ, ಸ್ಥಳೀಯ ಪ್ರಸಕ್ತ ರಾಜಕೀಯ ವಿದ್ಯಮಾನದ ದಾಖಲೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪೌರಾಣಿಕ, ಇತಿಹಾಸ, ರಾಷ್ಟ್ರ, ಅಂತರಾಷ್ಟ್ರೀಯ, ಸ್ಥಳೀಯ ಪ್ರಸಕ್ತ ರಾಜಕೀಯ ವಿದ್ಯಮಾನಗಳ ದಾಖಲೆಗಳನ್ನು ಒಳಗೊಂಡ ʼಲಕ್ಷ್ಮೀಶ್ ಲೋಕವಿಹಾರʼ ಪುಸ್ತಕ ಬಿಡುಗಡೆ ಸಮಾರಂಭ ಡಿಸೆಂಬರ್ 23ಕ್ಕೆ ಸಂಜೆ 5 ಗಂಟೆಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ. ಪತ್ರಕರ್ತ, ಲೇಖಕ ಕಾ.ಸು. ಲಕ್ಷೀಶ್ ಈ ಬಗ್ಗೆ ಮಾತನಾಡಿ, ಆಧುನಿಕವಾಗಿ ಜಗತ್ತು ಬದಲಾಗಿದೆ. ವೈಜ್ಞಾನಿಕ ಮನೋಭಾವ ಬೆಳೆದಿದ್ದರೂ ಪುರಾತನ ಕಾಲದ ಆಚಾರ ವಿಚಾರಗಳ ಬಳಕೆ ಹೆಚ್ಚಳವಾಗಿದೆ. ವರ್ಗ ತಾರತಮ್ಯ, ಸ್ವಾಮಿ ಪರಂಪರೆಯನ್ನು ಮಠಗಳು ಬೆಳೆಸುತ್ತಿವೆ.
ಆಧುನಿಕ ಜಗತ್ತಿನ ಇಂತಹ ತ್ರಿಶಂಕು ಸ್ವರ್ಗವನ್ನು ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್ ಉಪಸ್ಥಿತಿ ಇರಲಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ವಸಂತಿ, ಗುಂಡುರಾವ್, ಕೊಪ್ಪಲು ಶ್ರೀನಾಥ್, ಸುರೇಶ್ ಇದ್ದರು.
