ಮೇಲಿನ ಕುರುವಳ್ಳಿ ಶಾಲೆಗೆ ಹೊಸ ಕಳೆ..!
– ಶಾಲಾ ನೂತನ ವಿವೇಕ ಕೊಠಡಿ, ಮುಖ ಮಂಟಪ ಉದ್ಘಾಟನೆ
– ಚಿಣ್ಣರ ಚಿಲಿಪಿಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆ
– ಫೆ. 24ರ ಸಂಜೆ 4:30ಕ್ಕೆ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ಜಿಲ್ಲಾ ಪಂಚಾಯತ್ ಶಿವಮೊಗ್ಗ, ತಾಲೂಕು ಪಂಚಾಯತ್ ತೀರ್ಥಹಳ್ಳಿ, ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ, ಗ್ರಾಮ ಪಂಚಾಯಿತಿ ಮೇಲಿನ ಕುರುವಳ್ಳಿ, ಸಮೂಹ ಸಂಪನ್ಮೂಲ ಕೇಂದ್ರ ಮೇಲಿನ ಕುರುವಳ್ಳಿ ಸಹಯೋಗದಲ್ಲಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೇಲಿನ ಕುರುವಳ್ಳಿಯಲ್ಲಿ ಶಾಲಾ ನೂತನ ವಿವೇಕ ಕೊಠಡಿ ಹಾಗೂ ಮುಖ ಮಂಟಪ ಉದ್ಘಾಟನೆ, ಅಭಿನಂದನಾ ಮತ್ತು ಚಿಣ್ಣರ ಚಿಲಿಪಿಲಿ ಸಾಂಸ್ಕೃತಿಕ ಕಾರ್ಯಕ್ರಮವು 24-02-2024 ರ ಶನಿವಾರ ಸಂಜೆ 4:30ಕ್ಕೆ ಮೇಲಿನ ಕುರುವಳ್ಳಿ ಶಾಲಾ ಆವರಣದಲ್ಲಿ ನಡೆಯಲಿದೆ. ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್ ವಿ ಮಂಜುನಾಥ್ ಅವರು ಮಾತನಾಡಿ,ಸರ್ಕಾರದ ವಿದ್ಯಾರ್ಥಿ ಕೇಂದ್ರದಿಂದ ಅನೇಕ ಯೋಜನೆಯಿಂದ ಇಂದು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಕಾಣಬಹುದು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಅವರು ಈ ಶಾಲೆಯನ್ನು ಭೌತಿಕವಾಗಿ ಒಂದು ಮಾದರಿ ಶಾಲೆಯನ್ನಾಗಿಸಬೇಕು, ಇಲ್ಲಿ ಓದಿರುವಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಗುರುತಿಸುವಂತಹ ಆಗಬೇಕು ಎಂಬುದು ಅವರ ಕನಸಾಗಿತ್ತು.
ಶಾಲೆಯ ಕನಸಿನ ಸಹಕಾರಕ್ಕಾಗಿ ಶ್ರಮ ವಹಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ನಾಡಿನ ಭವ್ಯ ಇತಿಹಾಸ ಮತ್ತು ಐತಿಹಾಸಿಕ ಮತ್ತು ಪರಂಪರೆಯನ್ನು ಬಿಂಬಿಸುವಂತಹ ಗೋಡೆ ಬರಹವನ್ನು ಬರೆಸಿ ಸುಂದರಗೊಳಿಸಿ ಕೊಟ್ಟಿದ್ದಾರೆ. ಇಡೀ ಶಾಲೆಗೆ ಸುಣ್ಣಬಣ್ಣ ಮಾಡಿಸಿಕೊಟ್ಟಿದ್ದಾರೆ, ಇಂಟರ್ಲಾಕ್ ಹಾಕಿಸಿದ್ದಾರೆ, ಮುಖ ಮಂಟಪವನ್ನು ಮಾಡಿಸಿ ಶಾಲೆಯ ಸೌಂದರ್ಯ ಹೆಚ್ಚಿಸಿದ್ದಾರೆ, ಅವರ ಸ್ವಂತ ದುಡಿಮೆಯಿಂದ ಶಾಲೆಗೆ ರಂಗಮಂದಿರಕ್ಕೆ ಸಹಕರಿಸಿದ್ದಾರೆ. ಮಹಾನ್ ವ್ಯಕ್ತಿಗಳ ವಿಗ್ರಹಗಳನ್ನು ಶಾಲೆಯಲ್ಲಿ ಸ್ಥಾಪಿಸಿದ್ದಾರೆ. ಈ ರೀತಿಯ ಕ್ರಿಯಾಶೀಲ ಅಧ್ಯಕ್ಷರು ಸರ್ಕಾರಿ ಶಾಲೆಯಲ್ಲಿ ಇದ್ದರೆ ಯಾವ ರೀತಿ ಭೌತಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಬಹುದು ಎನ್ನುವುದಕ್ಕೆ ಮಾದರಿಯಾಗುತ್ತಾರೆ ಎಂದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಶೇಟ್ ಅವರು ಮಾತನಾಡಿ ನಾನು ಇದೇ ಶಾಲೆಯಲ್ಲಿ ಓದಿದ್ದು. ನಾನು ಓದಿದ ಶಾಲೆಗೆ ಏನಾದರೂ ಅಭಿವೃದ್ಧಿ ಕಾರ್ಯ ಮಾಡಬೇಕೆಂದು ನನ್ನ ಸ್ನೇಹಿತರ ಸಹಾಯದೊಂದಿಗೆ ಶಾಲೆಯನ್ನು ಅಭಿವೃದ್ಧಿ ಮಾಡಲು ಸಹಕರಿಸಿದ್ದೇವೆ. ಈ ಕಾರ್ಯಕ್ರಮವನ್ನು ಮಾಡಲು ನಮಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಹೆಚ್ಚಿನ ಸಹಕಾರವನ್ನು ನೀಡಿದ್ದಾರೆ ಎಂದರು.
ಶಿಕ್ಷಕಿ ವೀಣಾ ಅವರು ಮಾತನಾಡಿ, ನಮ್ಮ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಹಿರಿಯ ವಿದ್ಯಾರ್ಥಿಯಾಗಿ ಪೋಷಕರಾಗಿ ಸುರೇಶ್ ಶೇಟ್ ಅವರು ಕಾರ್ಯ ನಿರ್ವಹಿಸಿದ್ದಾರೆ. ಶಾಲೆಯ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ ಎಂದರು. ಶಾಲಾ ನೂತನ ವಿವೇಕ ಕೊಠಡಿ ಹಾಗೂ ಮುಖ ಮಂಟಪ ಉದ್ಘಾಟನೆ ಅಭಿನಂದನ ಮತ್ತು ಚಿಣ್ಣರ ಚಿಲಿಪಿಲಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಹಾಗೂ ಯೋಜನೆ ಮತ್ತು ಸಾಂಕೀಕ ಇಲಾಖೆ ಸಚಿವರಾದ ಡಿ ಸುಧಾಕರ್ ಅವರು ನಡೆಸಿಕೊಡಲಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಂಸದ ಬಿ ವೈ ರಾಘವೇಂದ್ರ,ಶಾಸಕರಾದ ಬಿ ಕೆ ಸಂಗಮೇಶ್, ಗೋಪಾಲಕೃಷ್ಣ ಬೇಳೂರು, ಎಸ್ ಎಲ್ ಭೋಜೇಗೌಡ, ಎಸ್ ರುದ್ರೇಗೌಡರು, ಭಾರತೀ ಶೆಟ್ಟಿ, ಡಿಎಸ್ ಅರುಣ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ , ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಡಾ. ಆರ್‌ಎಂ ಮಂಜುನಾಥ್ ಗೌಡ್ರು, ಆರಕ್ಷಕ ಉಪಾದಿಕ್ಷಕರು ಗಜಾನನ ವಾಮನ ಸುತಾರ, ಪಂ ರಾ ಇ ಉ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು ಅಣ್ಣಪ್ಪ ಹೆಚ್ಎ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮಾಲತಿ ದಿನೇಶ್ ಆಗಮಿಸಲಿದ್ದಾರೆ. ಶಾಲಾ ಅಭಿವೃದ್ಧಿಗೆ ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವಂತೆ ಶಾಲಾ ಶಿಕ್ಷಕ ವೃಂದ ಮತ್ತು ಅಭಿವೃದ್ಧಿ ಸಮಿತಿ ಸರ್ವರನ್ನು ಸ್ವಾಗತಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಮಂಜುನಾಥ್ ಹೆಚ್ ವಿ, ಶಿಕ್ಷಕರಾದ ವೀಣಾ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಶೇಟ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಂಡೆ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯ ಗೋಪಾಲ್ ಪೂಜಾರಿ ಹಾಗೂ ಎಸ್ ಡಿ ಎಂ ಸಿ ಉಪಾಧ್ಯಕ್ಷರು,ಸದಸ್ಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
