Categories
ತೀರ್ಥಹಳ್ಳಿ

ಜಾತ್ರೆಯಲ್ಲಿ ಗಮನ ಸೆಳೆದ ಮಲ್ನಾಡ್ ಫುಡ್!

ಜಾತ್ರೆಯಲ್ಲಿ ಗಮನ ಸೆಳೆದ ಮಲ್ನಾಡ್ ಫುಡ್!
– ಹೋಮ್ ಮೇಡ್ ಫುಡ್ ಐಟಂಗಳು!
– ಫ್ಯಾಷನ್ ಆಭರಣಗಳು ಮತ್ತು ವಸ್ತ್ರಗಳು!
– ಅನಘ ಮಹಿಳಾ ಸಂಘದ ಆಯೋಜನೆ
– ಔತಣ ತಂಡದಿಂದ ವಿವಿಧ ಭೋಜನ

NAMMUR EXPRESS NEWS:
ತೀರ್ಥಹಳ್ಳಿ ಜಾತ್ರೆ ವಿಶೇಷ: ಜಾತ್ರೆಯಲ್ಲಿ ರಂಗು ರಂಗಿನ ಸ್ಪೆಷಲ್ ವಸ್ತುಗಳು, ಬಗೆ ಬಗೆಯ ಆಟಗಳು, ಸಿಹಿ ಸಿಹಿ ಮಿಠಾಯಿ ಮತ್ತು ತಿನಿಸುಗಳ ಜೊತೆಗೆ ರುಚಿ ರುಚಿಯಾದ ಹಲವಾರು ದೋಸೆ ಕ್ಯಾಂಪ್ ಗಳೂ ಇವೆ. ಈ ಎಲ್ಲದರ ನಡುವೆ ವಿಶೇಷವಾಗಿ, ಹೋಮ್ ಮೇಡ್ ತಿನಿಸುಗಳ ಫುಡ್ ಕೋರ್ಟನ್ನು ಇಲ್ಲಿ ಹಾಕಲಾಗಿದೆ. ಗಾಂಧಿ ಚೌಕದ ಮದನ್ ಅವರ ಕಟ್ಟಡ ಮುಂಭಾಗ ಔತಣ ತಂಡದ ಕಡುಬು, ಚಿಕನ್ ಗ್ರೇವಿ, ರೊಟ್ಟಿ, ಸ್ಪೆಷಲ್ ಚಿಕನ್ ಡ್ರೈ ಮತ್ತು ಫಿಶ್ ಫ್ರೈ ಜೊತೆ ಇನ್ನಿತರ ಐಟಂಗಳು‌, ಜ್ಯೂಸ್ ಮತ್ತು ಐಸ್‌ಕ್ರೀಂಗಳು ಲಭ್ಯವಿದೆ. ಜನವರಿ 11,12,13 ರಂದು ಛತ್ರಕೇರಿಯ ಅನಘ ಸಂಘದಲ್ಲಿ ಮಲೆನಾಡಿನ ಕೈ ರುಚಿ ಉಣಬಡಿಸುತ್ತಿದೆ ಹೊನ್ನಕಮಲ ಫುಡ್ ಪ್ರಾಡಕ್ಟ್! ಬನ್ನಿ, ಸ್ನೇಹಿತರನ್ನೂ ಕರೆತನ್ನಿ, ಮಲೆನಾಡ ಮನೆಯ ಸವಿರುಚಿ ಆನಂದಿಸಿ.

ಅನಘ ಮಹಿಳಾ ಬಹುದೇಶಿತ ಸಹಕಾರ ಸಂಘ ನಿ. ತೀರ್ಥಹಳ್ಳಿಯ ಮಮತಾ ಸಾಯಿನಾಥ್ ಇವರ ಅಧ್ಯಕ್ಷತೆಯಲ್ಲಿ ಇದು 12ನೇ ವರ್ಷದ ವ್ಯಾಪಾರ ಮೇಳವಾಗಿದೆ. ಹಾಗೂ ಇದರೊಂದಿಗೆ, ಮಹಿಳೆಯರ ಸೀರೆ, ಬೆಡ್ಶೀಟ್, ಗೋಲ್ಡ್ ಪ್ಲೇಟೆಡ್ ಜ್ಯುವೆಲರಿ, ಪರ್ಸ್, ಬ್ಯಾಗ್ ಹಾಗು ಇನ್ನಿತರ ವಸ್ತುಗಳು ಲಭ್ಯವಿದ್ದು ಬೇಕಾದ ಹೂವಿನ ಗಿಡಗಳ ನರ್ಸರಿಯೂ ಇದೆ.

ಸ್ಥಳ : ಮದನ್ ಕಾಂಪ್ಲೆಕ್ಸ್ ನಿಯರ್ ಗಾಂಧಿ ಚೌಕ, ಛತ್ರಕೇರಿ ರಸ್ತೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.