ಮಂಜುನಾಥ ಗೌಡರಿಗೆ ಜಾಮೀನು ಮಂಜೂರು
– ಇಡಿ ಬಂಧನದಲ್ಲಿದ್ದ ಮಂಜುನಾಥ ಗೌಡ
– ಹೈ ಕೋರ್ಟ್ ಅಲ್ಲಿ ಜಾಮೀನು ಮಂಜೂರು
– 15 ದಿನಗಳ ಬಳಿಕ ತೀರ್ಥಹಳ್ಳಿ ಆಗಮನ?
NAMMUR EXPRESS NEWS
ತೀರ್ಥಹಳ್ಳಿ: ಸಹಕಾರಿ ಧುರೀಣ ಆರ್ ಎಂ ಮಂಜುನಾಥ ಗೌಡರಿಗೆ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ಇಡಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಂಜುನಾಥ ಗೌಡರು ಈ ಸಂಬಂಧ ಜಾಮೀನು ಕೋರಿ ನ್ಯಾಯಾಲಯದ ಮೋರೆ ಹೋಗಿದ್ದರು. ಗೌಡರ ಜಾಮೀನು ಅರ್ಜಿ ಯನ್ನು ವಿಚಾರಣೆ ಕೈಗೊಂಡ ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ ಇಂದು ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಇದೀಗ ಶಿವಮೊಗ್ಗ ಜಿಲ್ಲೆಯ ಅವರ ಅಭಿಮಾನಿ ವಲಯದಲ್ಲಿ ಭಾರಿ ಸಂತಸಕ್ಕೆ ಕಾರಣವಾಗಿದೆ.
ತೀರ್ಥಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆ ಕೇಂದ್ರ ಬಿಜೆಪಿ ಮಂಜುನಾಥ ಗೌಡರ ವಿರುದ್ಧ ಇಡಿ ಮೂಲಕ ದಾಳಿ ಮಾಡಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಕಣ್ಣು ನೋವಿನಿಂದ ಬಳಲುತ್ತಿದ್ದ ಅವರು ಸುಮಾರು 15 ದಿನಗಳ ಕಾಲ ಬೆಂಗಳೂರಲ್ಲಿದ್ದು ಬಳಿಕ ಊರಿಗೆ ಬರುವ ಸಾಧ್ಯತೆ ಇದೆ.
