ತೀರ್ಥಹಳ್ಳಿ ಹೈವೇಯಲ್ಲಿ ತಡರಾತ್ರಿ ಟ್ರಾಫಿಕ್ ಜಾಮ್!
– ತೂದೂರು ಬಳಿ ಬೃಹತ್ ಮಾವಿನ ಮರ ರಸ್ತೆಗೆ ಪಲ್ಟಿ
– ಸುಮಾರು 2 ಗಂಟೆ ಫುಲ್ ಟ್ರಾಫಿಕ್ ಜಾಮ್: ಅರಣ್ಯ ಅಧಿಕಾರಿಗಳ ಮೇಲೆ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ತೀರ್ಥಹಳ್ಳಿ -ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ತೂದೂರು ರಸ್ತೆ ದೊಡ್ಡಮನೆ ಬಳಿ ಬೃಹತ್ ಮಾವಿನ ಮರ ಒಂದು ಗುರುವಾರ ರಾತ್ರಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸುಮಾರು 2 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆಯಲ್ಲಿ ವಾಹನ, ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಒಂದೂವರೆ ಗಂಟೆ ಕಾಲ ನೂರು ವಾಹನಗಳು ಎರಡು ಕಿಲೋ ಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಅಲ್ಲಿನ ಸ್ಥಳೀಯರು ಮರವನ್ನು ಕಡೆದು ತೆಗೆದು ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟಿದ್ದಾರೆ. ಈ ವೇಳೆ ತೂದೂರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯ ಮಧುರಾಜ್ ಹೆಗ್ಡೆ ಸೇರಿದಂತೆ ಹಲವರು ಇದ್ದರು.
ರಸ್ತೆ ಬದಿಯಲ್ಲಿ ಮರಗಳು ಹೆಚ್ಚಾಗಿ ವಾಲಿರುವುದರಿಂದ ಮರಗಳು ರಸ್ತೆಗೆ ಬೀಳುತ್ತಿವೆ, ದಿನೇ ದಿನೇ ಅನಾಹುತಗಳು ಹೆಚ್ಚಾಗುತ್ತಿವೆ ಹಾಗೂ ಕಳೆದ ಸಲ ಮರಕ್ಕೆ ಬೆಂಕಿ ಬಿದ್ದಿದೆ. ಹಲವು ದಿನಗಳಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆದ್ರೂ ಅರಣ್ಯ ಇಲಾಖೆ ಈ ಬಗ್ಗೆ ಗಮನ ವಹಿಸಿಲ್ಲ ಎಂಬ ಆಕ್ರೋಶ ಕೇಳಿ ಬಂದಿದೆ. ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರು ಸಲ್ಲಿಸುತ್ತಿದ್ದಾರೆ.
ಅನೇಕ ಕಡೆ ಒಣಗಿದ ಮರ : ಇಲಾಖೆ ನಿರ್ಲಕ್ಷ್ಯ
ತೀರ್ಥಹಳ್ಳಿ ತಾಲೂಕಿನ ಹಲವು ರಸ್ತೆ ಪಕ್ಕ ಒಣಗಿದ ಮರಗಳು ಅಪಾಯಕ್ಕೆ ಆಹ್ವಾನ ನೀಡಿದಂತಿವೆ. ಅ ಭಾಗದ ಜನ ದೂರು ನೀಡಿದ್ರೂ ಅರಣ್ಯ ಇಲಾಖೆ ಈ ಬಗ್ಗೆ ಗಮನಿಸಿಲ್ಲ. ಸ್ಥಳೀಯ ಆಡಳಿತಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಅಪಾಯ ಖಂಡಿತ. ಈ ಬಗ್ಗೆ ನಮ್ಮೂರ್ ಎಕ್ಸ್ ಪ್ರೆಸ್ ಹಲವು ಬಾರಿ ವರದಿ ಮಾಡಿ ಎಚ್ಚರಿಸಿದೆ.