Categories
ತೀರ್ಥಹಳ್ಳಿ

ಮಾ.26: ಆರಗದಲ್ಲಿ ವಿಜೃಂಭಣೆಯ ಮಾರಿ ಜಾತ್ರೆ..!

ಮಾ.26: ಆರಗದಲ್ಲಿ ವಿಜೃಂಭಣೆಯ ಮಾರಿ ಜಾತ್ರೆ..!
– ಮಾ.25ಕ್ಕೆ ಶಿವದೂತ ಗುಳಿಗ ಕನ್ನಡ ನಾಟಕ ಪ್ರದರ್ಶನ
– ಮಾ.27ರ ಸಂಜೆ ವಿಜೃಂಭಣೆಯ ಮೆರವಣಿಗೆಯ ಮೂಲಕ ಗೊಂಬೆಯ ವಿಸರ್ಜನೆ

NAMMUR EXPRESS NEWS
ತೀರ್ಥಹಳ್ಳಿ: ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಆರಗ 14ನೇ ಶತಮಾನದಲ್ಲಿ ಆರಗ ಗುತ್ತಿ ರಾಜ್ಯದ ರಾಜಧಾನಿಯಾಗಿ ವಿಜಯನಗರ ಸಂಗಮ ದೊರೆಗಳ ಅಧೀನದಲಿತ್ತು. ವಿಜಯನಗರ ಆಳ್ವಿಕೆಯ ನಂತರ ಆರಗ ರಾಜ್ಯವು ಕೆಳದಿ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ವಿಜಯನಗರ ಸಾಮ್ರಾಜ್ಯದ ಮೇರು ಕವಿ ,ದಾಸರ ಶ್ರೇಷ್ಠ ಪುರಂದರ ದಾಸರ ಹುಟ್ಟೂರು ಆರಗ ಎಂಬುದಾಗಿ ಬೆಳಕಿಗೆ ಬಂದಿದ್ದು ಆರಗ ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಆರಗ ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಶತಮಾನಗಳ ನಂತರ ಆರಗ ಮತ್ತೊಮ್ಮೆ ಅಭಿವೃದ್ದಿಗೆ ತನ್ನನ್ನು ತಾನು ತೆರೆದುಕೊಂಡಿದೆ.
ಈ ಭಾಗದ ಪ್ರಮುಖರು ಸಂಗೀತ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ರಕ್ಷಣಾ ಇಲಾಖೆಯಲ್ಲಿ,ನ್ಯಾಯಾಂಗ ಇಲಾಖೆಯಲ್ಲಿ, ರಾಜಕೀಯವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.

ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಆರಗ ಮಾರಿಕಾಂಬಾ ಜಾತ್ರೆಯು ಪರಂಪರಾನುಗತವಾಗಿ ಆಚರಿಸುತ್ತಾ ಬಂದಿದ್ದು, ಮಾ.26ರ ಮಂಗಳವಾರ ಮತ್ತು ಬುಧವಾರ ವಿಜೃಂಭಣೆಯಿಂದ ಜರುಗಲಿದೆ. ಮಾರ್ಚ್ 26ರ ಮಂಗಳವಾರ ರಾತ್ರಿ ಮಾರಿಕಾಂಬಾ ದೇವಸ್ಥಾನದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿದ್ದು ,ಬುಧವಾರ ಮಾರಿಕಾಂಬ ಜಾತ್ರೆ ಜರುಗಲಿದ್ದು ಬುಧವಾರ ಸಂಜೆ 4 ಗಂಟೆಗೆ ಆರಗದ ಮುಖ್ಯ ರಸ್ತೆಯಲ್ಲಿ ವಿಜೃಂಭಣೆಯ ಮೆರವಣಿಗೆಯ ಮೂಲಕ ಗೊಂಬೆಯನ್ನು ಜಯಪುರದಲ್ಲಿ ವಿಸರ್ಜಿಸಲಾಗುತ್ತದೆ. ಮಂಗಳವಾರ ರಾತ್ರಿ ಮತ್ತು ಬುಧವಾರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂರ್ಪಣಾ ಕಾರ್ಯಕ್ರಮವಿದೆ.

ಮಾರ್ಚ್ 25ರ ಸೋಮವಾರ ರಾತ್ರಿ 8:00 ಗಂಟೆಗೆ ಸರಿಯಾಗಿ ಆರಗದ ವಿಶಾಲವಾದ ಹಳೆಕೋಟೆ ಕ್ರೀಡಾಂಗಣದಲ್ಲಿ ಕಾಂತಾರ ಚಲನಚಿತ್ರ ಯಶಸ್ಸಿನ ಬೆನ್ನಿಗೆ ಸೃಷ್ಟಿಯಾದ ಶಿವದೂತ ಗುಳಿಗ ಕನ್ನಡದ ನಾಟಕ ಪ್ರದರ್ಶನಗೊಳ್ಳಲಿದೆ. ಇದು ಶಿವದೂತ ಗುಳಿಗ ನಾಟಕದ 606ನೇ ಪ್ರದರ್ಶನ. ಕಾಂತಾರದ ಗುರುವ ಪಾತ್ರಧಾರಿ ಶಿವದೂತ ಗುಳಿಗ ನಾಟಕದಲ್ಲಿ ಅಬ್ಬರಿಸಲಿದ್ದಾರೆ. ನಾಟಕದ ವೀಕ್ಷಕರಾಗಿ ಸಾವಿರಾರು ಜನರು ಸೇರುವ ನಿರೀಕ್ಷೆಯಿದ್ದು ಜಾತ್ರಾ ಸಮಿತಿಯ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ಮಾರಿಕಾಂಬೆ ಜಾತ್ರೆಯ ಯಶಸ್ಸಿಗೆ ಭಕ್ತಾದಿಗಳು ಸಹಕರಿಸಲು ಜಾತ್ರಾ ಸಮಿತಿ ಕೋರಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.