ತೀರ್ಥಹಳ್ಳಿಯಲ್ಲಿ ಮಹಾ ಮೃತ್ಯುಂಜಯ ಹೋಮ, ಧನ್ವಂತರಿ ಮಹಾವಿಷ್ಣುಯಾಗ
– ರಾಮೇಶ್ವರ ದೇವಸ್ಥಾನದಲ್ಲಿ ಯಾಗ
– ಸಾವಿರಾರು ಭಕ್ತಾದಿಗಳು ಭಾಗಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನಸಂತರ್ಪಣಾ ಮತ್ತು ಧಾರ್ಮಿಕ ಸೇವಾಸಮಿತಿ ಇವರು ನಡೆಸುತ್ತಿರುವ ನಿತ್ಯ ಅನ್ನಸಂತರ್ಪಣಾ ಕಾರ್ಯದ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನವಗ್ರಹ ಶಾಂತಿ ಸಹಿತ ಮಹಾ ಮೃತ್ಯುಂಜಯ ಹೋಮ” ಹಾಗೂ ”ಧನ್ವಂತರಿ ಮಹಾವಿಷ್ಣು’ ಮಂತ್ರಯಾಗವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಎಲ್ಲಾ ಧಾರ್ಮಿಕ ಕಾರ್ಯಕ್ರಮವು ನೆರವೇರಿತು.
ಸೋಮವಾರ ಬೆಳಗ್ಗೆ ಗಂಟೆ 8-00 ರಿಂದ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ ಹಾಗೂ ಅಪಮೃತ್ಯು ರೋಗ-ರುಜಿನ ಗ್ರಹಚಾರ ದೋಷ ನಿವಾರಣಾರ್ಥ ಸಮಸ್ತ ಭಕ್ತ ಜನರ ಶ್ರೇಯೋಭಿವೃದ್ಧಿ ಹಾಗೂ ಆರೋಗ್ಯ ಆಯುಷ್ಯ ಪ್ರಾಪ್ತಿಗಾಗಿ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಸುಸಂಕಲ್ಪದ ಸಲುವಾಗಿ “ ನವಗ್ರಹ ಶಾಂತಿ ಸಹಿತ ಮಹಾ ಮೃತ್ಯುಂಜಯ ಹೋಮ” ಹಾಗೂ ”ಧನ್ವಂತರಿ ಮಹಾವಿಷ್ಣು ‘ ಮಂತ್ರಯಾಗವನ್ನು ನಡೆಸುವುದಾಗಿ ಸಂಕಲ್ಪಿಸಿದ ನಂತರ ಲಕ್ಷ್ಮೀಶ ತಂತ್ರಿಗಳ ಸಾರಥ್ಯದಲ್ಲಿ ಹೋಮವನ್ನು ನೆರವೇರಿಸಿ ನಂತರ ಪೂರ್ಣ ಮತ್ತು ಕಾರ್ಯಕ್ರಮ ನಡೆದು ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ, ಹಾಗೂ ನಿತ್ಯ ಅನ್ನಸಂತರ್ಪಣ ಕೊಠಡಿಯಲ್ಲಿ ಅನ್ನಪೂರ್ಣೇಶ್ವರಿಯ ಪೂಜೆ ನಡೆಸಿ ನಂತರ ಭಕ್ತಾದಿಗಳಿಗೆ ಅನ್ನಸಂಪರ್ಪಣೆಯನ್ನು ನಡೆಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀರಾಮೇಶ್ವರನ ಕೃಪೆಗೆ ಪಾತ್ರರಾದರು.