Categories
ತೀರ್ಥಹಳ್ಳಿ

ಭಾರತೀಯ ಜೀವ ವಿಮಾ ನಿಗಮ ತೀರ್ಥಹಳ್ಳಿ ಶಾಖೆ: 67ನೇ ವರ್ಷದ ಸಂಭ್ರಮಾಚರಣೆ

ಭಾರತೀಯ ಜೀವ ವಿಮಾ ನಿಗಮ ತೀರ್ಥಹಳ್ಳಿ ಶಾಖೆ: 67ನೇ ವರ್ಷದ ಸಂಭ್ರಮಾಚರಣೆ
– ದೇಶದ ಪ್ರಧಾನ ಹಣಕಾಸು ಸಂಸ್ಥೆಯಾಗಿ ಮಹತ್ವದ ಕೊಡುಗೆ
– ಸೊಪ್ಪುಗುಡ್ಡೆ ವಿಕಲಚೇತನ ಮಕ್ಕಳ ಶಾಲೆಗೆ ಹಣ್ಣು ಹಾಗೂ ಬಿಸ್ಕೆಟ್ ವಿತರಣೆ

NAMMUR EXPRESS NEWS
ತೀರ್ಥಹಳ್ಳಿ : ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ), 14 ದೇಶಗಳಲ್ಲಿ ಕಾರ್ಯಾಚರಣೆಗಳನ್ನು ಹೊಂದಿರುವ ಪ್ರಮುಖ ಹಣಕಾಸು ಸಂಸ್ಥೆಯಾಗಿದೆ. ಸಂಸ್ಥೆಯು 1956 ಸೆ.01 ಕ್ಕೆ ರಾಷ್ಟ್ರೀಕರಣಗೊಂಡಿದ್ದು, ಇಂದು 67ನೇ ವರ್ಷಕ್ಕೆ ಕಾಲಿಟ್ಟು ದೇಶದ ಪ್ರಧಾನ ಹಣಕಾಸು ಸಂಸ್ಥೆಯಾಗಿ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಸಂಸ್ಥೆಯು ರಾಷ್ಟ್ರೀಕರಣಗೊಂಡ ನಂತರ ಪ್ರತಿ ವರ್ಷ ಸೆ.01 ರಿಂದ ಸೆ.07 ರ ವರೆಗೆ ಸಂಸ್ಥೆಯಲ್ಲಿ ವಿಮಾ ಸಪ್ತಾಹ ಎಂದು ಆಚರಣೆ ಮಾಡಲಾಗುವುದು. ಇದು ಒಂದು ಆರ್ಥಿಕ ಸಂಸ್ಥೆಯಾಗಿದ್ದರೂ ಕೂಡ ಕೆಲವೊಂದು ಸಮಾಜಮುಖಿಯಾಗಿರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವಂತಹ ಸಂಸ್ಥೆಯಾಗಿದೆ.

1956ರಲ್ಲಿ 5 ಕೋಟಿ ರೂ.ಗಳ ಆರಂಭಿಕ ಬಂಡವಾಳದೊಂದಿಗೆ ಪ್ರಾರಂಭವಾದ ಎಲ್‌ಐಸಿ, ಈಗ 42,30,616 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದೆ. ವಿಮಾ ಕ್ಷೇತ್ರದಲ್ಲಿ ಕಂಪನಿಯು ಮಾರುಕಟ್ಟೆಯ ನಾಯಕನಾಗಿ ಉಳಿದಿದೆ. ಮಾರುಕಟ್ಟೆಯ ಬಹುಪಾಲು ಪಾಲನ್ನು ಅಂದರೆ ಶೇ.63.25ರಷ್ಟನ್ನು ತನ್ನದಾಗಿಸಿಕೊಂಡಿದೆ. 8 ವಲಯ ಕಚೇರಿಗಳು, 113 ವಿಭಾಗೀಯ ಕಚೇರಿಗಳು, 74 ಗ್ರಾಹಕ ವಲಯಗಳು, 2,048 ಶಾಖಾ ಕಚೇರಿಗಳು, 1548 ಉಪಗ್ರಹ ಶಾಖೆಗಳು, 44,900 ಪ್ರೀಮಿಯಂ ಪಾಯಿಂಟ್‌ಗಳು ಮತ್ತು ಲೈಫ್ ಪ್ಲಸ್ ಕಚೇರಿಗಳು, ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು, 13.26 ಲಕ್ಷ ಏಜೆಂಟರನ್ನು ಎಲ್‌ಐಸಿ ಹೊಂದಿದ್ದು, ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿದೆ. ಸುಮಾರು 98 ಸಾವಿರದಷ್ಟು ಸಿಬ್ಬಂದಿಗಳನ್ನು ಹೊಂದಿರುವಂತಹ ಒಂದು ಬೃಹತ್ ಆರ್ಥಿಕ ಸಂಸ್ಥೆ ಇದಾಗಿದೆ.

ತೀರ್ಥಹಳ್ಳಿ ಶಾಖೆ ಪ್ರತಿ ಕಚೇರಿಯಲ್ಲಿ ವರ್ಷವೂ ಕೂಡ ವಿಮಾಸಪ್ತಹದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಫಸ್ಟ್ ಕಸ್ಟಮರ್ಸ್ ಮೂಲಕ ಮಾಡಲಾಗುವುದು, ಈ ಬಾರಿಯೂ ಕೂಡ ಫಸ್ಟ್ ಕಸ್ಟಮರ್ ಆದ ಉಮೇಶ್ ಹಾಗೂ ನೀಲಮ್ಮ ಅವರಿಂದ ಜ್ಯೋತಿಯನ್ನು ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿಮಾ ಸಪ್ತಹ ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಈ ಬಾರಿ ವಿಶೇಷವಾಗಿ ಕಾಲ್ನಡಿಗೆ ಜಾತ ಮಾಡಲಾಯಿತು. ಹಾಗೂ ಸೊಪ್ಪುಗುಡ್ಡೆ ಸರ್ಕಾರಿ ಶಾಲೆಯ ವಿಕಲಚೇತನ ಮಕ್ಕಳ ಶಾಲೆಗೆ ಹಣ್ಣು ಹಾಗೂ ಬಿಸ್ಕೆಟ್ ಗಳನ್ನು ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಸತೀಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು, ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗ ಹಾಗೂ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಶನಿವಾರದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯಿಂದ ಎಲ್ಲಿವರೆಗೆ ಸಾಧ್ಯವೋ ಅಲ್ಲಿಯವರೆಗೆ ಕಾಲ್ನಡಿಗೆ ಅಥವಾ ವೆಹಿಕಲ್ ನಲ್ಲಿ ಹೋಗಿ ಅಲ್ಲಿರುವಂತಹ ತ್ಯಾಜ್ಯ ವಸ್ತುಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳ ಶೇಖರಣೆ ಮಾಡಿ ಅವಶ್ಯಕತೆ ಇರುವಲ್ಲಿ ನೆಲ್ಲಿ ಮರಗಳನ್ನು ನೆಡುವ ಕಾರ್ಯಕ್ರಮ ಇರುತ್ತದೆ. ಹಾಗೂ ಸಮಾಜದಲ್ಲಿ ವಿಶೇಷವಾದ ಕಾರ್ಯವನ್ನು ಮಾಡಿರುವಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಸಂಗೀತ ಸ್ಪರ್ಧೆ, ಆಶುಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರ ದಿನಾಚರಣೆಯಂದು ಪ್ರತಿನಿಧಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿರುತ್ತದೆ. ಕೊನೆಯ ದಿನ ಸಮರೂಪ ಸಮಾರಂಭ ನಡೆಯಲಿದೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.